MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 115

279
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 115

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

600 . ಓಂ ರಸಾಯ ನಮಃ
601 . ಓಂ ರಸಪ್ರಿಯಾಯ ನಮಃ
602 . ಓಂ ರಸ್ಯಾಯ ನಮಃ
603 . ಓಂ ರಂಜಕಾಯ ನಮಃ
604 . ಓಂ ರಾವಣಾರ್ಚಿತಾಯ ನಮಃ

600. ಓಂ ರಸಃ-
ಭಾ: ರಸಃ ಪರಮ ಆನಂದೋ ರಸೋ ವೈ ಸ ಇತಿ ಶ್ರುತೇಃ।
“ರಸೋ ವೈ ಸಃ” ಎಂಬ ಶ್ರುತಿವಾಕ್ಯವನ್ನು ಅನುಸರಿಸಿ ಎಲ್ಲಾ ಆನಂದಗಳಿಗಿಂತಲೂ ಮಿಗಿಲಾದ ಆನಂದವನ್ನು ರಸವೆಂದು ತಿಳಿಯಬೇಕು. ಗಣಪತಿಯು ಬ್ರಹ್ಮಾನಂದಸ್ವರೂಪನಾದ್ದರಿಂದ ರಸನು.
ಓಂ ರಸಾಯ ನಮಃ

ಇತಿ ಭಾರತ್ಯುಪಾಖ್ಯಸ್ಯ ಭಾಸ್ಕರಾಗ್ನಿಚಿತಃ ಕೃತೌ
ಗಣೇಶ ನಾಮ ಖದ್ಯೋತೇ ಷಷ್ಟಂ ಶತಮಬೀಭವತ್‌॥
ಭಾರತೀ ಎಂಬ ನಾಮಾಂತರವುಳ್ಳ ಭಾಸ್ಕರಾಗ್ನಿಹೋತ್ರಿಗಳ ಕೃತಿಯಾದ ಗಣೇಶ ಸಹಸ್ರನಾಮದ ಖದ್ಯೋತವೆಂಬ ಭಾಷ್ಯದಲ್ಲಿ ಆರನೆಯ ಶತಕವು ಸಂಪೂರ್ಣವಾಯಿತು.

601. ಓಂ ರಸಪ್ರಿಯಃ-
ಭಾ: ಶಾಂತಾದೌ ಮಧುರಾದೌ ವಾ ರಸೇ ಪ್ರೀತ್ಯಾ ರಸಪ್ರಿಯಃ|
ಶಾಂತಾದಿ ನವರಸಗಳಲ್ಲಿಯೂ, ಮಧುರಾದಿ ಷಡ್ರುಚಿಗಳಲ್ಲಿಯೂ ಪ್ರೀತಿ ಇರುವವನು ರಸಪ್ರಿಯನು.
ಓಂ ರಸಪ್ರಿಯಾಯ ನಮಃ

602. ಓಂ ರಸ್ಯಃ-
ಭಾ: ರಸ್ಯತೇ ಚರ್ವ್ಯತೇ ಪ್ರಾಜ್ಞೈರ್ಭೂಯೋ ಭೂಯೋsನುಭೂಯತೇ|
ಸ ರಸ್ಯಃ……………………………………||
ರಸಸ್ವರೂಪನಾದ್ದರಿಂದ ಪಂಡಿತರಿಂದ ವಿಶೇಷವಾಗಿ ರುಚಿ ನೋಡಿ ಅನುಭವಿಸಲ್ಪಡುತ್ತಾನೆ. ಪಂಡಿತರು ಅವನ ತತ್ತ್ವವನ್ನು ಪದೇಪದೇ ಮನನ ಮಾಡುತ್ತಿರುತ್ತಾರೆ. ಆದ್ದರಿಂದ ಅವನು ರಸ್ಯನು.
ಓಂ ರಸ್ಯಾಯ ನಮಃ

603. ಓಂ ರಂಜಕಃ-
ಭಾ: ………………..ತನ್ಮನೋ ವೃತ್ತಿರಂಜನೇನಾಸಿ ರಂಜಕಃ|
ಪಂಡಿತರ ಮನೋವೃತ್ತಿಗಳನ್ನು ರಂಜಿಸುವುದರಿಂದ ರಂಜಕನು.
ಓಂ ರಂಜಕಾಯ ನಮಃ

604. ಓಂ ರಾವಣಾರ್ಚಿತಃ-
ಭಾ: ರಾವಣೈಃ ಶಬ್ದನೈರ್ವೇದ ಶಾಸ್ತ್ರಗೀತಾದಿಪಾಠಿಭಿಃ|
ದಶಾಸ್ಯೇನಾಪಿ ಸಿದ್ಧ್ಯರ್ಥಂ ಪೂಜಿತೋ ರಾವಣಾರ್ಚಿತಃ||
ವೇದ, ಶಾಸ್ತ್ರ, ಗೀತಾದಿಗಳನ್ನು ಉಚ್ಚೈಸ್ಸ್ವರದಿಂದ ಪಾರಾಯಣ ಮಾಡುವವರಿಂದ ಪೂಜಿಸಲ್ಪಡುವವನಾದ್ದರಿಂದ ರಾವಣಾರ್ಚಿತನು.
ಅಥವಾ ದಶಕಂಠನಾದ ರಾವಣಾಸುರನಿಂದಲೂ ಸಿದ್ಧಿಗಾಗಿ ಪೂಜಿಸಲ್ಪಟ್ಟಿದ್ದರಿಂದಲೂ ರಾವಣಾರ್ಚಿತನು.
ಓಂ ರಾವಣಾರ್ಚಿತಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share