MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 175

249
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 175

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

941 . ಓಂ ಷೋಡಶೇಂದುಕಲಾತ್ಮಕಾಯ ನಮಃ
942 .ಓಂ ಕಲಾಯೈ ಸಪ್ತದಶ್ಯೈ ನಮಃ
943 . ಓಂ ಸಪ್ತದಶಾಯ ನಮಃ
944 . ಓಂ ಸಪ್ತದಶಾಕ್ಷರಾಯ ನಮಃ
945 . ಓಂ ಅಷ್ಟಾದಶ ದ್ವೀಪಪತಯೇ ನಮಃ

941. ಓಂ ಷೋಡಶೇಂದು ಕಲಾತ್ಮಕಃ-
ಭಾ: ಅಮೃತಾ ಮಾನದೇತ್ಯಾದಿ ಷೋಡಶೇಂದುಕಲಾತ್ಮಕಃ|
1. ಅಮೃತಾ 2. ಮಾನದಾ 3. ಪೂಷಾ 4. ತುಷ್ಟಿ 5. ಪುಷ್ಟಿ 6. ರತಿ 7. ಧೃತಿ 8. ಶಶಿನಿ 9. ಚಂದ್ರಿಕ 10. ಕಾಂತಿ 11. ಜ್ಯೋತ್ಸ್ನಾ 12. ಶ್ರೀ 13. ಪ್ರೀತಿ 14. ಅಂಗದ 15. ಪೂರ್ಣ 16. ಪೂರ್ಣಾಮೃತಾ – ಈ ಹದಿನಾರು ಚಂದ್ರಕಲೆಗಳ ಸ್ವರೂಪನಾದ್ದರಿಂದ ಗಣೇಶನು ಷೋಡಶೇಂದುಕಲಾತ್ಮಕನು.
ಓಂ ಷೋಡಶೇಂದುಕಲಾತ್ಮಕಾಯ ನಮಃ

942. ಓಂ ಕಲಾಸಪ್ತದಶೀ-
ಭಾ: ಕಲಾಸಪ್ತದಶೀ ನಾಮ ಪ್ರಸಿದ್ಧಾ ತ್ರಿಪುರಾಗಮೇ|
ತ್ರಯೋದಶಾಕ್ಷರೀ ತುರ್ಯವಿದ್ಯಾಖ್ಯಾ ತ್ವಂ ತದಾತ್ಮಕಃ||
ತ್ರಿಪುರಾಗಮ(ಶ್ರೀವಿದ್ಯಾತಂತ್ರ)ದಲ್ಲಿ ತುರ್ಯವಿದ್ಯಾ ಎಂಬ ನಾಲ್ಕು ಬೀಜಾಕ್ಷರಗಳೊಂದಿಗೆ ಕೂಡಿರುವ ತ್ರಯೋದಶಾಕ್ಷರ ಮಂತ್ರವು ಹೇಳಲ್ಪಟ್ಟಿದೆ. ಅದನ್ನು ಸಪ್ತದಶೀಕಲಾ ಎಂದು ಕರೆಯುತ್ತಾರೆ. ಗಣೇಶನು ಆ ಮಂತ್ರದ ಆತ್ಮನಾದ್ದರಿಂದ ಅವನು ಕಲಾಸಪ್ತದಶೀ ಎಂದು ಕರೆಯಲ್ಪಡುತ್ತಾನೆ.
ಓಂ ಕಲಾಯೈ ಸಪ್ತದಶ್ಯೈ

