ಪೊಗರು ಚಿತ್ರ ಹಾಗೂ ಚಲನಚಿತ್ರ ಸೆನ್ಸಾರ್ ಮಂಡಳಿ ವಿರುದ್ಧ ಬ್ರಾಹ್ಮಣ ಸಂಘಟನೆಗಳ ಪ್ರತಿಭಟನೆ

778
Share

 

ಪೊಗರು ಚಿತ್ರ ಹಾಗೂ ಚಲನಚಿತ್ರ ಸೆನ್ಸಾರ್ ಮಂಡಳಿ ವಿರುದ್ಧ ಬ್ರಾಹ್ಮಣ ಸಂಘಟನೆಗಳ ಪ್ರತಿಭಟನೆ

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರಿನ ಅಭಿಪ್ರಾಯ ಸಂಘ ಸಂಸ್ಥೆಗಳ ವತಿಯಿಂದ ಡಿಸಿ ಕಚೇರಿ ಮುಂಭಾಗ 200ಕ್ಕೂ ಹೆಚ್ಚು ವಿಪ್ರ ಸಮುದಾಯದ ಮುಖಂಡರುಗಳು ನೆಮ್ಮದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್
ವಿಷಯ: ಪೊಗರು ಕನ್ನಡ ಚಿತ್ರದಲ್ಲಿ ಬ್ರಾಹ್ಮಣ ಜನಾಂಗದ ಆಚರಣೆ ಸ್ವಾತಂತ್ರ್ಯತೆ ಧಾರ್ಮಿಕತೆ ಭಾವನೆಗೆ ಧಕ್ಕೆ ತಂದ ಅರ್ಚಕರ ಪುರೋಹಿತರ ಮೇಲಿನ ಅವಹೇಳನ ದೌರ್ಜನ್ಯ ದೃಶ್ಯದ ತುಣಕಗಳು ಸಂಭಾಷಣೆಗಳು ಚಿತ್ರಿಕರಿಸಿದ ಪೊಗರು ಚಿತ್ರ ತಂಡ ಮತ್ತು ಅನುಮತಿ ನೀಡಿದ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಬ್ರಾಹ್ಮಣ ಸಮುದಾಯ ಆಗ್ರಹಿಸುತ್ತಿರುವ ಬಗ್ಗೆ

ಈ ಮೇಲ್ಕಂಡ ವಿಷಯಕ್ಕೆ ಸಂಭದಿಸಿದಂತೆ ಸಾವಿರ ವರ್ಷಗಳ ಹಿಂದೆ ನೋಡುವದಾದರೆ ಮಹಾಭಾರತ ರಾಮಾಯಣ ಇತಿಹಾಸ ನಡೆದ ಪ್ರಾರಂಭಿಕ ದಿನಗಳು, ರಾಜರ ಆಳ್ವಿಕೆಯಿಂದ ಪ್ರಸ್ತುತ ಮುಜರಾಯಿ ಇಲಾಖೆಯ ಪ್ರಕಾರ ಮಠಗಳಲ್ಲಿ ಗುಡಿಗೋಪುರ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುವ ಪರೋಹಿತರ ಅರ್ಚಕರ ಸೇವೆ ಅಪಾರ ಪುರೋಹಿತರ ಅರ್ಚಕರ ಅಸ್ಥಿತ್ವ ಪೌರೋಹಿತ್ಯ ವಿಧಿವಿಧಾನ ಬಗ್ಗೆ ಉಲ್ಲೇಖವಿರುವುದು ತಿಳಿದಿದೆ, ಸರ್ವೇ ಜನಃ ಸುಖಿನೋ ಭವಂತು ಲೋಕ ಸಮಸ್ತಾ ಸುಖಿನೋ ಭವಂತು ಎಲ್ಲರ ಹಿತಕ್ಕಾಗಿ ಪ್ರಾರ್ಥಿಸುವ ದೇವರ ಪೂಜಾಕೈಂಕರ್ಯದಲ್ಲಿ ತಮ್ಮ ಪಾಡಿಗೆ ತಾವು ಕಾರ್ಯ ನಿರ್ವಹಿಸುತ್ತಿರುವ ಅರ್ಚಕರ ಪುರೋಹಿತರ ನಡತೆಯ ಬಗ್ಗೆ ನಂದಕಿಶೋರ ನಿರ್ದೇಶನದ ಕನ್ನಡದ ಪೊಗರು ಚಿತ್ರದಲ್ಲಿ ನಮ್ಮ ಬ್ರಾಹ್ಮಣರ ಆಚರಣೆ ನಂಬಿಕೆಯ ಪ್ರತೀಕವಾದ ಜನಿವಾರದ ಮೇಲೆ ಕಾಲಿಡುವುದು ದೌರ್ಜನ್ಯದ ದಬ್ಬಾಳಿಕೆಯ ದೃಶ್ಯದ ತುಣುಕಗಳು ಸಂಭಾಷಣೆಗಳು ಶಾಂತಿಯುತ ವಾತವರಣದಲ್ಲಿ ಸೌಹಾರ್ದತೆ ಕೆದಡಿ ಅಹಿಂಸಾ ಮಾರ್ಗಕ್ಕೆ ಪೊಗರು ಚಿತ್ರ ಕಾರಣವಾಗಿದೆ,

