MP: ಆಧ್ಯಾತ್ಮಿಕ ಅಂಗಳ: ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ)-ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ- ಪುಟ,172

300
Share

  ಗಣೇಶ ಸಹಸ್ರನಾಮ ಭಾಷ್ಯ : ಪುಟ – 172

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

926 .   ದಶಾssಶಾವ್ಯಾಪಿ ವಿಗ್ರಹಾಯ ನಮಃ
927 . ಓಂ ಏಕಾದಶಾದಿಭೀರುದ್ರೈಃಸ್ತುತಾಯ ನಮಃ
928 . ಓಂ ಏಕಾದಶಾಕ್ಷರಾಯ ನಮಃ
929 . ಓಂ ದ್ವಾದಶೋರ್ದಂಡದೋರ್ದಂಡಾಯ ನಮಃ
930 . ಓಂ ದ್ವಾದಶಾಂತನಿಕೇತನಾಯ ನಮಃ

926. ಓಂ ದಶಾssಶಾವ್ಯಾಪಿ ವಿಗ್ರಹಃ-
ಭಾ: ದಶ ದಿಗ್ವ್ಯಾಪಿ ದೇಹತ್ವಾದ್ದಶಾಶಾವ್ಯಾಪಿ ವಿಗ್ರಹಃ|
ಹತ್ತು ದಿಕ್ಕುಗಳನ್ನು ವ್ಯಾಪಿಸಿರುವ ದೇಹ ಉಳ್ಳವನು ದಶಾಶಾವ್ಯಾಪಿ ವಿಗ್ರಹನು.
(‘ದಶಾತ್ಮಕಃ’ ಎಂಬ ನಾಮದಲ್ಲಿ ಗಣೇಶನ ಸೂಕ್ಷ್ಮತ್ವವನ್ನು ತಿಳಿಸಿ, ಪ್ರಸ್ತುತ ನಾಮದಲ್ಲಿ ಅವನ ಸ್ಥೂಲತ್ವವನ್ನು ತಿಳಿಸುತ್ತಿದ್ದಾರೆ. ಆದ್ದರಿಂದ ಪುನರುಕ್ತಿಯಲ್ಲ.)
ಓಂ ದಶಾssಶಾವ್ಯಾಪಿ ವಿಗ್ರಹಾಯ ನಮಃ

