MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 127

235
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 127

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

660 . ಓಂ ಹರ್ಷಾಯ ನಮಃ
661 . ಓಂ ಹೃಲ್ಲೇಖಾಮಂತ್ರಮಧ್ಯಗಾಯ ನಮಃ
662 . ಓಂ ಕ್ಷೇತ್ರಾಧಿಪಾಯ ನಮಃ
663 . ಓಂ ಕ್ಷಮಾಭರ್ತ್ರೇ ನಮಃ
664 . ಓಂ ಕ್ಷಮಾಪರಪರಾಯಣಾಯ ನಮಃ

660. ಓಂ ಹರ್ಷಃ-
ಭಾ: ಹವಿರ್ಭಕ್ಷಣಜೋ ಮೋದಃ ಹರ್ಷಸ್ಸೋsಪಿ ತ್ವದಾತ್ಮಕಃ|
ಹವಿಸ್ಸನ್ನು ತಿನ್ನುವುದರಿಂದಾಗುವ ಸಂತೋಷವನ್ನು ಹರ್ಷವೆನ್ನುತ್ತಾರೆ. ಆ ಸಂತೋಷವು ನೀನೇ ಆದ್ದರಿಂದ ನೀನು ಹರ್ಷನು.
ಓಂ ಹರ್ಷಾಯ ನಮಃ

661. ಓಂ ಹೃಲ್ಲೇಖಾಮಂತ್ರಮಧ್ಯಗಃ-
ಭಾ: ಹೃಲ್ಲೇಖಾರ್ಥಸ್ತಂತ್ರರಾಜೇ ವರ್ಣಿತೋ ವ್ಯಾಕುಲಾಕ್ಷರೈಃ|
ವ್ಯೋಮ್ನಾಪ್ರಕಾಶಮಾನಸ್ತ್ವಂ ಗ್ರಸಮಾನಸ್ತ್ವಮಗ್ನಿನಾ|
ತಯೋರ್ವಿವುರ್ಶ ಈಕಾರೋ ಬಿಂದುನಾ ತನ್ನಿಫಾಲನಮ್‌|
ಇತಿ ಹ್ರೀಂಕಾರ ವಾಚ್ಯೋsಸಿ ಹೃಲ್ಲೇಖಾ ಮಂತ್ರಮಧ್ಯಗಃ||
ಹೇ ಗಣೇಶ! ನೀನು ಆಕಾಶ ತತ್ತ್ವಾತ್ಮಕವಾದ ‘ಹ’ಕಾರದಿಂದ ಕೂಡಿ ಪ್ರಕಾಶಿಸುತ್ತಿದ್ದೀಯೆ. ಅಗ್ನಿ ಬೀಜವಾದ ‘ರ’ಕಾರಾತ್ಮಕನಾಗಿ ಎಲ್ಲವನ್ನೂ ನುಂಗಿಹಾಕುತ್ತಿದ್ದೀಯೆ. ಈಕಾರವು ಹಕಾರ ರಕಾರಗಳ ವಿಮರ್ಶೆಯಾಗಿದೆ. ಬಿಂದುವು ಈಕಾರದ ಫಾಲಸ್ಥಾನದಲ್ಲಿದೆ. ಹೀಗೆ ನೀನು ಭುವನೇಶ್ವರೀ ಬೀಜಾಕ್ಷರವಾದ ‘ಹ್ರೀಂ’ ಬೀಜಾಕ್ಷರ ವಾಚ್ಯನಾಗಿದ್ದೀಯೆ. ಆದಕಾರಣ ನೀನು ಹೃಲ್ಲೇಖ ಮಂತ್ರ ಮಧ್ಯಗನು.
ಓಂ ಹೃಲ್ಲೇಖಾಮಂತ್ರಮಧ್ಯಗಾಯ ನಮಃ
‘ಹೃಲ್ಲೇಖಾ’ ಎಂಬ ಪದದ ಅರ್ಥವು ತಂತ್ರರಾಜವೆಂಬ ಗ್ರಂಥದಲ್ಲಿ ವ್ಯಾಕುಲಾಕ್ಷರಗಳಿಂದ ಹೇಳಲ್ಪಟ್ಟಿದೆ. (ವ್ಯಾಕುಲಾಕ್ಷರ ಎಂದರೆ ಮಂತ್ರಶಾಸ್ತ್ರದ ರೀತಿಯಲ್ಲಿ ಬಿಡಿಸಿ ನೋಡುವುದು ಎಂದರ್ಥ. ಹೃಲ್ಲೇಖಾ ಪದವನ್ನು ಬಿಡಿಸಿದರೆ ಹ್‌|ರೇಫ|ಈ|ಬಿಂದು ಎಂಬ ರೂಪವು ಸಿದ್ಧಿಸುತ್ತದೆ. ಪುನಃ ಜೋಡಿಸಿದರೆ ‘ಹ್ರೀಂ’ ಬೀಜದ ಸಿದ್ಧಿಯಾಗುತ್ತದೆ.)
‘ಹ’ ಎಂಬುದು ಆಕಾಶತತ್ತ್ವಾತ್ಮಕವಾದ ಬೀಜಾಕ್ಷರ. ‘ರ’ ಎಂಬುದು ಅಗ್ನಿತತ್ತ್ವಾತ್ಮಕ ಬೀಜಾಕ್ಷರ. ಅವೆರಡರ ವಿಮರ್ಶಮಾಡತ್ತಿರುವ ಅಕ್ಷರ ‘ಈ’ಕಾರ. (ವಿಮರ್ಶ-ಸೇರಿಸುವುದು) ಹ|ರ್‌|ಈ ಹ್ರೀ.
‘ಹ್ರೀ’ ಎಂಬ ಅಕ್ಷರದ ಫಾಲಸ್ಥಾನದಲ್ಲಿ (ಎಲ್ಲದಕ್ಕಿಂತಲೂ ಮೇಲೆ) ಬಿಂದುವು (ಸೊನ್ನೆ)ಯನ್ನು ಇಟ್ಟರೆ ‘ಹ್ರೀಂ’ ಬೀಜಾಕ್ಷರ ಉದ್ಧಾರವಾಗುತ್ತದೆ.
ಕ್ಷೇತ್ರಾಧಿಪಃ ಕ್ಷಮಾಭರ್ತಾ ಕ್ಷಮಾಪರ ಪರಾಯಣಃ|
ಕ್ಷಿಪ್ರಕ್ಷೇಮಕರಃ ಕ್ಷೇಮಾನನ್ದಃ ಕ್ಷೋಣೀಸುರದ್ರುಮಃ||

