3-ನೇ, ಬಾರಿ ಕುಸಿದ ಚಾಮುಂಡಿಬೆಟ್ಟದ ನಂದಿ ರಸ್ತೆ

228
Share

ಸಾಂದರ್ಭಿಕ ಚಿತ್ರ

ಮೈಸೂರು, 5 ಪಶ್ಚಿಮ ಘಟ್ಟದ ಬೆಟ್ಟ ಗುಡ್ಡದ ಸಾಲಿನಲ್ಲಿ ಆಗಾಗ್ಗೆ ಭಾರೀ ಮಳೆಯಿಂದ ರಸ್ತೆ ಕುಸಿದು ಸಂಚಾರಕ್ಕೆ ಅಡ್ಡಿ ಆಗುವುದು ಸರ್ವೇಸಾಮಾನ್ಯ ಕೇಳಿದ್ದೇವೆ, ಆದರೆ ಇದೀಗ ಚಾಮುಂಡಿಬೆಟ್ಟಕ್ಕೂ ಇಂಥದೇ ಪರಿಸ್ಥಿತಿ ಉಂಟಾಗಿರುವುದು ಬಹಳ ಆತಂಕಕಾರಿಯಾಗಿದೆ.
ಕಳೆದ 8-10 ದಿನಗಳಿಂದೀಚೆಗೆ 2ಬಾರಿ ನಂದಿ ಬಳಿ ಚಾಮುಂಡಿಬೆಟ್ಟದ ರಸ್ತೆ ಕುಸಿದಿದ್ದು ಇಂದು ಮುಂಜಾನೆ ಭಾರೀ ಮಳೆಯಿಂದಾಗಿ ಬಹುತೇಕ ರಸ್ತೆ ಸಂಪೂರ್ಣ ಕುಸಿದಿರುವುದಾಗಿ ಹೇಳಲಾಗಿದೆ.
ನಂದಿ ಬಳಿ ಈಗಾಗಲೇ ಬಿಗಿ ಕಾವಲು ಹಾಕಿ ಯಾರನ್ನೂ ಓಡಾಡಲು ಬಿಡುತ್ತಿಲ್ಲವಾದರೂ ಇಂದು ಮುಂಜಾನೆ ಸುರಿದ ಮಳೆಯಿಂದಾಗಿ ಭಾರೀ ಹಾನಿಯಾಗಿದೆ ಇದು ಮುಂದುವರೆಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ 2-3ದಿನಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ.


Share