ಕರ್ನಾಟಕದಲ್ಲಿ 50ವರುಷಗಳ ಹಿಂದೆ ನೋಡುವದಾದರೆ ಪೌರಾಣಿಕ ಧಾರ್ಮಿಕ ನಾಟಕಗಳ ನಂತರ ಕನ್ನಡಚಿತ್ರಗಳೆಂದರೆ ಮನೆಮಂದಿಯೆಲ್ಲಾ ನೋಡುವ ಸಾಮಾಜಿಕ ಬದಲಾವಣೆ ಸಂದೇಶ ಸಂಸ್ಕಾರಯುತ ಚಿತ್ರವಾಗಿತ್ತು, ಅದಕ್ಕೆ ಮಾದರಿ: ನಟಸಾರ್ವಭೌಮ ಡಾ‌.ರಾಜ್ ಕುಮಾರ್ ರವರು ಮತ್ತು ಸಾಹಸಿಂಹ ಡಾ. ವಿಷ್ಣುವರ್ಧನ್ ರವರ ನಟನೆಯ ಚಿತ್ರಗಳು ಇಂದಿಗೂ ಮಾದರಿ, ಪ್ರತಿಯೊಂದು ಪಾತ್ರಗಳು ಸಹ ಸಮಾಜದಲ್ಲಿ ಜನಸಾಮನ್ಯರ ಕರ್ತವ್ಯಗಳು ಸತ್ಯಮಾರ್ಗವನ್ನು ಬಿಂಬಿಸುತ್ತಿದ್ದವು, ಪ್ರತಿಯೊಬ್ಬರ ಜೀವನದ ನಡವಳಿಕೆಗಳಿಗೆ ಚಿತ್ರಗಳು ದಾರಿದೀಪವಾಗುತ್ತಿದ್ದವು, ಎಲ್ಲರನ್ನು ಗೌರವಿಸುವ ಅಂಶಗಳಿದ್ದವು, ಆದರೆ ಇತ್ತೀಚಿನ ದಿನದಲ್ಲಿ ಚಿತ್ರಗಳು ತೆರೆಕಾಣಲು ಅನುಮತಿ ನೀಡುತ್ತಿರುವ ಸೆನ್ಸಾರ್ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಸಂಭಂದಪಟ್ಟ ಅಧಿಕಾರಿಗಳು ತಮ್ಮ ಕಾರ್ಯಲೋಪದಿಂದಾಗಿ ಭ್ರಷ್ಟಾಚಾರದ ದುರಾಸೆಯಿಂದ ಶಿಷ್ಟಾಚಾರ ಉಲ್ಲಂಘಿಸಿ ಸಮಾಜದ ಶಾಂತಿ ಕೆದಡುವ ಚಿತ್ರಗಳಿಗೆ ಅವಕಾಶ ಕಲ್ಪಿಸುತ್ತಿರವುದು ಎಷ್ಟರ ಮಟ್ಟಿಗೆ ಸರಿ?? ಇದರ ಕಡೆ ಸರ್ಕಾರ ಗಮನ ಹರಿಸಿ ಇದರ ಬಗ್ಗೆ ಸೂಕ್ತ ತನಿಖೆ ಮಾಡಲು ಆದೇಶಿಸಬೇಕಿದೆ, ಶಾಂತಿ ಕೆದಡಲು ಕಾರಣಕರ್ತರಾದ ಪೊಗರು ಚಿತ್ರಕ್ಕೆ ಅನುಮತಿ ನೀಡಿದ ಅಧಿಕಾರಿಗಳನ್ನ ಈ ಕೂಡಲೇ ಅಮಾನತು ಮಾಡಬೇಕು, ಹಾಗೂ ಹಾಗೂ ಸಮಾಜದಲ್ಲಿ ಅರ್ಚಕರ ನಡವಳಿಕೆಯ ಬಗ್ಗೆ ಪೊಗರು ಚಿತ್ರದಲ್ಲಿ ತಪ್ಪು ಭವಾನೆ ತರಲು ಕಾರಣರಾಗಿರುವ ದೃಶ್ಯಗಳನ್ನ ಸಂಭಾಷಣೆಯನ್ನ ಈ ಕೂಡಲೇ ರದ್ದುಗೊಳಿಸಿ ನಂತರವಷ್ಟೆ ಬಿಡುಗಡೆ ಮಾಡಬೇಕು ಅರ್ಚಕರು ಪುರೋಹಿತರ ಭಾವನೆಗೆ ಧಕ್ಕೆ ತಂದ ಸೆನ್ಸಾರ್ ಮಂಡಳಿಯ ಬೇಜಬ್ದಾರಿತನದ ಅಧಿಕಾರಿಗಳು ಮತ್ತು ಪೊಗರು ಚಿತ್ರತಂಡದ ನಿರ್ಮಾಪಕ ನಿರ್ದೇಶಕನ ವಿರುದ್ಧ ಕ್ರಕೈಗೊಂಡು ನ್ಯಾಯ ಒದಗಿಸಬೇಕೆಂದು ಬ್ರಾಹ್ಮಣ ಸಮುದಾಯದ ಪರವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದಿಂದ ಆಗ್ರಹಿಸುತ್ತೇವೆ
ಪೊಗರು ಚಿತ್ರತಂಡ ಮತ್ತು ಸೆನ್ಸಾರ್ ಮಂಡಳಿಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಮನವಿಯನ್ನ ಮೈಸೂರು ಜಿಲ್ಲಾಧಿಕಾರಿಗಳ ಮುಖೇನವಾಗಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ಸಿಸಿ ಪಾಟೀಲ್ ರವರಿಗೆ, ಮುಜರಾಯಿ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ರವರಿಗೆ,
ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ‌ ಆಯುಕ್ತರಿಗೆ ಮತ್ತು ಪ್ರೆಸ್ ಇನ್ಪರ್ಮೇಷನ್ ಬ್ಯೂರೋ
ಕೇಂದ್ರಿಯ ಸದನಕ್ಕೆ ಮನವಿ ಸಲ್ಲಿಸಲಾಯಿತು,

