M.P.ವೀಕೆಂಡ್ ನ್ಯೂಸ್ – ಸರ್ಕಾರಿ ಆದರ್ಶ ಶಾಲಾ ಮಕ್ಕಳಿಗೆ ರಾಷ್ಟ್ರಧ್ವಜದ ಪಾಠ*

249
Share

*ಸರ್ಕಾರಿ ಆದರ್ಶ ಶಾಲಾ ಮಕ್ಕಳಿಗೆ ರಾಷ್ಟ್ರಧ್ವಜದ ಪಾಠ*

ಮೈಸೂರಿನ ಹಾರ್ಟ್ ಸಂಸ್ಥೆಯು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಾಲಾ-ಕಾಲೇಜಿನ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ರಾಷ್ಟ್ರಧ್ವಜದ ಹಿನ್ನೆಲೆ, ಮಹತ್ವ ಮತ್ತು ಅದನ್ನು ಬಳಸುವ ಕ್ರಮಗಳ ಕುರಿತು ಜಾಗೃತಿ ಅಭಿಯಾನವನ್ನು ಮೈಸೂರಿನ ಸರ್ಕಾರಿ ಆದರ್ಶ ಶಾಲೆಯಲ್ಲಿ ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ಧಾರರು, ಲೇಖಕರು, ಪತ್ರಿಕಾ ಅಂಕಣಕಾರರು ಹಾಗೂ ಚಿಂತಕರು ಆದ ಡಾ. ವಿ. ರಂಗನಾಥ್‍ರವರು ಮಕ್ಕಳಿಗೆ ರಾಷ್ಟ್ರಧ್ವಜ ಕುರಿತು ಪಾಠ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಅಭಿಯಾನದ ಸಂದರ್ಭದಲ್ಲಿ ರಾಷ್ಟ್ರಧ್ವಜ ರಾರಾಜಿಸುವ ಸಂದರ್ಭದಲ್ಲಿ ಸಾಮಾನ್ಯ ಜನರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾತನಾಡಿದ ಅವರು ಭಾರತದ ಮೊದಲ ರಾಷ್ಟ್ರಧ್ವಜ ಮತ್ತು ನಂತರದ ದಿನಗಳಲ್ಲಿ ಆದ ಪರಿಷ್ಕರಣೆ ಧ್ವಜಗಳು ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ರಾಷ್ಟ್ರಧ್ವಜ ಕುರಿತು ಸಂಪೂರ್ಣ ಹಾಗೂ ನಿಖರ ಮಾಹಿತಿಯನ್ನು ನೀಡಿದರು.
ರಾಷ್ಟ್ರಧ್ವಜದಲ್ಲಿ ಬಳಸಲಾಗಿರುವ ಬಣ್ಣಗಳ ವಿಧ ಹಾಗೂ ಅ ಬಣ್ಣಗಳ ಸಂದೇಶಗಳನ್ನು ಅರ್ಥೈಸಲಾಯಿತು. ಅಲ್ಲದೆ ಧ್ವಜದ ಅಳತೆ, ತೂಕ ಹಾಗೂ ಧ್ವಜ ಕಂಬದ ಎತ್ತರದ ನಿಯಮಗಳ ಕುರಿತು ತಿಳಿಸಲಾಯಿತು. ಇದರ ಜೊತೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ದೃಷ್ಠಿಯಲ್ಲಿ ಮಾಡಲಾಗಿರುವ ಧ್ವಜಂಹಿತೆಯ ತಿದ್ದುಪಡಿ ಕುರಿತು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಸ್ವಾತಂತ್ರ್ಯ ಬಂದು 75ವರ್ಷಗಳು ಆದರೂ ಇನ್ನೂ ಬಹುತ್ತೇಕ ಜನರಲ್ಲಿ ಧ್ವಜದ ಬಗ್ಗೆ ಪೂರ್ಣ ಮಾಹಿತಿ ಇಲ್ಲದಿರುವುದು ಕಂಡು ಬಂದಿದ್ದು, ಈ ಮಾಹಿತಿ ಕೊರತೆಯನ್ನು ನೀಗಿಸಲು ಹಾರ್ಟ್ ಸಂಸ್ಥೆಯು ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಡಿ ವರ್ಷ ನಿರಂತರವಾಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಅಭಿಯಾನವನ್ನು ಮುಂದುವರೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹಾರ್ಟ್ ಸಂಸ್ಥೆಯ ಕಾರ್ಯಕಾರಿ ಸದಸ್ಯ ಶ್ರೀ. ವಿ.ಜೆ. ಮಿಂಚು ಹಾಗೂ ಆದರ್ಶ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಭಾಗವಹಿಸಿದರು. ಈ ದಿನ ನಡೆದ ಎರಡು ಅಧಿವೇಶನಗಳನ್ನು ಒಳಗೊಂಡಂತೆ ಸುಮಾರು 400 ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.


Share