MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮದ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 17

542
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 17

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

86. ಓಂ ಕುಲಪಾಲನಾಯ ನಮಃ
87. ಓಂ ಕಿರೀಟಿನೇ ನಮಃ
88. ಓಂ ಕುಂಡಲಿನೇ ನಮಃ
89. ಓಂ ಹಾರಿಣೇ ನಮಃ
90. ಓಂ ವನಮಾಲಿನೇ ನಮಃ

86 . ಓಂ ಕುಲಪಾಲನಃ : –
ಭಾಷ್ಯ :
ವಂಶಸ್ಯ ಕೌಲತಂತ್ರಸ್ಯಾಪ್ಯವನಾತ್‌ ಕುಲಪಾಲನಃ ।

ಎಲ್ಲರ ವಂಶಗಳನ್ನೂ , ಕೌಳತಂತ್ರವನ್ನೂ ಕಾಪಾಡುವುದರಿಂದ ಗಣೇಶನು ಕುಲಪಾಲನನು .
ಓಂ ಕುಲಪಾಲನಾಯನಮಃ

ಕಿರೀಟೀ ಕುಂಡಲೀ ಹಾರೀ ವನಮಾಲೀ ಮನೋಮಯಃ |
ವೈಮುಖ್ಯ ಹತ ದೈತ್ಯ ಶ್ರೀ ಪಾದಾಹತಿ ಜಿತ ಕ್ಷಿತಿಃ ||

87 . ಓಂ ಕಿರೀಟೀ : –
ಭಾಷ್ಯ :
ಕಿರೀಟೀ ಮೌಲಿಭೂಷಾವಾನಥವಾ ೭ ರ್ಜುನ ರೂಪಧೃಕ್ ।

ಕಿರೀಟವನ್ನು ಶಿರಸ್ಸಿನಲ್ಲಿ ಅಲಂಕಾರವಾಗಿ ಇರಿಸಿಕೊಂಡಿದ್ದರಿಂದಲೂ , ಅರ್ಜುನನ ರೂಪವನ್ನು ಧರಿಸಿದ್ದರಿಂದಲೂ , ಗಣೇಶನು ಕಿರೀಟಿ , ( ಪಾಂಡವರಲ್ಲಿ ಮಧ್ಯಮನಾದ ಅರ್ಜುನನಿಗೆ ಕಿರೀಟಿ ಎಂಬುದು ಬಿರುದು ನಾಮ )
ಓಂ ಕಿರೀಟಿನೇ ನಮಃ

88 . ಓಂ ಕುಂಡಲೀ : –
ಭಾಷ್ಯ :
ಕುಂಡಲೀ ಕರ್ಣಭೂಷಾವಾನಥವಾ ಶೇಷರೂಪಧೃಕ್ ।

ಕಿವಿಗಳಿಗೆ ಕುಂಡಲಗಳು ಆಭರಣಗಳಾಗಿರುವುದರಿಂದಲೂ ಆದಿಶೇಷನ ರೂಪವನ್ನು ತಾಳಿದ್ದರಿಂದಲೂ ಗಣೇಶನು ಕುಂಡಲೀ .
ಓಂ ಕುಂಡಲಿನೇ ನಮಃ

89 . ಓಂ ಹಾರೀ : –
ಭಾಷ್ಯ :
ಹಾರೀಮುಕ್ತಾದಿ ಮಾಲಾಧೃಗಥವಾ ೭ ತ್ಯಂತ ಸುಂದರಃ |

ಮುತ್ತಿನ ಸರಕ್ಕೆ ಹಾರ ಎಂದು ಹೆಸರು . ಹಾರಗಳಿಂದ ಅಲಂಕರಿಸಿ ಕೊಂಡಿರುವುದರಿಂದಲೂ ಬಹಳ ಸುಂದರವಾಗಿದ್ದು ಮನಸ್ಸನ್ನು ಸೂರೆಗೊಳ್ಳುವುದರಿಂದಲೂ ಹಾರೀ ಎನಿಸಿಕೊಳ್ಳುತ್ತಾನೆ .
ಓಂ ಹಾರಿಣೇ ನಮಃ

90 . ಓಂ ವನಮಾಲೀ : –
ಭಾಷ್ಯ :
ವನಮಾಲೀ ದಧಾತೋಷ ಮಾಲಾಮಾಪಾದಲಂಬಿನೀಮ್ |

ತಲೆಯಿಂದ ಅಥವಾ ಕಂಠದಿಂದ ಪಾದದವರೆಗೂ ನೇತಾಡುವ ಪುಷ್ಪಮಾಲೆಗಳನ್ನು ಧಾರಣೆಮಾಡಿರುವುದರಿಂದ ವನಮಾಲೀ .
ಓಂ ವನಮಾಲಿನೇ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share