ಪ್ರತಿಭಟನೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ವಿವಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಬ್ರಾಹ್ಮಣ ಸಮಾಜದ ಮುಖಂಡರಾದ ನ೦ ಶ್ರೀಕಂಠ ಕುಮಾರ್ ,ಸಿ ವಿ ಪಾರ್ಥಸಾರಥಿ ,
ಶ್ರೀ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳಿ ಎಂ ಕೆ ಪುರಾಣಿಕ್ ,ಪಿ ವಿ ನಾಗೇಶ್ ,ಮೋಹನ್, ರಾಮ್ ದಾಸ್, ಗ್ರಾಮಾಂತರ ಅಧ್ಯಕ್ಷ ರಾದ ಗೋಪಾಲ್ ರಾವ್ ,ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಎಂ ಸಿ ರಮೇಶ್,ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ ,ಸಂಘಟನೆಯ ಮುಳ್ಳೂರು ಗುರುಪ್ರಸಾದ್ ,ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,
ಅಜಯ್ ಶಾಸ್ತ್ರಿ, ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,
ಅಪೂರ್ವ ಸುರೇಶ್ ,ಪ್ರಶಾಂತ್ ,ಗುರುಪ್ರಸಾದ್ ,ಸುಮಂತ್ ಶಾಸ್ತ್ರಿ ,ಜಯಸಿಂಹ, ರಂಗನಾಥ್, ಜ್ಯೋತಿ, ಲತಾ ಮೋಹನ್ ,ಪುಟ್ಟಸ್ವಾಮಿ , ರಾಜಗೋಪಾಲ್ ,ಕೆಎಂ ನಿಶಾಂತ್ ,ಗಣೇಶ್ ಪ್ರಸಾದ್ ,ವೆಂಕಟೇಶ್, ಶ್ರೀನಿವಾಸ್ ಭಾಷ್ಯಂ ,ಹೂಮ್ಮೆ ಮಂಜುನಾಥ್, ವಿಜಯಕುಮಾರ್ ,ಮುಳ್ಳೂರು ಸುರೇಶ್ ,ರಾಕೇಶ್ ಭಟ್ ,ಸುಚಿಂದ್ರ ,ಚಕ್ರಪಾಣಿ, ಹಾಗೂ ಬ್ರಾಹ್ಮಣ ವಿವಿಧ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು


Share