MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 105

251
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 105

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :
540 . ಓಂ ಪರಸ್ಮೈ ಧಾಮ್ನೇ ನಮಃ
541 . ಓಂ ಪರಮಾತ್ಮನೇ ನಮಃ
542 . ಓಂ ಪರಸ್ಮೈ ಪದಾಯ ನಮಃ
533 . ಓಂ ಪರಾತ್ಪರಾಯ ನಮಃ
544 . ಓಂ ಪಶುಪತಯೇ ನಮಃ

540 . ಓಂ ಪರಂಧಾಮಃ –
ಭಾ . ಜ್ಯೋತಿಷಾಮಪಿ ಯಜ್ಜ್ಯೋತಿಃ ತತ್ಪರಂಧಾಮ ಕಥ್ಯತೇ ।
ಸೂರ್ಯ ಚಂದ್ರ ಅಗ್ನಿ ನಕ್ಷತ್ರಗಳು ಮುಂತಾದವುಗಳ ಬೆಳಕಿಗೆ ಬೆಳಕನ್ನು ಕೊಡುವವನನ್ನು ಪರಂಧಾಮ ಎನ್ನುತ್ತಾರೆ. ( ಸ್ವಯಂಪ್ರಕಾಶ ಸ್ವರೂಪನು )
ಓಂ ಪರಸ್ಮೈ ಧಾಮ್ನೇ ನಮಃ

541 . ಓಂ ಪರಮಾತ್ಮಾಃ –
ಭಾ : ಪರಮಃ ಸರ್ವಜೀವೇಭ್ಯಃ ಪರಮಾತ್ಮೇತಿ ಗದ್ಯತೇ
ಎಲ್ಲ ಜೀವಿಗಳಿಗಿಂತಲೂ ಪರನು ( ಶ್ರೇಷ್ಠನು ಅಧಿಕನು) ಆದ್ದರಿಂದ ಪರಮಾತ್ಮನು .
ಓಂ ಪರಮಾತ್ಮನೇ ನಮಃ

542 . ಓಂ ಪರಂಪದಮ್ : –
ಭಾ : ಕೈಲಾಸಾದಿಪ ಪದೇಭ್ಯೋಪಿ ಪರಮತ್ವಾತ್ಪರಂಪದಮ್
ಕೈಲಾಸ ಮೊದಲಾದ ಉನ್ನತ ಸ್ಥಾನಗಳಿಗಿಂತಲೂ ಉನ್ನತವಾದ ಸ್ಥಾನವು ತಾನೇ ಆದ್ದರಿಂದ ಅವನು ಪರಂಪದನು.
ಓಂ ಪರಸ್ಮೈ ಪದಾಯ ನಮಃ

543 . ಓಂ ಪರಾತ್ಪರಃ –
ಭಾ : ಬ್ರಹ್ಮ ವಿಷ್ಣು ಮಹೇಶಾದ – ಪ್ಯುತ್ತಮತ್ವಾತ್ಪರಾತ್ಪರಃ ।
ಬ್ರಹ್ಮ ವಿಷ್ಣು ಮಹೇಶ್ವರರಿಗೆಗಿಂತಲೂ ಉತ್ತಮನಾದ್ದರಿಂದ ಪರಾತ್ಪರನು.
ಓಂ ಪರಾತ್ಪರಾಯ ನಮಃ

544 . ಓಂ ಪಶುಪತಿಃ –
ಭಾ : ಬ್ರಹ್ಮಾದಿ ಕೀಟಕಾಂತಾನಾಂ ಪಾತಾ ಪಶುಪತಿರ್ಮತಃ ।
ಬ್ರಹ್ಮನು ಮೊದಲ್ಗೊಂಡು ಕೀಟ ಪರ್ಯಂತ ಜೀವರಾಶಿಯನ್ನು ರಕ್ಷಿಸುತ್ತಾನೆ ಆದ್ದರಿಂದ ಪಶುಪತಿಯೆಂದು ಹೇಳಲ್ಪಟ್ಟಿದ್ದಾನೆ.
ಓಂ ಪಶುಪತಯೇ ನಮಃ

 

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share