M.P. ಆಧ್ಯಾತ್ಮಿಕ ಅಂಗಳ-ಇಂದು,ಋಗುಪಾಕರ್ಮ*. *30 ರ0ದು ಯಜುರುಪಾಕರ್ಮ

45
Share

ಕೃಪೆ ಆದ್ಯಾತ್ಮಿಕ ವಿಚಾರ ಬಳಗ

*29-08-2023 ಋಗುಪಾಕರ್ಮ*.
*30-08-2023 ಯಜುರುಪಾಕರ್ಮ*

ಉಪಾಕರ್ಮ ಎಂದರೆ ಉಪಾನೀತರಾದವರು ವೇದಾಧ್ಯಯನವನ್ನು ಪ್ರಾರಂಭಿಸಲು ಮಾಡುವ ಒಂದು ವಿಶೇಷ ಸಂಸ್ಕಾರ. ಇದನ್ನು ಋಗ್ವೇದವನ್ನು ಆಚರಿಸುವವರು ಶ್ರಾವಣ ಮಾಸದ ಶ್ರವಣ ನಕ್ಷತ್ರದಂದು ಆಚರಿಸಲಾಗುವುದು.

ಈ ದಿನ ಪೂಜೆ ಮಾಡಿ ಜನಿವಾರವನ್ನು ಧರಿಸಲಾಗುವುದು, ಈ ಜನಿವಾರ ಪ್ರಣವ-ಓಂಕಾರ ಸೂಚಿಸುತ್ತದೆ. ಇದರಲ್ಲಿರುವ 3 ಸೂಕ್ಷ್ಮ ವಾದ ಎಳೆಗಳು ಮೂರು ವೇದಗಳ ಕುರಿತು ಸೂಚಿಸುತ್ತದೆ. ಬ್ರಹ್ಮಚಾರಿಗಳು 3 ಎಳೆಗಳ ಜನಿವಾರ ಧರಿಸದರೆ, ಗೃಹಸ್ಥರು 6 ಎಳೆಗಳ ಜನಿವಾರ ಧರಿಸುತ್ತಾರೆ. ಗೃಹಸ್ಥರು ಧರಿಸುವ ಹೆಚ್ಚಿನ 3 ಎಳೆಗಳು ಭಕ್ತಿ, ಜ್ಞಾನ, ಕರ್ಮಗಳ ಪಾವಿತ್ರ್ಯತೆಯ ಸಂಕೇತವಾಗಿದೆ. ಸಾಧಕರು 9 ಎಳೆಗಳ ಜನಿವಾರ ಧರಿಸುತ್ತಾರೆ, ಅವು ಅವರ ಸಾಧನೆಯ ಸೋಪಾನವಾದ ಸತ್, ಚಿತ್, ಆನಂದ ಎಂಬ ಮೂರು ಸ್ಥತಿಯನ್ನು ಸೂಚಿಸುತ್ತದೆ.

ಈ ದಿನ ಗಾಯತ್ರಿ ಮಂತ್ರಕ್ಕೆ ಹೊಸ ಸಿದ್ಧಿಯನ್ನು ಪಡೆದುಕೊಳ್ಳುವ ಸಂಕಲ್ಪ ಮಾಡಬೇಕು. ಈ ಜಪವನ್ನು ಆವರ್ತನೆಯಂತೆ ವಿದ್ಯೆ, ಸಿದ್ಧಿ, ಸಂತಾನ, ಕೀರ್ತಿ, ಲಾಭ, ಬ್ರಹ್ಮತೇಜಸ್ಸು, ವೈರಾಗ್ಯಗಳನ್ನು ಗಳಿಸಲು ವಿನಿಯೋಗಿಸಬೇಕು ಎಂದ ಹೇಳಲಾಗಿದೆ. ಈ ಮಂತ್ರವನ್ನು ಆತ್ಮಕಲ್ಯಾಣಕ್ಕೂ, ಲೋಕಕಲ್ಯಾಣಕ್ಕೂ ಬಳಸಬಹುದು.

