MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 179

240
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 179

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

966 . ಓಂ ತ್ರಿಷಷ್ಟ್ಯಕ್ಷರ ಸಂಶ್ರಯಃ
967 . ಓಂ ಚತುಷ್ಷಷ್ಟ್ಯರ್ಣನಿರ್ಣೇತ್ರೇ ನಮಃ
968 . ಓಂ ಚತುಷ್ಷಷ್ಟಿಕಲಾನಿಧಯೇ ನಮಃ
969 . ಓಂ ಚತುಷ್ಷಷ್ಟಿಮಹಾಯೋಗಿನೀವೃಂದವಂದಿತಾಯ ನಮಃ
970 . ಓಂ ಅಷ್ಟಷಷ್ಟಿಮಹಾತೀರ್ಥಕ್ಷೇತ್ರಭೈರವಭಾವನಾಯ ನಮಃ

966. ಓಂ ತ್ರಿಷಷ್ಟ್ಯಕ್ಷರ ಸಂಶ್ರಯಃ
967. ಓಂ ಚತುಷ್ಷಷ್ಟ್ಯರ್ಣನಿರ್ಣೇತಾ
968. ಓಂ ಚತುಷ್ಷಷ್ಟಿಕಲಾನಿಧಿಃ
ಭಾ: ತ್ರಿಷಷ್ಟಿಶ್ಚತುಷ್ಷಷ್ಟಿರ್ವಾ ವರ್ಣಾಶ್ಶಂಭುಮತೇ ಮತಾಃ೤
ಕಲಾ ಅಪಿ ಚತುಷ್ಷಷ್ಟಿಃ ಪ್ರಸಿದ್ಧಾಸ್ತತ್ಸಮಾಶ್ರಯಃ೤೤
ತನ್ನಿರ್ಣೇತಾ ತತ್ಖನಿಸ್ತ್ವಂ ತ್ರಿಷಷ್ಟ್ಯಕ್ಷರಸಂಶ್ರಯಃ೤
ಚತುಷ್ಷಷ್ಟ್ಯರ್ಣನಿರ್ಣೇತಾ ಚತುಷ್ಷಷ್ಟಿಕಲಾನಿಧಿಃ೤೤
ಶಿವಮತಾನುಸಾರವಾಗಿ ಅಕ್ಷರಗಳು ತಮ್ಮ ತಮ್ಮ ಸೂಕ್ಷ್ಮ ವಿಭಾಗಗಳಿಂದ ಅರವತ್ತಮೂರು ಅಕ್ಷರಗಳಾಗುತ್ತವೆ. ಗಣೇಶನು ಆ ಅಕ್ಷರಗಳಿಗೆ ಆಶ್ರಯನಾಗಿದ್ದಾನೆ. ಆದ್ದರಿಂದ ತ್ರಿಷಷ್ಟ್ಯಕ್ಷರಸಂಶ್ರಯನು.
ಓಂ ತ್ರಿಷಷ್ಟ್ಯಕ್ಷರಸಂಶ್ರಯಾಯ ನಮಃ

ಅಕ್ಷರಗಳು ಸೂಕ್ಷ್ಮ ವಿಭಾಗದಿಂದ ಅರವತ್ನಾಲ್ಕು ಅಕ್ಷರಗಳಾಗುತ್ತವೆ. ಅವುಗಳ ವಿಭಾಗವನ್ನು ನಿರ್ಣಯಿಸುವವನು ಗಣೇಶನೇ ಆದ್ದರಿಂದ ಅವನು ಚತುಷ್ಷಷ್ಟ್ಯರ್ಣನಿರ್ಣೇತನು.
ಓಂ ಚತುಷ್ಷಷ್ಟ್ಯರ್ಣನಿರ್ಣೇತ್ರೇ ನಮಃ

ಗಣೇಶನು ಅರವತ್ನಾಲ್ಕು ಕಲೆಗಳ ನಿಧಿಯಾಗಿದ್ದಾನೆ. ಆದ್ದರಿಂದ ಚತುಷ್ಷಷ್ಟಿಕಲಾನಿಧಿಯು.
ಓಂ ಚತುಷ್ಷಷ್ಟಿಕಲಾನಿಧಯೇ ನಮಃ

