MP ಅಡಿಗೆಮನೆ,ಆಲೂಗೆಡ್ಡೆ ಸೇವ್… ಭಾರ್ಗವಿ ಜೈಶಂಕರ್

1927
Share

ಆಲೂಗೆಡ್ಡೆ ಸೇವ್…

ಭಾರ್ಗವಿ ಜೈಶಂಕರ್
ಬೆಂಗಳೂರು.

ಬೇಕಾಗಿರುವ ಸಾಮಗ್ರಿಗಳು…
ಚಿರೋಟಿ ರವೆ – ಒಂದು ಕಪ್ (120ml),
ಬೇಯಿಸಿರುವ ಆಲೂಗೆಡ್ಡೆ – ನಾಲ್ಕು,
ನೀರು – ಒಂದು ಕಪ್ ,
ಬಾದಾಮಿ,
ಗೋಡಂಬಿ,
ಕಡಲೇಕಾಯಿ ಬೀಜ –
ಪ್ರತಿಯೊಂದು ಕಾಲು ಕಪ್,
ಕರಿಬೇವು,
ಮೆಣಸುಪುಡಿ,
ಚಾಟ್ ಮಸಾಲ ಪುಡಿ, ಕರಿಯಲು ಎಣ್ಣೆ..
ಮಾಡುವ ವಿಧಾನ –
ಒಂದು ಬಾಣಲೆಯಲ್ಲಿ ನೀರು ಹಾಕಿ ಕುದಿಸಿ ಆ ನೀರನ್ನು ರವೆಗೆ ಹಾಕಿ ಕಲಿಸಿ ಹತ್ತು ನಿಮಿಷ ಮುಚ್ಚಿಡುವುದು..

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಾದಾಮಿ, ಗೋಡಂಬಿ, ಕಡಲೆಕಾಯಿ, ಕರಿಬೇವು ಹುರಿದು ಅದಕ್ಕೆ ಚಾಟ್ ಮಸಾಲ ಪುಡಿ, ಮೆಣಸುಪುಡಿ ಹಾಕಿ ಚೆನ್ನಾಗಿ ಬೆರೆಸಿಕೊಳ್ಳುವುದು..

ಕಲಿಸಿದ ರವೆಯನ್ನು ಚೆನ್ನಾಗಿ ನಾದಿಕೊಂಡು, ಸಿಪ್ಪೆ ಸುಲಿದ ಆಲೂಗೆಡ್ಡೆಯನ್ನು ಕಲಿಸಿದ ರವೆಗೆ ಸೇರಿಸಿ ಉಪ್ಪು ಹಾಕಿ ಕಲಿಸಿ ಕೊಳ್ಳುವುದು..
ಚಕ್ಕುಲಿಯ ಒರಳಿನಲ್ಲಿ ಸೇವೆ ಮಾಡುವ ಬಿಲ್ಲೆಯಿಂದ ಬಿಸಿ ಎಣ್ಣೆಯಲ್ಲಿ ಗರಿಯಾಗುವವರೆಗೂ ಕರೆದು ತೆಗೆದುಕೊಳ್ಳುವುದು..ಕೆಂಪಗೆ ಕರಿಯಬಾರದು..
ನಂತರ ಇದನ್ನು ಕಾಲು ಇಂಚು ಅಳತೆಗೆ ಪುಡಿ ಮಾಡಿ ಹುರಿದಿಟ್ಟಿರುವ ಬೀಜಗಳು, ಕರಿಬೇವು ಹಾಕಿ ಎಲ್ಲಾ ಮಿಕ್ಸ್ ಮಾಡಿದರೆ ‘ ಆಲೂಗೆಡ್ಡೆ ಸೇವ್ ‘ ಸೇವನೆ ಮಾಡಲು ರೆಡಿ !!


Share