MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 113

282
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 113

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

580 . ಓಂ ಭ್ರೂಮಧ್ಯಗೋಚರಾಯ ನಮಃ
581 . ಓಂ ಮಂತ್ರಾಯ ನಮಃ
582 .ಓಂ ಮಂತ್ರಪತಯೇ ನಮಃ
583 . ಓಂ ಮಂತ್ರಿಣೇ ನಮಃ
584 . ಓಂ ಮದಮತ್ತ ಮನೋರಮಾಯ ನಮಃ

580. ಓಂ ಭ್ರೂಮಧ್ಯಗೋಚರಃ-
ಭಾ: ಅವಿಭಕ್ತೇ ಭ್ರುವೋರ್ಮಧ್ಯೇ ಧ್ಯೇಯೋ ಭ್ರೂಮಧ್ಯಗೋಚರಃ೤
ಅವಿಭಕ್ತವಾದ ಭ್ರೂಮಧ್ಯ ಭಾಗದಲ್ಲಿ (ಹುಬ್ಬುಗಳು ಸೇರುವ ಭಾಗದಲ್ಲಿ) ಧ್ಯೇಯನಾದ್ದರಿಂದ ಭ್ರೂಮಧ್ಯಗೋಚರನು.
ಓಂ ಭ್ರೂಮಧ್ಯಗೋಚರಾಯ ನಮಃ

581. ಓಂ ಮಂತ್ರಃ
582. ಓಂ ಮಂತ್ರಪತಿಃ
583. ಓಂ ಮಂತ್ರೀ
ಭಾ: ಮಂತ್ರಾಃ ಸಾಮರ್ಗ್ಯಜೂರೂಪಾ ಷಡರ್ಣೈಕಾಕ್ಷರಾದಯಃ।
ರಹೋವಿಚಾರ ರೂಪಾಶ್ಚ ರಾಜಭಾರೋಪಯೋಗಿನಃ॥
ತದ್ರೂಪಸ್ತದಭಿಮಾನೀ ದೇವತಾ ತಸ್ಯ ಕಾರಕಃ।
ತೇನ ಮಂತ್ರೋ ಮಂತ್ರಪತಿಃ ಮಂತ್ರೀತ್ಯಪಿ ಚ ಗೀಯಸೇ॥
ಋಗ್ಯಜುಸ್ಸಾಮ ವೇದಗಳ ಮಂತ್ರಗಳು ಹಾಗೂ ಏಕಾಕ್ಷರೀ, ಷಡಕ್ಷರೀ, ನವಾಕ್ಷರೀ ಮೊದಲಾದ ಮಂತ್ರಗಳು ಗಣೇಶನ ರೂಪಗಳೇ. ಆದ್ದರಿಂದ ಅವನು ಮಂತ್ರನು.
ರಹಸ್ಯದಲ್ಲಿ ವಿಚಾರ ಮಾಡುವ ವಿಷಯಗಳನ್ನು, ರಾಜ್ಯ ವ್ಯವಹಾರಗಳಿಗೆ ಉಪಯೋಗಿಸುವ ಆಲೋಚನೆಗಳನ್ನು ಮಂತ್ರಗಳೆನ್ನುತ್ತಾರೆ. ಗಣೇಶನು ಆ ಮಂತ್ರಗಳ ರೂಪನೂ, ಅಧಿಷ್ಠಾನ ದೇವನೂ ಆಗಿದ್ದಾನೆ. ಆದಕಾರಣ ಅವನೇ ಮಂತ್ರವು, ಅವನೇ ಮಂತ್ರಪತಿ, ಅವನೇ ಮಂತ್ರಿ.
ಓಂ ಮಂತ್ರಾಯ ನಮಃ
ಓಂ ಮಂತ್ರಪತಯೇ ನಮಃ
ಓಂ ಮಂತ್ರಿಣೇ ನಮಃ

584. ಓಂ ಮದಮತ್ತ ಮನೋರಮಃ
ಭಾ: ಮದಸ್ಸಮಾಧಿಸಂಭೂತ ಧ್ಯೇಯಾ7ನ್ಯವಿಷಯಾಗ್ರಹಃ।
ರಮಸೇ ತದ್ಯುತೇ ಚಿತ್ತೇ ಮದಮತ್ತ ಮನೋರಮಃ॥
ಧ್ಯೇಯನಾದ ದೇವನನ್ನು ಹಹೊರತು ಇತರ ವಿಷಯಗಳನ್ನು ಗ್ರಹಿಸದಿರುವ ಯೋಗಸವಾಧಿಕಾಲದ ಆನಂದವನ್ನು ಮದವೆನ್ನುತ್ತಾರೆ. ಹೇ ಗಣೇಶಾ! ಅಂತಹ ಮದದಿಂದ ಕೂಡಿದ ಚಿತ್ತದಲ್ಲಿ ನೀನು ಆನಂದಿಸುತ್ತೀಯೆ. ಆದ್ದರಿಂದ ನೀನು ಮದಮತ್ತಮನೋರಮನು.
ಓಂ ಮದಮತ್ತಮನೋರಮಾಯ ನಮಃ
ಮೇಖಲಾವಾನ್ ಮಂದಗತಿರ್ಮತಿಮತ್ಕಮಲೇಕ್ಷಣಃ।
ಮಹಾಬಲೋ ಮಹಾವೀರ್ಯೋ ಮಹಾಪ್ರಾಣೋ ಮಹಾಮನಾಃ॥

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share