ಈ ದಿನದಂದು ಲೋಕಮಾತೆಯಾಗಿ ಗಾಯತ್ರಿಯನ್ನು ಆರಾಧಿಸಿ, ಜ್ಞಾನವನ್ನು ನೀಡುವಂತೆ ಪ್ರಾರ್ಥಿಸಲಾಗುವುದು

ಉಪಾಕರ್ಮ ಆಚರಣೆ
ಉಪಾಕರ್ಮ ಆಚರಣೆ ಶಾಸ್ತ್ರೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕ ವಿಧಿ. ಸಂವತ್ಸರ ಕೃತ ದೋಷ ಪರಿಹಾರಾರ್ಥ ಅಂದರೆ ವರ್ಷವಿಡೀ ತಿಳಿದೋ, ತಿಳಿಯದೆಯೋ ಆದ ತಪ್ಪಿಗೆ ದೇವರ ಕ್ಷಮೆ ಕೋರಿ, ಅದರಿಂದ ಕಟ್ಟಿಕೊಂಡ ಪಾಪ ನಿವಾರಣೆಗಾಗಿ ವರ್ಷಕ್ಕೊಮ್ಮೆ ಈ ಆಚರಣೆ ಮಾಡಲಾಗುತ್ತದೆ.
ಉಪಾಕರ್ಮದ ದಿನ ಅಭ್ಯಂಜನ ಮಾಡಿ, ಪುಣ್ಯಾಹ, ನಾಂದಿ ನಂತರ ಉತ್ಸರ್ಜನ ಹೋಮ ಮಾಡಿ, ಗುರು(ಋಷಿ) ಕಾಣಿಕೆ ನೀಡಿ ಜನಿವಾರ ಅರ್ಥಾತ್‌ ಯಜ್ಞೋಪವೀತ ಧಾರಣೆಯನ್ನು ಮಾಡಿಕೊಳ್ಳುವುದು ಸಂಪ್ರದಾಯ.
ಉತ್ಸರ್ಜನ ಎಂದರೆ, ದೇಶ ಶುದ್ಧಿ. ಅಂದರೆ ದೇಹ ಶುದ್ಧಿಗಾಗಿ ಮಾಡುವ ಹೋಮ ಉತ್ಸರ್ಜನ. ಈ ಹೋಮ ಅಥವಾ ಯಾಗ ಮಾಡುವುದರಿಂದ ವರ್ಷವಿಡೀ ಮಾಡಿದ ಗಾಯಿತ್ರಿ ಮಂತ್ರ ಜಪ, ಪೂಜೆ, ಸಂಧ್ಯಾವಂದನೆಗೆ ಬಲ ಬರುತ್ತದೆ.

? ಆಧ್ಯಾತ್ಮಿಕ ವಿಚಾರ.??

*ತರ್ಪಣ* *ಋಗುಪಾಕರ್ಮ*

ಋಗುಪಾಕರ್ಮ ದಿನದಂದು ಅವಶ್ಯವಾಗಿ ಮಾಡಬೇಕಾದ ಬ್ರಹ್ಮ ಯಜ್ಞದ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದ್ದೇನೆ. ಉಪನಯನವಾದ ದಿನದಿಂದಲೂ ಪ್ರತಿಯೊಬ್ಬರೂ ಕೂಡ ಅವಶ್ಯವಾಗಿ ಮಾಡಲೇಬೇಕಾದ ಪಂಚಮಹಾಯಜ್ಞಗಳಲ್ಲಿ ಒಂದಾದ ಬ್ರಹ್ಮ ಯಜ್ಞ ವನ್ನು ಪ್ರತಿನಿತ್ಯವೂ ಮಾಡಬಹುದು (ಕೆಲವು ದಿನಗಳನ್ನು ಹೊರತುಪಡಿಸಿ) ಬ್ರಹ್ಮ ಯಜ್ಞ ಎಂದರೆ ದೇವ ಋಷಿ ಆಚಾರ್ಯ ಮತ್ತು ಪಿತೃವರ್ಗ ದವರನ್ನು ತೃಪ್ತಿಪಡಿಸುವುದು. ಇದರ ಸಂಕ್ಷಿಪ್ತ ವಿಧಿಯನ್ನು ಇಲ್ಲಿ ವಿವರಿಸಿದ್ದೇನೆ.
(ಅವರವರ ಸಂಪ್ರದಾಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಹೊರತುಪಡಿಸಿ)

