MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 15

562
Share

 

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 15

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

72. ಓಂ ಘೃಣಯೇ ನಮಃ
73. ಓಂ ಕವಯೇ ನಮಃ
74. ಓಂ ಕವೀನಾಮೃಷಭಾಯ ನಮಃ
75. ಓಂ ಬ್ರಹ್ಮಣ್ಯಾಯ ನಮಃ
76. ಓಂ ಬ್ರಹ್ಮಣಸ್ಪತಯೇ ನಮಃ
77. ಓಂ ಜ್ಯೇಷ್ಠರಾಜಾಯ ನಮಃ
78. ಓಂ ನಿಧಿಪತಯೇ ನಮಃ
79. ಓಂ ನಿಧಿಪ್ರಿಯಪತಿಪ್ರಿಯಾಯ ನಮಃ
80. ಓಂ ಹಿರಣ್ಯಪುರಾಂತಸ್ಥಾಯ ನಮಃ

72 . ಓಂ ಘೃಣಿಃ : –
ಭಾಷ್ಯ :
ಘೃಣಿರಾದಿತ್ಯ ರೂಪತ್ವಾತ್ ಘೃಣಿಃ ಸೂರ್ಯ ಇತಿ ಶ್ರುತೇಃ ।

‘ ಘೃಣಿಸ್ತೂರ್ಯ ಆದಿತ್ಯಃ ‘ ಎಂಬ ಶ್ರುತಿವಾಕ್ಯವು ಘೃಣಿ ಎಂದರೆ ಸೂರ್ಯ ಎಂದು ಹೇಳುತ್ತದೆ . ಗಣೇಶನು ಆದಿತ್ಯರೂಪನಾದ್ದರಿಂದ ಘೃಣಿ ಎಂದು ಕರೆಸಿಕೊಳ್ಳುತ್ತಾನೆ .
ಓಂ ಘೃಣಯೇ ನಮಃ

73. ಓಂ ಕವಿಃ
74 . ಓಂ ಕವೀನಾಮೃಷಭಃ : –
ಭಾಷ್ಯ :
ಕಾರ್ಯತ್ವಾತ್ ಕಾವ್ಯಕರ್ತೃತ್ವಾತ್ ಕವಿರೇಷ ತಥಾ ಕವಿಂ ।
ಕವೀನಾಮುಪಮಶ್ರುತ್ಯಾ ಕವೀನಾಮೃಷಭೋ ೭ ಷ್ಯಯಮ್ ||

ಧ್ಯಾನ ಮಾಡಲ್ಪಡುವುದರಿಂದಲೂ ಪ್ರಪಂಚಸ್ವರೂಪನಾದ್ದರಿಂದಲೂ ವೇದಕರ್ತನಾದ್ದರಿಂದಲೂ ಗಣೇಶನು ಕವಿ . ‘ ಕವಿಂ ಕವೀನಾಮುಪಮಶ್ರವಸ್ತಮಂ’ ಎಂಬ ಶ್ರುತಿವಾಕ್ಯದಿಂದ ಗಣೇಶನು ಕವಿಗಳಲ್ಲಿ ಋಷಭನು ( ಶ್ರೇಷ್ಠನು ) ಎಂದು ತಿಳಿದುಬರುತ್ತದೆ . ಆದ್ದರಿಂದ ಅವನು ಕವೀನಾಮೃಷಭನು .
ಓಂ ಕವಯೇ ನಮಃ
ಓಂ ಕವೀನಾಮೃಷಭಾಯ ನಮಃ

75 . ಓಂ ಬ್ರಹ್ಮಣ್ಯಃ : –
ಭಾಷ್ಯ :
ಬ್ರಹ್ಮಣ್ಯ ಬ್ರಾಹ್ಮಣೇ ವೇದೇ ಸಾಧು ಸ್ತಪಸಿ ಧಾತರಿ ।

( ಬ್ರಹ್ಮ ಎಂಬ ಶಬ್ದಕ್ಕೆ ನಾನಾರ್ಥಗಳಿವೆ ) ಬ್ರಾಹ್ಮಣರಲ್ಲಿ ಉತ್ತಮನು . ವೇದಗಳಿಂದ ಚೆನ್ನಾಗಿ ತಿಳಿಯಲ್ಪಡುವವನು . ತಪಸ್ಸೆಂಬ ಸಾಧನೆಯಲ್ಲಿ ಗೋಚರಿಸುವವನು . ಬ್ರಹ್ಮರುಗಳಲ್ಲಿ ಶ್ರೇಷ್ಠನು . ಅದರಿಂದ ಗಣೇಶನು ಬ್ರಹ್ಮಣನು.
ಓಂ ಬ್ರಹ್ಮಣ್ಯಾಯ ನಮಃ

76 . ಓಂ ಬ್ರಹ್ಮಣಸ್ಪತಿಃ : –
ಭಾಷ್ಯ :
ವಾಗ್ವೈ ಬ್ರಹ್ಮ ಪತಿಸ್ತಸ್ಯಾ ಇತ್ಯೇಷ ಬ್ರಹ್ಮಣಸ್ಪತಿಃ |

