MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 102

204
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 102

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

522 . ಓಂ ಧನಧಾನ್ಯಪತಯೇ ನಮಃ
523 . ಓಂ ಧನ್ಯಾಯ ನಮಃ
524 . ಓಂ ಧನದಾಯ ನಮಃ
525 . ಓಂ ಧರಣೀಧರಾಯ ನಮಃ
526 . ಓಂ ಧ್ಯಾನೈಕ ಪ್ರಕಟಾಯ ನಮಃ

522. ಓಂ ಧನಧಾನ್ಯಪತಿಃ-
ಭಾ: ಧನಧಾನ್ಯಪ್ರದತ್ವೇನ ಧನಧಾನ್ಯಪತಿರ್ಭವಾನ್‌।
ಎಲೈ ಗಣೇಶನೇ! ಧನಧಾನ್ಯಗಳನ್ನು ಕೊಡುವುದರಿಂದ ನೀನು ಧನಧಾನ್ಯಪತಿಯು.
ಓಂ ಧನಧಾನ್ಯಪತಯೇ ನಮಃ

523. ಓಂ ಧನ್ಯಃ-
ಭಾ: ಧನ್ಯಸ್ತ್ವಂ ಧನಲಬ್ಧೃತ್ವಾತ್ ಪುಣ್ಯವಾನ್ ವಾಪಿ ಗೀಯಸೇ।
ಹೇ ಗಣೇಶಾ! ನೀನು ತಪಸ್ಸೆಂಬ ಧನದಿಂದ ಲಭ್ಯವಾಗುತ್ತೀಯೆ, ನೀನು ಪುಣ್ಯವಂತನು. ಆದ್ದರಿಂದ ನಿನ್ನನ್ನು ಧನ್ಯನೆನ್ನುತ್ತಾರೆ.
ಓಂ ಧನ್ಯಾಯ ನಮಃ

524. ಓಂ ಧನದಃ-
ಭಾ: ಧನದೋ ಧನದಾನೇನ ಕುಬೇರಾತ್ಮತಯಾಪಿ ವಾ।
ಧನವನ್ನು ಕೊಡುವುದರಿಂದಲೂ, ಕುಬೇರ ಸ್ವರೂಪನಾದ್ದರಿಂದಲೂ ಅವನು ಧನದನು.
ಓಂ ಧನದಾಯ ನಮಃ

525. ಓಂ ಧರಣೀಧರಃ-
ಭಾ: ಶೇಷೇಣಾದಿವರಾಹೇಣಾ7ಪ್ಯಭಿನ್ನೋ ಧರಣೀಧರಃ।
ಆದಿಶೇಷನಿಗಿಂತಲೂ, ಆದಿವರಾಹಸ್ವಾಮಿಗಿಂತಲೂ ಅಭಿನ್ನನಾದ್ದರಿಂದ ಧರಣೀಧರನು. (ಆದಿಶೇಷನು, ಆದಿವರಾಹನು ಭೂಮಿಯನ್ನು ಧರಿಸಿರುತ್ತಾರೆ ಎಂದು ಪುರಾಣಗಳು ಹೇಳುತ್ತವೆ.)
ಓಂ ಧರಣೀಧರಾಯ ನಮಃ

526. ಓಂ ಧ್ಯಾನೈಕಪ್ರಕಟಃ-
ಭಾ: ಮನಸೈವಾನುದ್ರಷ್ಟವ್ಯೋ ಧ್ಯಾನೈಕ ಪ್ರಕಟೋ ಭವಾನ್‌।
ಉಪಾಸಕರ ಧ್ಯಾನ ಸಮಯದಲ್ಲಿ ಮನಸ್ಸಿನಿಂದ ನೋಡತಕ್ಕವನಾದ್ದರಿಂದ ಅವನು ಧ್ಯಾನೈಕಪ್ರಕಟನು. ಉಪಾಸನೆಯಿಂದ ಪುನೀತವಾದ ಮನಸ್ಸನ್ನು ಅನುಸರಿಸಿ ಹೋದರೆ ಅವನು ಪ್ರಕಟವಾಗುತ್ತಾನೆ.
ಓಂ ಧ್ಯಾನೈಕ ಪ್ರಕಟಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share