ನೂತನ ಯಜ್ಞೋಪವೀತವನ್ನು ಹಿರಿಯರಿಂದ ವೈದಿಕರಿಂದ ಧರಿಸಿದ ನಂತರ

ಆಚಮನ ಪ್ರಾಣಾಯಾಮ ಮಾಡಿಕೊಂಡು ಪವಿತ್ರ ಇದ್ದಲ್ಲಿ ಧರಿಸುವುದು
ದೇಶಕಾಲೌ ಸಂಕೀರ್ತ್ಯ , ಶ್ರೀ ವಿಷ್ಣು ಪ್ರೇರಣಯಾ , ಶ್ರೀ ವಿಷ್ಣು ಪ್ರೀತ್ಯರ್ಥಂ ದೇವ – ಋಷಿ – ಆಚಾರ್ಯ – ಪಿತೃ ತರ್ಪಣಾಖ್ಯಂ ಕರ್ಮ ಕರಿಷ್ಯೇ (ಪಿತೃ ತರ್ಪಣ ಅಧಿಕಾರ ಇದ್ದವರಿಗೆ ಮಾತ್ರ)ಎಂದು ನೀರು ಬಿಡುವುದು.
ತೀರ್ಥವನ್ನು ತೆಗೆದುಕೊಂಡು ಅದರಲ್ಲಿ ನಿರ್ಮಾಲ್ಯ ಮತ್ತು ಹೂವನ್ನು, ಎರಡು ಚಿಕ್ಕ ದರ್ಬೆಯನ್ನು ತೀರ್ಥದಲ್ಲಿ ಹಾಕಿ( ದರ್ಬೆ ಇದ್ದಲ್ಲಿ ಮಾತ್ರ) ಬ್ರಹ್ಮಾಂಜಲಿ ಮಾಡಿಕೊಂಡು{ ಬಲಕೈನ್ನು ಮೇಲ್ಮುಖವಾಗಿ ಎಡಗೈಯನ್ನು ಕೆಳಮುಖವಾಗಿ ಬಲಗಾಲ ಮೇಲೆ ಇಟ್ಟುಕೊಂಡು} ಗಾಯತ್ರಿ ಮಂತ್ರ ದಿಂದ ಅಭಿ ಮಂತ್ರಣ ಮಾಡಿ. ನಂತರ ಅಭಿ ಮಂತ್ರಣ ಮಾಡಿದ ತೀರ್ಥದಿಂದ

