12ರ0ದು- 20 ಸಾವಿರ ಯೋಗಪಟುಗಳಿ0ದ ತಾಲೀಮು

252
Share

 

ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರು ಯೋಗ ಫೆಡರೇಶನ್ ವತಿಯಿಂದ ಮೈಸೂರಿನಲ್ಲಿ ನಡೆಯುತ್ತಿರುವ ಬೃಹತ್ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಆಗಮಿಸಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿ ಪ್ರಾಯೋಗಿಕ ಯೋಗಾಭ್ಯಾಸ ಕಾರ್ಯಕ್ರಮ ಮಾಡಲು ನಿರ್ದರಿಸಲಾಗಿದೆ.
ದಿನಾಂಕ 12.06.2022ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮೈಸೂರು ಅರಮನೆ ಆವರಣದಲ್ಲಿ ಸುಮಾರು 20 ಸಾವಿರ ಯೋಗಪಟುಗಳು ಭಾಗವಹಿಸಿ ಏಕಕಾಲದಲ್ಲಿ ಯೋಗಾಭ್ಯಾಸವನ್ನು ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಗದ್ಗುರು ಶ್ರೀ ದೇಶಿಕೇಂದ್ರ ಮಹಾಸ್ವಾಮೀಜಿ ರವರು ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸಟಟ್ಯೂಟ್ ಆಫ್ ಯೊಗದ ಮುಖ್ಯಸ್ಥರಾದ ಶ್ರೀ ಐ.ವಿ.ಬಸವರಡ್ಡಿ ರವರು ಆಗಮಿಸಲಿದ್ದಾರೆ. ಈ ಯೋಗಾಭ್ಯಸದಲ್ಲಿ ಭಾಗವಹಹಿಸುತ್ತಿರುವ ಎಸ್.ಎಸ್.ಎಲ್.ಸಿ ಯಲ್ಲಿ 625 ಕ್ಕೆ 625 ಅಂಕ ಪಡೆದಿರುವ ವಿಧ್ಯಾರ್ಥಿಗಳಿಗೆ ಸನ್ಮಾನಿಸಲಿದೆ. ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಸ್ಥಳ : ಅರಮನೆ ಆವರಣ
ಸಮಯ : ಬೆಳಗ್ಗೆ 6 ಗಂಟೆಗೆ
ದಿನಾಂಕ : 12.06.2022


Share