(ಚತುಷ್ಷಷ್ಟಿ ಕಲೆಗಳಂದರೆ ಚತುಷ್ಷಷ್ಟಿ ವಿದ್ಯೆಗಳೆಂದರ್ಥ. ಅವುಗಳ ಹೆಸರುಗಳು ಹೀಗಿವೆ-
1. ಗೀತ, 2. ವಾದ್ಯ, 3. ನೃತ್ಯ, 4. ಆಲೇಖ್ಯ, 5. ವಿಶೇಷಕಚ್ಛೇದ್ಯ, 6. ತಂಡುಲಕುಸುಮ ಬಲಿವಿಕಾರ 7. ಪುಷ್ಪಾಸ್ತರಣ 8. ದಶನವಸನಾಂಗರಾಗ 9. ಮಣಿಭೂಮಿಕಾಕರ್ಮ, 10. ಶಯನರಚನ 11. ಉದಕವಾದ್ಯ, 12. ಉದಕಾಘಾತ 13. ಚಿತ್ರಯೋಗ 14. ಮಾಲ್ಯಗ್ರಥನವಿಕಲ್ಪ 15. ಶೇಖರಕಾಪೀಡ ಯೋಜನ 16. ನೇಪಥ್ಯಪ್ರಯೋಗ 17. ಕರ್ಣಪತ್ರಭಂಗ 18. ಗಂಧಯುಕ್ತಿ 19. ಭೂಷಣಯೋಜನ 20. ಐಂದ್ರಜಾಲ, ಕೌಚುಮಾರ ಯೋಗ 21. ಹಸ್ತಲಾಘವ 22. ವಿಚಿತ್ರಶಾಕಯೂಷ ಭಕ್ಷ್ಯವಿಕಾರಕ್ರಿಯ 23. ಪಾನಕ ರಸರಾಗಾಸವ ಯೋಜನ 24. ಸೂಚೀವಾನಕರ್ಮ 25. ಸೂತ್ರಕ್ರೀಡಾ 26. ವೀಣಾಡಮರುಕ ವಾದ್ಯ 27. ಪ್ರಹೇಲಿಕಾ 28. ಪ್ರತಿಮಾಲಾ 29. ದುರ್ವಾಚಕಯೋಗ 30. ಪುಸ್ತಕವಾಚನ 31. ನಾಟಕಾಖ್ಯಾಯಿಕಾ ದರ್ಶನ 32. ಕಾವ್ಯಸಮಸ್ಯಾಪೂರಣ 33. ಪಟ್ಟಿಕಾವೇತ್ರವಾನವಿಕಲ್ಪ 34. ತಕ್ಷಕರ್ಮ 35. ತಕ್ಷಣ 36. ವಾಸ್ತುವಿದ್ಯಾ 37. ರೂಪ್ಯರತ್ನಪರೀಕ್ಷಾ 38. ಧಾತುವಾದ 39. ಮಣಿರಾಗಾಕಾರಜ್ಞಾನ 40. ವೃಕ್ಷಾಯುರ್ವೇದಯೋಗ 41. ಮೇಷಕುಕ್ಕುಟ ಲಾವಕಯುದ್ಧವಿಧಿ 42. ಶುಕಶಾರಿಕಾಪ್ರಲಾಪನ 43. ಉತ್ಸಾದನ, ಸಂವಾಹನ, ಕೇಶಮರ್ದನ, ಕೌಶಲ 44. ಅಕ್ಷರಮುಷ್ಟಿಕಾಕಥನ 45. ಮ್ಲೇಚ್ಛಿತವಿಕಲ್ಪ 46. ದೇಶಭಾಷಾವಿಜ್ಞಾನ 47. ಪುಷ್ಪಶಕಟಿಕಾ 48. ನಿಮಿತ್ತಜ್ಞಾನ 49. ಯಂತ್ರಮಾತೃಕಾ 50. ಧಾರಣಮಾತೃಕಾ 51. ಸಂಪಾಠ್ಯ 52. ಮಾನಸೀ 53. ಕಾವ್ಯಕ್ರಿಯಾ 54. ಅಭಿಧಾನಕೋಶ 55. ಛಂದೋಜ್ಞಾನ 56. ಕ್ರಿಯಾಕಲ್ಪ 57. ಛಲಿತಕಯೋಗ 58. ವಸ್ತ್ರಗೋಪ 59. ದ್ಯೂತವಿಶೇಷ 60. ಆಕರ್ಷಕ್ರೀಡಾ 61. ಬಾಲಕ್ರೀಡನಕ 62. ವೈನಯಿಕೀ ಜ್ಞಾನ 63. ವೈಜಯಿಕೀ ಜ್ಞಾನ 64. ವ್ಯಾಯಾಮಿಕೀ ಜ್ಞಾನ.
ಚತುಷ್ಷಷ್ಟಿ ಮಹಾಸಿದ್ಧಯೋಗಿನೀವೃಂದ ವಂದಿತಃ೤೤
969. ಓಂ ಚತುಷ್ಷಷ್ಟಿ ಮಹಾಸಿದ್ಧಯೋಗಿನೀವೃಂದ ವಂದಿತಃ-
ಭಾ: ಅಕ್ಷೋಭ್ಯಾದಿ ಚತುಷ್ಷಷ್ಟಿ ಮಿಥುನೈರ್ವಂದಿತೋ ಭವಾನ್‌೤
ಚತುಷ್ಷಷ್ಟಿ ಮಹಾಸಿದ್ಧಯೋಗಿನೀವೃಂದ ವಂದಿತಃ
ಅಕ್ಷೋಭ್ಯಾ ಮೊದಲಾದ ಅರವತ್ನಾಲ್ಕು ಮಂದಿ ದಂಪತಿಯರಿಂದ ನಮಸ್ಕರಿಸಲ್ಪಟ್ಟಿದ್ದರಿಂದ ಚತುಷ್ಷಷ್ಟಿಮಹಾಸಿದ್ಧಯೋಗಿನೀವೃಂದವಂದಿತನು. ಅಥವಾ ಅರವತ್ನಾಲ್ಕು ಯೋಗಿನೀ ಮಾತೆಯರ ಬೃಂದವು ಗಣೇಶನಿಗೆ ನಮಸ್ಕರಿಸುತ್ತಿದೆ. ಆದ್ದರಿಂದ ಅವನಿಗೆ ಈ ಹೆಸರು.
ಓಂ ಚತುಷ್ಷಷ್ಟಿಮಹಾಯೋಗಿನೀವೃಂದವಂದಿತಾಯ ನಮಃ
ಅಷ್ಟಷಷ್ಟಿಮಹಾತೀರ್ಥಕ್ಷೈತ್ರಭೈರವಭಾವನಃ೤
ಚತುರ್ನವತಿಮಂತ್ರಾತ್ಮಾ ಷಣ್ಣವತ್ಯಧಿಕ ಪ್ರಭುಃ೤೤