ಮೊದಲಿಗೆ ದೇವ ತರ್ಪಣ

|| *ದೇವತರ್ಪಣಮ್* ||

(ವಿಧಿಃ – ಪ್ರಾಙ್ಮುಖಃ ಸವ್ಯೇನ ಕುಶಾಗ್ರೈಃ ಅಂಗುಲ್ಯಗ್ರೈ: ದೇವ ತೀರ್ಥೇನ ಶಾಲಗ್ರಾಮತೀರ್ಥೋದಕಿನ ಏಕೈಕಮಂಜಲಿಂ ದದ್ಯಾತ್ .)
ಪೂರ್ವಾಭಿಮುಖವಾಗಿ ಕುಳಿತುಕೊಂಡು
ಬಲಗೈಯಲ್ಲಿ ನಿರ್ಮಾಲ್ಯ ಹೂವು ಮತ್ತು ದರ್ಭೆಯನ್ನು ಹಿಡಿದುಕೊಂಡು
೧ ತೀರ್ಥದೇವತಾ ……… ಸ್ತೃಪ್ಯಂತು
೨ ಅಗ್ನಿ………..ಸ್ತೃಪ್ಯಂತು
೩ ವಿಷ್ಣು ….. ಸ್ತೃಪ್ಯಂತು
೪ ಪ್ರಜಾಪತಿ … …ಸ್ತೃಪ್ಯಂತು
೫ ಬ್ರಹ್ಮಾ …….. ತೃಪ್ಯತು
೬ ವೇದಾ ……… ಸ್ತೃಪ್ಯಂತು
೭ ದೇವಾ ……… ಸ್ತೃಪ್ಯಂತು
೮ ಋಷಯ ……. ಸ್ತೃಪ್ಯಂತು
೯ ಸರ್ವಾಣಿಛಂದಾಂಸಿ ……..ತೃಪ್ಯಂತು
೧೦ ಓಂಕಾರ ……..ಸ್ತೃಪ್ಯಂತು
೧೧ ವಷಟ್ಕಾರ……..ಸ್ತೃಪ್ಯಂತು
೧೨ ವ್ಯಾಹೃತಯ………. ಸ್ತೃಪ್ಯಂತು
೧೩ ಸಾವಿತ್ರೀ ……….ತೃಪ್ಯತು
೧೪ ಯಜ್ಞಾ……….. ಸ್ತೃಪ್ಯಂತು
೧೫ ದ್ಯಾವಾಪೃಥಿವೀ ………ತೃಪ್ಯತಾಂ
೧೬ ಅಂತರಿಕ್ಷಂ………. ತೃಪ್ಯತು
೧೭ಅಹೋರಾತ್ರಾಣಿ …..ತೃಪ್ಯಂತು
೧೮ಸಾಂಖ್ಯಾ………. ಸ್ತೃಪ್ಯಂತು
೧೯ಸಿದ್ಧಾ ………ಸ್ತೃಪ್ಯಂತು
೨೦ ಸಮುದ್ರಾ ……….ಸ್ತೃಪ್ಯಂತು
೨೧ ನದ್ಯ………… ಸ್ತೃಪ್ಯಂತು
೨೨ ಗಿರಯ ಸ್ತೃಪ್ಯಂತು
೨೩ಕ್ಷೇತ್ರೌಷಧಿ ವನಸ್ಪತಿ
ಗಂಧರ್ವ ಅಪ್ಸರಸ… .ಸ್ತೃಪ್ಯಂತು
೨೪ ನಾಗ ………ಸ್ತೃಪ್ಯಂತು
೨೫ ವಯಾಂಸಿ……… ಸ್ತೃಪ್ಯಂತು
೨೬ ಗಾವ ……… ಸ್ತೃಪ್ಯಂತು
೨೭ಸಾಧ್ಯಾ ……. ಸ್ತೃಪ್ಯಂತು
೨೮ ವಿಪ್ರಾ……….. ಸ್ತೃಪ್ಯಂತು
೨೯ಯಕ್ಷಾ ……….ಸ್ತೃಪ್ಯಂತು
೩೦ ರಕ್ಷಾಂಸಿ ……….ಸ್ತೃಪ್ಯಂತು
೩೧ ಭೂತಾನಿ………. ಸ್ತೃಪ್ಯಂತು
೩೨ ಏವಮಂತಾನಿ…….. ಸ್ತೃಪ್ಯಂತು.

||ಋಷಿ ತರ್ಪಣಮ್||

ಉತ್ತರಾಭಿಮುಖವಾಗಿ ಉಪವೀತವನ್ನು ಋಷಿ ಮಾಲೆ ಅಂದರೆ ಮಾಲಾಕಾರವಾಗಿ ಹಾಕಿಕೊಂಡು ಎರಡಾವರ್ತಿ (ಎರಡು ಸಲ) ತರ್ಪಣವನ್ನು ಋಷಿಗಳಿಗೆ ಕೊಡುವುದು