662. ಓಂ ಕ್ಷೇತ್ರಾಧಿಪಃ-
ಭಾ: ಪ್ರಯಾಗಾದೇಃ ಶರೀರಾದೇರ್ವೇಶಃ ಕ್ಷೇತ್ರಾಧಿಪೋ ಮತಃ|
ಪ್ರಯಾಗಾದಿ ಕ್ಷೇತ್ರಗಳಿಗೂ, ಎಲ್ಲರ ದೇಹಗಳಿಗೂ ಅಧಿಪತಿಯಾದ್ದರಿಂದ ಗಣೇಶನನ್ನು ಕ್ಷೇತ್ರಾಧಿಪ ಎನ್ನುತ್ತಾರೆ. (ಪ್ರಯಾಗಾದಿ ತೀರ್ಥಯಾತ್ರೆಗಳನ್ನು ಮಾಡುವವರಿಗೆ ಫಲವನ್ನು ಕೊಡುವವನು.)
ಓಂ ಕ್ಷೇತ್ರಾಧಿಪಾಯ ನಮಃ

663. ಓಂ ಕ್ಷಮಾಭರ್ತಾ-
ಭಾ: ಕ್ಷಮಾಭರ್ತಾ ಕ್ಷಿತಿಂ ಕ್ಷಾಂತಿಮಪಿ ವಾ ಯೋ ಬಿಭರ್ತಿ ಸಃ|
ಭೂಮಿಯನ್ನೂ, ಸಹನಶಕ್ತಿಯನ್ನೂ ಯಾವ ದೇವನು ಧರಿಸುತ್ತಾನೆಯೋ ಅವನು ಕ್ಷಮಾಭರ್ತೃ. (ಗಣೇಶನು ಭೂಮಿಯನ್ನು ಧರಿಸಿ ಕ್ಷಮೆ-ಯಿಂದಿದ್ದಾನೆಂದರ್ಥ.)
ಓಂ ಕ್ಷಮಾಭರ್ತ್ರೇ ನಮಃ

664. ಓಂ ಕ್ಷಮಾಪರಪರಾಯಣಃ-
ಭಾ: ಕ್ಷಾಂತಿಶೀಲಮುನಿಪ್ರಾಪ್ಯಃ ಕ್ಷಮಾಪರಪರಾಯಣಃ|
ಸಹನಶೀಲರಾದ ಮುನಿಗಳಿಂದ ಹೊಂದಲ್ಪಡುವವನಾದ್ದರಿಂದ ಕ್ಷಮಾಪರಪರಾಯಣನು. (ಗಣೇಶನ ಕೃಪೆಯನ್ನು ಪಡೆಯಲು ಸಹನೆ ಬೇಕು.)
ಓಂ ಕ್ಷಮಾಪರಪರಾಯಣಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share