ಬ್ರಹ್ಮ ಎಂದರೆ ವಾಕ್ಕು ಎಂದರ್ಥ . ಮಾತುಗಳಿಗೆ ಅಧಿಪತಿಯಾದ್ದರಿಂದ ಗಣೇಶನು ಬ್ರಹ್ಮಣಸ್ಪತಿ .
ಓಂ ಬ್ರಹ್ಮಣಸ್ಪತಯೇ ನಮಃ
ಜೇಷ್ಠರಾಜೋ ನಿಧಿಪತಿಃ ನಿಧಿಪ್ರಿಯಪತಿಪ್ರಿಯಃ ।
ಹಿರಣ್ಮಯ ಪುರಾಂತಸ್ಸ್ಥಃ ಸೂರ್ಯಮಂಡಲಮಧ್ಯಗಃ ll

77 . ಓಂ ಜೇಷ್ಠರಾಜಃ : –
ಭಾಷ್ಯ :
ಜೈಷ್ಣರಾಜ ಇತಿಖ್ಯಾತೋ ಜೈಷ್ಠಾಖ್ಯೆ ಸಾಮ್ನಿ ರಾಜನಾತ್ |

ಜೇಷ್ಠವೆಂಬ ಸಾಮವೇದದ ಗಾನ ವಿಧಾನದಲ್ಲಿ ರಾರಾಜಿಸುತ್ತಿರುವುದರಿಂದ ‘ ಜೈಷ್ಠರಾಜನು .
ಓಂ ಜೈಷ್ಣರಾಜಾಯ ನಮಃ

78 . ಓಂ ನಿಧಿಪತಿಃ : –
ಭಾಷ್ಯ:
ಏಷ ನಾಮ್ನಾ ನಿಧಿಪತಿರ್ನಿಧೀನಾಂ ಪರಿಪಾಲನಾತ್ |

ಎಲ್ಲಾ ತರಹದ ನಿಧಿಗಳನ್ನು ರಕ್ಷಿಸುತ್ತಾನೆ . ಆದ್ದರಿಂದ ಅವನ ಹೆಸರಿ ನಿಧಿಪತಿ .
ಓಂ ನಿಧಿಪತಯೇ ನಮಃ

79. ಓಂ ನಿಧಿಪ್ರಿಯಪತಿಪ್ರಿಯಃ : –
ಭಾಷ್ಯ :
ನಿಧೀನಾಂ ತ್ವಾ ನಿಧಿಪತಿಂ ಹವಾಮಹ ಇತಿ ಶ್ರುತೇಃ ।
ನಿಧಿಪ್ರಿಯಾ ಯೇ ಪತಯೋ ರಾಜರಾಜಾದಯೋ ನೃಪಾಃ ।
ತೈರಪ್ಪ್ಯುಪಾಸ್ಯ ಇತ್ಯೇಷ ನಿಧಿಪ್ರಿಯಪತಿಪ್ರಿಯ ॥

‘ ನಿಧೀನಾಂತ್ವಾ ನಿಧಿಪತಿಂ ಹವಾಮಹೇ ‘ ಎಂಬುದು ಶ್ರುತಿವಾಕ್ಯ . ನಿಧಿಗಳಿಗೆ ನಿಧಿಪತಿಯಾದ ಅವನನ್ನು ಕುರಿತು ಯಾಗ ಮಾಡುತ್ತಿದ್ದೇವೆ ಎಂದು ಅದರ ಭಾವ . ನಿಧಿಪ್ರಿಯನಾದ ರಾಜರು , ರಾಜರಾಜಾದಿ ಅರಸರು ಮುಂತಾದವರಿಂದ ಉಪಾಸಿಸಲ್ಪಡುತ್ತಾನೆ . ಆದ್ದರಿಂದ ಗಣೇಶನು ನಿಧಿಪ್ರಿಯಪತಿಪ್ರಿಯನು .
ಓಂ ನಿಧಿಪ್ರಿಯಪತಿಪ್ರಿಯಾಯ ನಮಃ

80 . ಓಂ ಹಿರಣ್ಮಯಪುರಾಂತಸ್ಸ್ಥಃ
ಭಾಷ್ಯ :
ಹಿರಣ್ಮಯಪುರಾಂತಃಸ್ಥೋ ದಹರಾಕಾಶಮಧ್ಯಗಃ | ಚಿನ್ಮಯಬ್ರಹ್ಮಪೂರ್ದೆಹಸ್ತದಂತರ್ಹೃದಯೇ ಸ್ಥಿತೇಃ ||

ದಹರಾಕಾಶದ ಮಧ್ಯದಲ್ಲಿ ಇರುತ್ತಾನೆ . ಆದಕಾರಣ ಅವನು ಹಿರಣ್ಮಯ ಪುರಾಂತಸ್ಸ್ಥನು . ಜ್ಞಾನವೇ ತಾನಾದ ಬ್ರಹ್ಮನಿಗೆ , ದೇಹವೇ ನಿವಾಸಸ್ಥಾನವಾದ ನಗರವು . ಆ ದೇಹದ ಒಳಗಿರುವ ಹೃದಯದಲ್ಲಿ ಇರುವುದರಿಂದ ಗಣೇಶನು ಹಿರಣ್ಮಯಪುರಾಂತಸ್ಸ್ಥನು .
ಓಂ ಹಿರಣ್ಯಪುರಾಂತಸ್ಸ್ಥಾಯ ನಮಃ

( ಮುಂದುವರೆಯುವುದು )
( ಸಂಗ್ರಹ )
* ಭಾಲರಾ
ಬೆಂಗಳೂರು


Share