8 ತಿಂಗಳು ವಿಳಂಬವಾಗಿದ್ದ, ಬಿಬಿಎಂಪಿಯ ‘ ಸ್ಕೂಲ್ ಆನ್ ವೀಲ್ಸ್ ‘ ಯೋಜನೆ ದಸರಾ ನಂತರ ಆರಂಭ

274
Share

ಈ ವರ್ಷದ ಆರಂಭ ಫೆಬ್ರವರಿಯಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದ, ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಸ್ಕೂಲ್ ಆನ್ ವೀಲ್ಸ್ ಸ್ಕೀಮ್ ( ಚಕ್ರಗಳ ಮೇಲೆ ಶಾಲೆ ) ಅನ್ನು ದಸರಾ ನಂತರ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ನವೀಕರಿಸಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಸುಗಳಲ್ಲಿ ಶಿಕ್ಷಣ ನೀಡಲು ವಿನ್ಯಾಸಗೊಳಿಸಲಾಗಿರುವ ಈ ಯೋಜನೆ ಅಂತಿಮ ಹಂತದ ಅನುಷ್ಠಾನದಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
“ಯೋಜನೆಗಾಗಿ ಸಿದ್ಧಪಡಿಸಲಾದ ಬಸ್‌ಗಳ ಮೂಲಮಾದರಿಯ ಎಲ್ಲಾ ಪರಿಶೀಲನೆ ಪೂರ್ಣಗೊಂಡಿದ್ದೂ, ಮಾಂಟೆಸ್ಸರಿ ಶೈಲಿಯಲ್ಲಿ ಶಿಕ್ಷಣವನ್ನು ನೀಡಲು ಸಹಾಯ ಮಾಡಲು ಪ್ರತಿ ಎನ್‌ಜಿಒ ಪ್ರತಿನಿಧಿಯಿಂದ ಶಿಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ನಿಯೋಜಿಸಲಾಗುವುದು” ಎಂದು ಅಧಿಕಾರಿ ಹೇಳಿದ್ದಾರೆ.
ಏತನ್ಮಧ್ಯೆ, ಬಿಬಿಎಂಪಿಯ ಸಹಾಯಕ ಆಯುಕ್ತ (ಶಿಕ್ಷಣ) ಉಮೇಶ ಬಿ ಎಸ್, ಮಕ್ಕಳ ಶಿಕ್ಷಣ ಸ್ಥಿತಿಯನ್ನು ಗುರುತಿಸಲು ಎಲ್ಲಾ ಎಂಟು ವಲಯಗಳಲ್ಲಿ 30 ಲಕ್ಷ ಕುಟುಂಬಗಳನ್ನು ಒಳಗೊಂಡ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಹೇಳಿದರು. “ಯೋಜನೆಯ ಅನುಷ್ಠಾನವನ್ನು ಪ್ರಾರಂಭಿಸುವ ವಾರ್ಡ್‌ಗಳನ್ನು ಈ ಸಮೀಕ್ಷೆಯ ಆಧಾರದ ಮೇಲೆ ಗುರುತಿಸಲಾಗುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ, ಕೊಳೆಗೇರಿಗಳು ಮತ್ತು ವಲಸೆ ಕಾರ್ಮಿಕರ ವಸಾಹತುಗಳನ್ನು ಹೊಂದಿರುವ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಮನೆ ಮನೆ ಸಮೀಕ್ಷೆಯನ್ನು ಕೈಗೊಳ್ಳಲಾಯಿತು. ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ಪ್ರಯೋಜನಗಳನ್ನು ವಿಸ್ತರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಒಂದು ಯೋಜನೆಯನ್ನು ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ ನಂತರ ಸಮೀಕ್ಷೆಯನ್ನು ನಡೆಸಲಾಯಿತು ಎಂದು ತಿಳಿಸಿದ್ದಾರೆ.


Share