970. ಓಂ ಅಷ್ಟಷಷ್ಟಿಮಹಾತೀರ್ಥಕ್ಷೈತ್ರಭೈರವಭಾವನಃ-
ಭಾ: ಶೈವತೀರ್ಥಾನ್ಯಷ್ಟಷಷ್ಟಿಃ ಶ್ರೀಕಾಶೀಖಂಡಪಾದ್ಮಯೋಃ೤
ಉಕ್ತಾನಿ ತೇಷು ಕ್ಷೇತ್ರೇಷು ಭಾವಯನ್ ಭೈರವಂ ಶಿವಮ್‌೤೤
ಅಷ್ಟಷಷ್ಟಿಮಹಾತೀರ್ಥಕ್ಷೈತ್ರಭೈರವಭಾವನಃ೤
ಸ್ಕಾಂದಪುರಾಣದ ಕಾಶೀಖಂಡವು, ಪದ್ಮಪುರಾಣವು, ದೇವೀಭಾಗವತ ಮೊದಲಾದ ಗ್ರಂಥಗಳು ಅರವತ್ತೆಂಟು ಮಹಾತೀರ್ಥಕ್ಷೇತ್ರಗಳನ್ನು ಕುರಿತು ತಿಳಿಸಿವೆ. ಆ ಕ್ಷೇತ್ರಗಳಲ್ಲಿ ಶಿವನನ್ನು ಭೈರವನನ್ನಾಗಿ ಭಾವನೆ ಮಾಡುತ್ತಾ ದರ್ಶನ ಮಾಡಬೇಕು. ಹಾಗೆ ಮಾಡುವುದರಿಂದ ತೀರ್ಥಯಾತ್ರೆಯ ಫಲವು ಸಂಪೂರ್ಣವಾಗಿ ಲಭಿಸುತ್ತದೆ.
ಭೈರವ ರೂಪದಲ್ಲಿ ಭಾವಿಸಲ್ಪಡುವ ಶಿವನು ಗಣಪತಿ ಸ್ವರೂಪನೇ ಆಗಿದ್ದಾನೆ. ಆದ್ದರಿಂದ ಗಣೇಶನಿಗೆ ಅಷ್ಟಷಷ್ಟಿಮಹಾತೀರ್ಥಕ್ಷೈತ್ರಭೈರವಭಾವನ ಎಂದು ಹೆಸರು.
ಓಂ ಅಷ್ಟಷಷ್ಟಿಮಹಾತೀರ್ಥಕ್ಷೇತ್ರಭೈರವಭಾವನಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share