MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 117

306
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 117

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

610 . ಓಂ ಲಕ್ಷ್ಯಾಯ ನಮಃ
611 . ಓಂ ಲಯಸ್ಥಾಯ ನಮಃ
612 . ಓಂ ಲಡ್ಡುಕಪ್ರಿಯಾಯ ನಮಃ
613 . ಓಂ ಲಾನಪ್ರಿಯಾಯ ನಮಃ
614 . ಓಂ ಲಾಸ್ಯಪರಾಯ ನಮಃ

610. ಓಂ ಲಕ್ಷ್ಯಃ-
ಭಾ: ಲಕ್ಷ್ಯೋ ಲಕ್ಷಣಯಾ ಗಮ್ಯೋ ಮಹಾವಾಕ್ಯಗತೈಃ ಪದೈಃ|
ಜೀವಾತ್ಮ, ಪರಮಾತ್ಮರ ಐಕ್ಯವನ್ನು ಹೇಳುವ ‘ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ’ ಮೊದಲಾದ ಮಹಾವಾಕ್ಯಗಳಲ್ಲಿನ ಪದಗಳಿಂದ ಲಕ್ಷಣಾರ್ಥವಾಗಿ ತಿಳಿಯತಕ್ಕ ಪರಮಾತ್ಮ ಸ್ವರೂಪನಾದ್ದರಿಂದ ಲಕ್ಷ್ಯನು.
ಓಂ ಲಕ್ಷ್ಯಾಯ ನಮಃ

611. ಓಂ ಲಯಸ್ಥಃ-
ಭಾ: ಲಯಸ್ಥಃ ಕಲ್ಪಕಾಲೇsಪಿ ತಿಷ್ಠಂಶ್ಚಿತ್ತಲಯೇsಪಿ ವಾ|
ಪ್ರಳಯವಾದಾಗಲೂ ಮತ್ತು ಚಿತ್ತವು ಲಯವಾದಾಗಲೂ ಇರುವವನಾದ್ದರಿಂದ ಲಯಸ್ಥನು.
ಓಂ ಲಯಸ್ಥಾಯ ನಮಃ

612. ಓಂ ಲಡ್ಡುಕಪ್ರಿಯಃ-
ಭಾ: ಲಡ್ಡುಕಾ ವರ್ತುಲಾಕಾರಾ ಪ್ರಿಯಾಲತಿಲಖಸ್ಖಸೈಃ|
ರಚಿತಾಃ ಶರ್ಕರಾಪಕ್ವಾಸ್ತತ್ಪ್ರಿಯೋ ಲಡ್ಡುಕಪ್ರಿಯಃ||
ದ್ರಾಕ್ಷಿ, ಎಳ್ಳು, ಗಸಗಸೆ ಮೊದಲಾದವುಗಳನ್ನು ಬೆರೆಸಿ ತಯಾರಿಸಲ್ಪಟ್ಟ ಸಕ್ಕರೆ ಪಾಕದ ಲಡ್ಡುಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ಆದ್ದರಿಂದ ಲಡ್ಡುಕಪ್ರಿಯನು.
ಓಂ ಲಡ್ಡುಕಪ್ರಿಯಾಯ ನಮಃ

613. ಓಂ ಲಾನಪ್ರಿಯಃ-
ಭಾ: ಲಾನಪ್ರಿಯೋ ಗಜಾವಾಸಶಾಲಾಯಾಂ ಪ್ರೀತಿಸಂಯುತಃ|
ಆನೆಗಳನ್ನು ಕಟ್ಟಿಹಾಕುವ ಗಜಶಾಲೆಯಲ್ಲಿ ಇರುವುದವನ್ನು ಇಷ್ಟಪಡುವವನು ಲಾನಪ್ರಿಯನು.
ಓಂ ಲಾನಪ್ರಿಯಾಯ ನಮಃ

614. ಓಂ ಲಾಸ್ಯಪರಃ-
ಭಾ: ವಿಲಾಸಾರ್ಹಪರಂಧಾಮ ಯಸ್ಯ ಲಾಸ್ಯಪರೋ ಹಿ ಸಃ|
ಸಕಲ ವಿಲಾಸ ಭೋಗಗಳಿಂದ ಕೂಡಿದ ಮಂದಿರ ಉಳ್ಳವನು ಮತ್ತು ಆ ಮಂದಿರದಲ್ಲಿ ಪ್ರೀತಿ ಉಳ್ಳವನು ಲಾಸ್ಯಪರನು.
ಓಂ ಲಾಸ್ಯಪರಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share