MP-ಗಾನಸಿರಿ ವರಮಹಾಲಕ್ಷ್ಮಿ ಹಬ್ಬ ವಿಶೇಷ ಕಾರ್ಯಕ್ರಮ

583
Share

 

ಮೈಸೂರು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಶ್ರೀಮತಿ ವಿಜಯಲಕ್ಷ್ಮಿ ಶ್ರೀ ಶಂಕರ್ ಅವರು ವಿಶೇಷವಾಗಿ ಇಂದಿನ ಗಾನಸಿರಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ

ಆದಿ ಶಂಕರರು ವಟುವಾಗಿ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಒಮ್ಮೆ ಭಿಕ್ಷಾಟನೆಗೆ ಹೋಗುತ್ತಾರೆ .ಒಂದು ಮನೆಯಲ್ಲಿ ಒಬ್ಬ ಬಡ ತಾಯಿಯು ಕೊಡಲು ಏನೂ ಇಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಾಳೆ. ಆಗ ಶಂಕರರು ಒಳಗೆ 1ನೆಲ್ಲಿಕಾಯಿ ಇರುವುದಾಗಿ ಅದನ್ನೇ ಕೊಡು ಎಂದು ಕೇಳುತ್ತಾರೆ . ಆ ತಾಯಿಯು ಅದನ್ನು ನೀಡಿದಾಗ ಸ್ವೀಕರಿಸಿದ ಶಂಕರರು ನೊಂದು ಮಹಾಲಕ್ಷ್ಮಿ ಯನ್ನು ಸ್ತುತಿಸುತ್ತಾರೆ . ಆ ಕ್ಷಣದಲ್ಲಿ ಅವರ ಅಮೃತವಾಣಿಯಿಂದ ಬಂದ ಸ್ತೋತ್ರವೇ ಕನಕಧಾರಾ ಸ್ತೋತ್ರ . ಅದರಿಂದ ಆ ಬಡ ಕುಟುಂಬವು ಸಂಪದ್ಭರಿತವಾಗುತ್ತದೆ . ಲಕ್ಷ್ಮಿಯು ಯಥೇಚ್ಛವಾಗಿ ಆ ಮನೆಯಲ್ಲೇ ನೆಲೆಸುತ್ತಾಳೆ .
ಇಂಥ ಅದ್ಭುತ ಕನಕಧಾರಾ ಸ್ತೋತ್ರವನ್ನು ವರಮಹಾಲಕ್ಷ್ಮಿ ಹಬ್ಬದಂದು ಎಲ್ಲರೂ ಕೇಳಿ ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಿರಿ .


Share