927. ಓಂ ಏಕಾದಶಾದಿಭೀರುದ್ರೈಃಸ್ತುತಃ-
ಭಾ: ರುದ್ರಾ ಏಕಾದಶಾರಭ್ಯ ಸಹಸ್ರಾಣಿ ಸಹಸ್ರಶಃ|
ಏಕಾದಶಾದಿಭೀ ರುದ್ರೈಃ ಸ್ತುತಸ್ತೈಃ ಸಕಲೈರ್ನುತಃ||
‘ಸಹಸ್ರಾಣಿ ಸಹಸ್ರಶೋ ಯೇ ರುದ್ರಾ ಅಧಿಭೂಮ್ಯಾಂ’ ರುದ್ರರು ಏಕಾದಶ (ಹನ್ನೊಂದು) ಸಂಖ್ಯೆಯಿಂದ ಆರಂಭಗೊಂಡು ಸಾವಿರಾರು ಸಂಖ್ಯೆಗಳಲ್ಲಿದ್ದಾರೆ ಎಂದು ರುದ್ರಾಧ್ಯಾಯವು ತಿಳಿಸುತ್ತಿದೆ. ಆ ರುದ್ರರೆಲ್ಲರೂ ಗಣೇಶನನ್ನು ಸ್ತೋತ್ರ-ಮಾಡುತ್ತಿದ್ದಾರೆ. ಆದ್ದರಿಂದ ಗಣೇಶನು ಏಕಾದಶಾದಿಭೀ ರುದ್ರೈಃಸ್ತುತನು.
(ಶೈವಾಗಮವನ್ನನುಸರಿಸಿ ಏಕಾದಶರುದ್ರರು – 1. ಶಂಭು 2. ಪಿನಾಕೀ 3. ಗಿರೀಶ 4. ಸ್ಥಾಣು 5. ಭರ್ಗ 6. ಸದಾಶಿವ 7. ಶಿವ 8. ಹರ
9. ಶರ್ವ 10. ಕಪಾಲೀ 11. ಭವ)
ಓಂ ಏಕಾದಶಾದಿಭೀರುದ್ರೈಃಸ್ತುತಾಯ ನಮಃ
928. ಓಂ ಏಕಾದಶಾಕ್ಷರಃ-
ಭಾ: ತಾರಶಕ್ತೀ ವಿಘ್ನಶಕ್ತೀ ವಶಮಾನಯ ಠದ್ವಯಮ್‌|
ಏಕಾದಶಾಕ್ಷರೋ ಮಂತ್ರಃ ತ್ವದ್ದೈವತ್ಯಸ್ತ್ವಮೇವ ಸಃ||
ಹೇ ಗಣೇಶ! ‘ಓಂ ಓಂ ಕ್ಲೀಂ ಕ್ಲೀಂ ವಶಮಾನಯ ಠಂ ಠಃ (ಸ್ವಾಹಾ), ಎಂಬ ಏಕಾದಶಾಕ್ಷರ ‘ಹನ್ನೊಂದು ಅಕ್ಷರ’ ಮಂತ್ರದ ದೇವನೂ, ಮಂತ್ರ ಸ್ವರೂಪನೂ ನೀನೇ ಆದ್ದರಿಂದ ನಿನ್ನನ್ನು ಏಕಾದಶಾಕ್ಷರ ಎನ್ನುತ್ತಾರೆ.
ಓಂ ಏಕಾದಶಾಕ್ಷರಾಯ ನಮಃ
ದ್ವಾದಶೋದ್ದಂಡದೋರ್ದಂಡೋ ದ್ವಾದಶಾಂತನಿಕೇತನಃ|
ತ್ರಯೋದಶಭಿಧಾಭಿನ್ನ ವಿಶ್ವೇದೇವಾಧಿದೈವತಮ್‌||

929. ಓಂ ದ್ವಾದಶೋದ್ದಂಡದೋರ್ದಂಡಃ-
ಭಾ: ದ್ವಾದಶೋದ್ದಂಡ ದೋರ್ದಂಡೋ ಗಾಢೈರ್ದ್ವಾದಶಭಿರ್ಭುಜೈಃ||
ಬಲಿಷ್ಠವಾದ ಹನ್ನೆರಡು ಭುಜಗಳಿರುವವನು ದ್ವಾದಶೋದ್ದಂಡದೋರ್ದಂಡನು.
ಓಂ ದ್ವಾದಶೋರ್ದಂಡದೋರ್ದಂಡಾಯ ನಮಃ

930. ಓಂ ದ್ವಾದಶಾಂತನಿಕೇತನಃ-
ಭಾ: ದ್ವಾದಶಾನ್ತಂ ಲಲಾಟೋರ್ಧ್ವಂ ಬ್ರಹ್ಮರಂಧ್ರಾವಸಾನಕಂ|
ಪ್ರಕಟೋ ಯೋಗಿನಾಂ ತತ್ರ ದ್ವಾದಶಾಂತನಿಕೇತನಃ||
ಆಜ್ಞಾಚಕ್ರದ ಮೇಲ್ಭಾಗದಿಂದ ಬ್ರಹ್ಮರಂಧ್ರದವರೆಗೂ ಇರುವ ಭಾಗವನ್ನು ದ್ವಾದಶಾರವೆನ್ನುತ್ತಾರೆ. ಯೋಗಿಗಳಿಗೆ ಗಣೇಶನು ದ್ವಾದಶಾರದಲ್ಲಿ (ಸಹಸ್ರಾರ, ಬ್ರಹ್ಮರಂಧ್ರಗಳಲ್ಲಿ) ದರ್ಶನ ನೀಡುತ್ತಾನೆ. ಆದ್ದರಿಂದ ದ್ವಾದಶಾಂತನಿಕೇತನನು.
ಓಂ ದ್ವಾದಶಾಂತನಿಕೇತನಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share