೧ ಶತರ್ಚಿನ…….ಸ್ತೃಪ್ಯಂತು
೨ ಮಾಧ್ಯಮಾ ……….ಸ್ತೃಪ್ಯಂತು
೩ ಗೃತ್ಸಮದ………ಸ್ತೃಪ್ಯತು
೪ ವಿಶ್ವಾಮಿತ್ರ ……. ಸ್ತೃಪ್ಯತು
೫ ವಾಮದೇವ…………..ಸ್ತೃಪ್ಯತು
೬ ಅತ್ರಿ . ………..ಸ್ತೃಪ್ಯತು
೭ ಭರದ್ವಾಜ … ……ಸ್ತೃಪ್ಯತು
೮ ವಸಿಷ್ಠ ………ಸ್ತೃಪ್ಯತು
೯ ಪ್ರಗಾಥಾ ………ಸ್ತೃಪ್ಯಂತು
೧೦ ಪಾವಮಾನ್ಯ……… ಸ್ತೃಪ್ಯಂತು
೧೧ ಕ್ಷುದ್ರಸೂಕ್ತಾ ……… ಸ್ತೃಪ್ಯಂತು
೧೨ ಮಹಾಸೂಕ್ತಾ ……..ಸ್ತೃಪ್ಯಂತು

ಆಚಾರ್ಯ ತರ್ಪಣಂ

(ವಿಧಿಃ – ದಕ್ಷಿಣಾಭಿಮುಖಃ ಕುಶಮೂಲಾಗ್ರೆ ; ತರ್ಜನ್ಯಂಗುಷ್ಠ ಮಧ್ಯ ಪಿತೃತೀರ್ಥೇನ ಸಕೃನ್ಮಂತ್ರೇಣ ತ್ರೀನ್ ತ್ರೀನ್ ಅಂಜಲೀನ್ ದದ್ಯಾತ್)
ದಕ್ಷಿಣಾಭಿಮುಖವಾಗಿ ಜನಿವಾರವನ್ನು ಅಂಗುಷ್ಟ ದಲ್ಲಿ ಹಿಡಿದುಕೊಂಡು ಮೂರು ಸಲ ತರ್ಪಣವನ್ನು ಕೊಡುವುದು

೧.ಸುಮಂತು – ಜೈಮಿನಿ – ವೈಶಂಪಾಯನ – ಪೈಲ – ಸೂತ್ರ ಭಾಷ್ಯ -ಭಾರತ – ಮಹಾಭಾರತ – ಧರ್ಮಾಚಾರ್ಯ….. ಸ್ತೃಪ್ಯಂತು
೨.ಜಾನಂತಿ – ಬಾಹವಿ – ಗಾರ್ಗ್ಯ – ಗೌತಮ – ಶಾಕಲ್ಯ – ಬಾಭ್ರವ್ಯ -ಮಾಂಡವ್ಯ – ಮಾಂಡೂಕೇಯಾ
……..ಸ್ತೃಪ್ಯಂತು
೩ ಗರ್ಗೀವಾಚಕ್ನವಿ…….. ತೃಪ್ಯತು
೪ ವಡವಾಪ್ರಾತೀಥೆಯೀ …….ತೃಪ್ಯತು
೫ ಸುಲಭಾಮೈತ್ರೇಯೀ ……..ತೃಪ್ಯತು
೬ ಕಹೋಳಂ ………..ತರ್ಪಯಾಮಿ
೭ ಕೌಷೀತಕಂ ……..ತರ್ಪಯಾಮಿ
೮ ಮಹಾಕೌಷೀತಕಂ……… ತರ್ಪಯಾಮಿ
೯ ಪೈಂಗ್ಯಂ ………ತರ್ಪಯಾಮಿ
೧೦ ಮಹಾಪೈಂಗ್ಯಂ ……..ತರ್ಪಯಾಮಿ
೧೧ ಸುಯಜ್ಞಂ ” ……..ತರ್ಪಯಾಮಿ
೧೨ ಸಾಂಖ್ಯಾಯನಂ……..ತರ್ಪಯಾಮಿ
೧೩ .ಐತರೇಯಂ ತರ್ಪಯಾಮಿ
೧೪ ಮಹೈತರೇಯಂ…….. ತರ್ಪಯಾಮಿ
೧೫ ಶಾಕಲಂ……..ತರ್ಪಯಾಮಿ
೧೬ ಬಾಷ್ಕಲಂ …….ತರ್ಪಯಾಮಿ
೧೭ ಸುಜಾತವಸಕ್ತ್ರಂ ……..ತರ್ಪಯಾಮಿ
೧೮ ಔದವಾಹಿಂ ……..ತರ್ಪಯಾಮಿ
೧೯ ಮಹೌದವಾಹಿಂ………ತರ್ಪಯಾಮಿ
೨೦ ಸೌಜಾಮಿಂ……ತರ್ಪಯಾಮಿ
೨೧ ಶೌನಕಂ ……..ತರ್ಪಯಾಮಿ
೨೨ ಆಶ್ವಲಾಯನಂ……… ತರ್ಪಯಾಮಿ
ಯೇಚಾನ್ಯೇ ಆಚಾರ್ಯಾಸ್ತೇ ಸರ್ವೆ
ತೃಪ್ಯಂತು ತೃಪ್ಯಂತು ತೃಪ್ಯಂತು

