ಕಂದಮ್ಮನನ್ನು ಕಳೆದುಕೊಂಡ ಮಹಿಳೆ ಏಳು ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಪ್ರಾಣತ್ಯಾಗ

Share

ತಿರುವನಂತಪುರಂ: ಎದೆ ಹಾಲು ಕುಡಿಯುವಾಗ ಉಸಿರುಗಟ್ಟಿ ಸಾವನಪ್ಪಿದ ಹಸುಗೂಸನ್ನು ಮಣ್ಣು ಮಾಡಿದ 24 ಗಂಟೆಯೊಳಗೆ 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಉಪ್ಪುತಾರ ಪಂಚಾಯತ್‌ನ ಕೈತಪಾಠಲ್ ನಲ್ಲಿ ಇಂದು ಮುಂಜಾನೆ  ವರದಿಯಾಗಿದೆ.
ಲಿಜಿ (38) ಮತ್ತು ಆಕೆಯ ಮಗ ಬೆನ್ ಟಾಮ್ (7) ಈ ದುರ್ದೈವಿಗಳಾಗಿದ್ದು 28 ದಿನಗಳ ಹಸುಗೂಸನ್ನು ಕಳೆದುಕೊಂಡು ಮನನೊಂದ ಲಿಜಿ ಇಂದು ಮುಂಜಾನೆ ಮನೆಯವರೆಲ್ಲ ಚರ್ಚೆಗೆ ಹೋಗಿದ್ದ ಸಮಯದಲ್ಲಿ ಮನೆಯ ಹಿಂಭಾಗದ ಬಾವಿಗೆ ಟಾಮ್ ನೊಂದಿಗೆ ಹಾರಿ ಪ್ರಾಣ ತೆತ್ತಿದ್ದಾರೆಂದು ವರದಿ ಆಗಿದೆ.


Share