M.P. ಆಧ್ಯಾತ್ಮಿಕ ಅಂಗಳ:ಅಗ್ನಿಯಿಂದ 5 ಬಗೆಯ ಪಾಠ ಕಲಿಯಬಹುದು…!

21
Share

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

ಆಧ್ಯಾತ್ಮಿಕ ವಿಚಾರ.??

*ಅಗ್ನಿಯಿಂದ 5 ಬಗೆಯ ಪಾಠವನ್ನು ನಾವು ಕಲಿಯಬಹುದು…!*

*ಖುಗ್ವೇದದಲ್ಲಿ ಅಗ್ನಿಯನ್ನು ದೈವ ಸ್ವರೂಪ /ಪುರೋಹಿತ ಎಂದು ಹೇಳುತ್ತಾರೆ.*
*ಇಂತಹ ಅಗ್ನಿಯನ್ನು ಮನುಷ್ಯ ನು ತನ್ನ ಪ್ರಗತಿ ಶೀಲತೆಗೆ ಒಬ್ಬ ಹಿತಕಾರಿ ಮಾರ್ಗ ದರ್ಶಕನಾಗಿ ಸ್ವೀಕರಿಸಿದರೆ.*
_ಆಗ ಈ ಅಗ್ನಿಯಿಂದ *5* ಬಗೆಯ ಪಾಠವನ್ನು ನಾವು ಕಲಿಯಬಹುದು._
1)ನೇ ಪಾಠ.
*ಅಗ್ನಿಯ ಚಲನೆಯೂ ಸಹಜವಾಗಿ ಮೇಲ್ಮುಖ ವಾಗಿರುತ್ತದೆ , ಹಾಗೆಯೇ ಮನುಷ್ಯನು ಮೇಲ್ಮುಖವಾದ ಚಲನೆಯನ್ನು ಅರಿತು ಬಾಳಿದರೆ ಆತನ ಜೀವನದಲ್ಲಿ ಪತನದ ಪ್ರಶ್ನೆಯೇ ಏಳುವುದಿಲ್ಲ.*

2)ನೇ ಪಾಠ
*ಅಗ್ನಿಯೂ ಸ್ವಯಂ ಪ್ರಕಾಶವನ್ನು ಹೊಂದಿದೆ. ಅದರಂತ ಮನುಷ್ಯನು ತನ್ನೊಳಗಿನ ಪ್ರಜ್ಞೆಯನ್ನು ಸದಾಕಾಲವು ಜಾಗೃತವಾಗಿ ಇಟ್ಟುಕೊಂಡರೆ ತನ್ನ ಸ್ವಶಕ್ತಿಯಿಂದ ಅಜ್ಞಾನ ಅಂಧಕಾರಗಳಿಂದ ಬಿಡುಗಡೆ ಯನ್ನು ಹೊಂದಬಹುದಾಗಿದೆ.*

3)ನೇ ಪಾಠ.
*ಅಗ್ನಿಯಿಂದ ಉಷ್ಣ ಮತ್ತು ಶಕ್ತಿಗಳು ಪ್ರಕಟವಾಗುತದೆ . ಅದರಂತೆ ಮನುಷ್ಯ ನು ತನ್ನೊಳಗಿನ ಕುತೂಹಲದ ಹಂಬಲದಿಂದ ತನ್ನ ಪ್ರತಿಭೆ ಯನ್ನು ಆಗಾಗ ಸಾಣೆ ಹಿಡಿದು ಜಾಗೃತಗೊಳಿಸಿಕೊಂಡರೆ ಅವನಲ್ಲಿಯೂ ಶಕ್ತಿ, ಸಾಮರ್ಥ್ಯಗಳು ಪ್ರಕಟವಾಗುತ್ತದೆ.*

4)ನೇ ಪಾಠ
*ಅಗ್ನಿಯಲ್ಲಿ ಸೇರಿದ ಎಲ್ಲವೂ ಬದಲಾವಣೆ ಯಾಗುತ್ತದೆ . ಅದರಂತೆ ಮನುಷ್ಯನು ಸ್ವ ಶಕ್ತಿ ಸಂಪನ್ನನೂ,ತೇಜೋವಂತನಾದರೆ ಆತನ ಸನಿಹಕ್ಕೆ ಬರುವ ಎಲ್ಲರಲ್ಲೂ ಒಂದು ಬದಲಾವಣೆಯ ಕಾಣಬಹುದಾಗಿದೆ.*

5)ನೇ ಪಾಠ
*ಅಗ್ನಿ ತನಗೆ ದೊರೆತದೆಲ್ಲವನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತಾನೆ ತನಗಾಗಿ ಯಾವುದನ್ನು ಇಟ್ಟುಕೊಳ್ಳುವುದಿಲ್ಲ ಹಾಗೆಯೇ ಮನುಷ್ಯ ರಾದ ನಾವು ನಮ್ಮಗಾಗಿ ಅಲ್ಪ ಸ್ವಲ್ಪ ಸಂಗ್ರಹಿಸಿಟ್ಟುಕೊಂಡರೂ ಅಲ್ಪ ಸ್ವಲ್ಪವ್ವನ್ನಾದರೂ ಅಗತ್ಯ ವಿರುವವರಿಗೆ ಹಂಚಿ ಬಾಳುವುದನ್ನು ಕಲಿಯೋಣ.*
✏️ravindra shivamogga.

*!! ಶ್ರೀಕೃಷ್ಣಾರ್ಪಣಮಸ್ತು !!*

 


Share