||ಪಿತೃ ತರ್ಪಣ||
ಕೈಯಲ್ಲಿರುವ ನಿರ್ಮಾಲ್ಯ ದರ್ಬೆಯನ್ನು ಕೆಳಗಿಟ್ಟು ತಿಲವನ್ನು ಬಲಗೈಯಲ್ಲಿ ಹಾಕಿಕೊಂಡು ಅಪಸವ್ಯ ಮಾಡಿಕೊಂಡು ದಕ್ಷಿಣಾಭಿಮುಖವಾಗಿ ನಾಮ ಗೋತ್ರ ಉಚ್ಚಾರ ಮಾಡಿಕೊಂಡು ಅಂಗುಷ್ಟ ತೋರುಬೆರಳು ಮಧ್ಯದಿಂದ ತರ್ಪಣವನ್ನು ಕೊಡುವುದು

ತಂದೆ …….3 ವಸು
ಅಜ್ಜ ………3 ರುದ್ರ
ಮುತ್ತಜ್ಜ……3 ಆದಿತ್ಯ

ತಾಯಿ…….3
ಅಜ್ಜಿ (ತಂದೆಯ ತಾಯಿ)…….3
ಮುತ್ತಜ್ಜಿ (ತಂದೆಯ ತಂದೆಯ ತಾಯಿ)….3

(ತಂದೆಯ ಎರಡನೇ ಹೆಂಡತಿ ಇದ್ದಲ್ಲಿ)……
2
ಇನ್ನು ಎಲ್ಲರಿಗೂ ಒಂದೇ ಸಲ ತರ್ಪಣ ಕೊಡುವುದು

ಅಮ್ಮನ ತಂದೆ……
ಅಮ್ಮನ ತಂದೆಯ ತಂದೆ..
ಅಮ್ಮನ ಅಜ್ಜನ ತಂದೆ….

ಅಮ್ಮನ ಅಮ್ಮ
ಅಮ್ಮನ ಅಜ್ಜಿ
ಅಮ್ಮನ ಮುತ್ತಜ್ಜಿ

ಹೆಂಡತಿ ….ಮಗ….ಮಗಳು

*ತಂದೆಯ ಕಡೆಯಿಂದ*
ನಿಮ್ಮ ದೊಡ್ಡಪ್ಪ -ಹೆಂಡತಿ-ಮಕ್ಕಳು (ತಂದೆಯ ಅಣ್ಣ)
ನಿಮ್ಮ ಚಿಕ್ಕಪ್ಪ -ಹೆಂಡತಿ-ಮಕ್ಕಳು (ತಂದೆಯ ತಮ್ಮ)
ನಿಮ್ಮ ತಂದೆಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು

