MP – ಅಡಿಗೆಮನೆ – ಗೋದಿ ಹಿಟ್ಟನ ಹಲ್ವಾ.. ಭಾರ್ಗವಿ ಜೈಶಂಕರ್

475
Share

 

 

ಗೋದಿ ಹಿಟ್ಟನ ಹಲ್ವಾ..
ಭಾರ್ಗವಿ ಜೈಶಂಕರ್

ಬೇಕಾಗುವ ಸಾಮಗ್ರಿ –

ಗೋದಿ ಹಿಟ್ಟು – ಒಂದು ಕಪ್,
ತುಪ್ಪ – ಅರ್ಧ ಕಪ್,
ಸಕ್ಕರೆ – ಒಂದು ಕಪ್
ನೀರು – ಎರೆಡು ಕಪ್
ಗೋಡಂಬಿ, ದ್ರಾಕ್ಷಿ..

ಮಾಡುವ ವಿಧಾನ..
ಗೋಡಂಬಿ ಮತ್ತು ದ್ರಾಕ್ಷಿಯನ್ನು. ತುಪ್ಪದಲ್ಲಿ ಹುರಿದು ಇಟ್ಟುಕೊಳ್ಳಿ..ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ಸಕ್ಕರೆ ಹಾಕಿ ಕರಗುವವರೆಗೂ ಬಿಡಿ..ಅದೇ ಸಮಯ ಇನ್ನೊಂದು ಬಾಣಲೆಯಲ್ಲಿ ತುಪ್ಪಹಾಕಿ ಗೋದಿ ಹಿಟ್ಟು ಹಾಕಿ ಮಧ್ಯ ಉರಿಯಲ್ಲಿ ಘಂ ಅಂತ ವಾಸನೆ ಬರುವವರೆಗೂ ಹುರಿಯುತ್ತ ಪಕ್ಕದಲ್ಲಿ ಕುದಿಯುತ್ತಿರುವ ಸಕ್ಕರೆ ನೀರನ್ನು ಈ ಗೋದಿ ಮಿಶ್ರಣಕ್ಕೆ ಬೆರೆಸಿ ಚೆನ್ನಾಗಿ ಕಲಕುತ್ತ ತಳ ಬಿಡುವವರೆಗೂ ಕಲಕಿ, ತುಪ್ಪದಲ್ಲಿ ಹುರಿದಿಟ್ಟ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿದರೆ ಸುಲಭವಾಗಿ ತಯಾರಿಸಬಲ್ಲ ಗೋದಿಹಿಟ್ಟಿನ ಹಲ್ವ ರೆಡಿ. ಮಾಡಿ ಸವಿಯಿರಿ.


Share