ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರ: ಬೆ 5 ರಿಂದ ರಾ 9 ರವರೆಗೆ ಉತ್ತರ ದ್ವಾರದರ್ಶನ

231
Share

ಮೈಸೂರು ಊಟಿ ರಸ್ತೆಯಲ್ಲಿರುವ
ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ
02-01-2023ರಂದು ಮುಂಜಾನೆ
5:00 ಯಿಂದ ರಾತ್ರಿ 9 ಗಂಟೆಯವರೆಗೆ ಉತ್ತರ ದ್ವಾರದರ್ಶನ ಏರ್ಪಡಿಸಲಾಗಿದೆ.
ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮುಂಜಾನೆ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಐದು ಗಂಟೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ಇಂದ ಸಂಜೆಯವರೆಗೆ ಹೆಚ್ಚಿನ ಜನರು ದೇವಾಲಯಕ್ಕೆ ಭೇಟಿ ನೀಡುವುದರಿಂದ ಯಾರೇ ಆದರೂ ಆಶ್ರಮದ ಹನುಮದ್ವಾರದಿಂದ ಮಾತ್ರ ಒಳ ಪ್ರವೇಶಿಸಬಹುದಾಗಿರುತ್ತದೆ. ಸರದಿಯಲ್ಲಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಾಲಯದ ಹಿಂಬದಿಯಿಂದ ಬಂದು ವೆಂಕಟೇಶ್ವರ ಸ್ವಾಮಿ ದೇವಾಲಯದ ಹಿಂಭಾಗದಿಂದ ಉತ್ತರ ದ್ವಾರ ಪ್ರವೇಶಕ್ಕೆ ಸರ್ವ ಏರ್ಪಾಡು ಮಾಡಲಾಗಿದೆ.
ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುವವರಿಗೆ ಪಾಸ್ ಮುಖಾಂತರ ಪ್ರತ್ಯೇಕ ಪ್ರವೇಶವನ್ನು ಉತ್ತರ ದ್ವಾರದ ಕಡೆಗೆ ಏರ್ಪಡಿಸಲಾಗಿದೆ.
ತೀವ್ರ ಜನಸಂದಣಿ ಇರುವ ಪ್ರಯುಕ್ತ ಅಂದು ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದ ಅಂತರಾಳದ ಪ್ರವೇಶವನ್ನು ಸಂಪೂರ್ಣ ಎಲ್ಲಾ ರೀತಿಯ ಭಕ್ತಾದಿಗಳಿಗೆ ನಿಷೇಧಿಸಿದ್ದು ಪೂಜೆಗೆ ಕಟ್ಟಿಕೊಂಡವರಿಗೆ ದೇವಾಲಯದ ಹೊರಭಾಗ ಅಂದರೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಬಳಿ ಪೂಜಾಪ್ರಸಾದ ನೀಡಲಾಗುವುದು, ಬೆಳಿಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ವಿನಿಯೋಗ ವಿರುತ್ತದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಕೋವಿಡ್ ಸೋಂಕು ತಡೆಗಟ್ಟಲು ಪ್ರತಿಯೊಬ್ಬರು ಮಾಸ್ಕ್ ಧರಿಸಲೇಬೇಕು ಎಂದು ಆಡಳಿತ ಮಂಡಳಿ ತಿಳಿಸಿದೆ. ಅಂದು ಮಧ್ಯಾಹ್ನ 1:00 ಯಿಂದ 2:00 ವರೆಗೆ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ ಒಂದು ಗಂಟೆಗಳ ಕಾಲ ವಿರಾಮ ವಿರುತ್ತದೆ. ಸಂಜೆ 7 ಗಂಟೆ ಇಂದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಭಗವದ್ಗೀತಾ ಶ್ಲೋಕದ ಪಾರಾಯಣ ಏರ್ಪಡಿಸಲಾಗಿದೆ.

Share