*ನಿಮ್ಮ ಒಡಹುಟ್ಟಿದವರು*
ನಿಮ್ಮ ಅಣ್ಣ ಅಥವಾ ತಮ್ಮ ಅವರ ಹೆಂಡತಿ ಮತ್ತು ಮಕ್ಕಳು
ನಿಮ್ಮ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು

*ತಾಯಿಯ ಕಡೆಯಿಂದ*
ತಾಯಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು ಮಕ್ಕಳು
ತಾಯಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮಕ್ಕಳು

*ಹೆಂಡತಿ ಕಡೆಯಿಂದ*
ಹೆಂಡತಿಯ ತಂದೆ-ತಾಯಿ
ಹೆಂಡತಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು
ಹೆಂಡತಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು

ಮಾತೃ ಸಂಬಂಧಿನಾಂ
ಪಿತೃ ಸಂಬಂಧಿನಾಂ

ಗುರು ಸಪತ್ನೀಕಂ (ವಿದ್ಯೆ ಕೊಟ್ಟ ಗುರು)
ಆಚಾರ್ಯಾಂ (ಸಪತ್ನೀಕಂ ಪುರೋಹಿತರು ಇತ್ಯಾದಿ)
ಸ್ವಾಮಿನಂ ಸಪತ್ನೀಕಂ (ಪೋಷಕರು ಮಾಲೀಕರು)
ಸಖಾಯಾಂ ಸಪತ್ನೀಕಂ( ಸ್ನೇಹಿತರು)

ಜನಿವಾರವನ್ನು ಸವ್ಯ ಮಾಡಿ

ಸೂತ್ರ ನಿಷ್ಪೀಡನಂ
ಜನಿವಾರವನ್ನು ನೀವು ಬಿಟ್ಟಂತಹ ತರ್ಪಣದ ನೀರಿನಲ್ಲಿ ಒಮ್ಮೆ ಮುಳುಗಿಸಿ ಅದನ್ನು ಹಿಂಡಬೇಕು
ಪೂರ್ವಕ್ಕೆ ಮುಖ ಮಾಡಿಕೊಂಡು ಹೂವು ಮತ್ತು ನಿರ್ಮಾಲ್ಯ ವನ್ನು ತೆಗೆದುಕೊಂಡು ಕೃಷ್ಣಾರ್ಪಣ ಮಾಡಿ

ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ | ಅನೇನ ದೇವ-ಋಷಿ-ಆಚಾರ್ಯ-ಪಿತೃ ತರ್ಪಣೇನ
ಭಗವಾನ್ ಶ್ರೀ ಜನಾರ್ದನ-ವಾಸುದೇವಮೂರ್ತಿ ಪ್ರಿಯತಾಮ ಪ್ರೀತೋ ಭವತು ಶ್ರೀಕೃಷ್ಣಾರ್ಪಣಮಸ್ತು

ಎಂದುಚ್ಚರಿಸಿ ಪವಿತ್ರ ಹಾಕಿಕೊಂಡಲ್ಲಿ ಗಂಟುನ್ನು ಬಿಚ್ಚಿ ನೀರಿನಲ್ಲಿ ಹಾಕಿ ಆಚಮನ ಮಾಡುವುದು

ನ್ಯೂಯಾತಿರಿಕ್ತ ದೋಷ ಪ್ರಾಯಶ್ಚಿತಾರ್ಥಂ
ನಾಮ ತ್ರಯ ಜಪ ಮಹಂ ಕರಿಷ್ಯೇ
ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ ಎಂದುಚ್ಚರಿಸುವುದು !! ಶ್ರೀಕೃಷ್ಣಾರ್ಪಣಮಸ್ತು !!*

 


Share