943 . ಓಂ ಸಪ್ತದಶಃ –
ಭಾ : ಯತ್ತು ಸಪ್ತದಶ ಸ್ತೋಮಂ ಪೃಷ್ಠಸ್ತೋತ್ರಚತುಷ್ಟಯಮ್ ।
ಸಾಮಯುಕ್ತಂ ತದಾತ್ಮತ್ವಾದ್ಭವಾನ್ ಸಪ್ತದಶೋ ಮತಃ ॥
‘ 1 ಅಭಿತ್ವಾ ಶೂರನೋನುಮಃ 2 . ಈಶಾನಮಸ್ಯ ಜಗತಃ 3 . ನತ್ವಾ ವಾಙ್ ಅನ್ತಃ ‘ ಎಂಬ ಈ 3 ಋಕ್ಕುಗಳನ್ನು ವಿವಿಧ ಸಂಖ್ಯೆಗಳಲ್ಲಿ ಪಠಿಸುವುದನ್ನು ಸೋಮಯಾಗದಲ್ಲಿ ಪುಷ್ಠ ಸ್ತೋತ್ರ ಎಂದು ಕರೆಯುತ್ತಾರೆ . ಗಣೇಶನು ಪೃಷ್ಠ ಸ್ತೋತ್ರ ( ಮಹೇಂದ್ರ ಸ್ತೋತ್ರ ) ಸ್ವರೂಪನಾದ್ದರಿಂದ ಸಪ್ತದಶನು.
( ಮೇಲೆ ಹೇಳಿಕೊಂಡ 3 ಋಕ್ಕುಗಳನ್ನು ಒಂದು, ಐದು, ಒಂದು ಆವೃತ್ತಿಗಳಾಗಿ ಪ್ರಶ್ನಿಸಿದರೆ ಮೊದಲನೆಯ ಆವೃತ್ತಿಯು ಐದು, ಒಂದು , ಒಂದಾಗಿ ಪಠಿಸಿದರೆ ಎರಡನೆಯ ಆವೃತ್ತಿಯೂ ಒಂದು, ಒಂದು, ಒಂದರಂತೆ ಪಠಿಸಿದರೆ ಆವೃತ್ತಿಯೂ ಆಗುತ್ತದೆ . ಹೀಗೆ ಪಠಿಸುವುದನ್ನು ಪೃಷ್ಠ ( ಮಹೇಂದ್ರ ಸ್ತೋತ್ರ ) ಎನ್ನುತ್ತಾರೆ.
ಓಂ ಸಪ್ತದಶಾಯ ನಮಃ

944 . ಓಂ ಸಪ್ತದಶಾಕ್ಷರಃ –
ಭಾ. ವೌಷಡಾಶ್ರಾವಯ ಯಜಾಸ್ತು ಶ್ರೌಷಡ್ ಯೇ ಯಜಾಮಹೇ ।
ಇತಿ ತ್ವಮಾಪ್ನುಷೇ ಯಜ್ಞಾನಿತಿ ಸಪ್ತದಶಾಕ್ಷರಃ ॥
ಹೇ ಗಣೇಶ ! ‘ಆಶ್ರವಯ, ಅಸ್ತುಶ್ರೌಷಟ್, ಯಜ, ಯೇ ಯಜಾಮಹೇ, ವಷಟ್ ‘ ಎಂಬ ಯಜ್ಞ ಸಂಬಂಧಿಗಳಾದ ಹದಿನೇಳು ಅಕ್ಷರಗಳಿಂದ ಸಮರ್ಪಿಸುವ ಆಹುತಿಗಳನ್ನು ಸ್ವೀಕರಿಸುವುದರಿಂದ ನೀನು ಸಪ್ತದಶಾಕ್ಷರನು.
ಓಂ ಸಪ್ತದಶಾಕ್ಷರಾಯ ನಮಃ
ಅಷ್ಟಾದಶ ದ್ವೀಪಪತಿ – ರಷ್ಟಾದಶಪುರಾಣಕೃತ್ ।
ಅಷ್ಟಾದಶೌಷಧೀ ಸೃಷ್ಟಿ – ರಷ್ಟಾದಶವಿಧಿಸ್ಸ್ಮೃತಃ ॥

945 . ಓಂ ಅಷ್ಟಾದಶ ದ್ವೀಪಪತಿಃ –
ಭಾ: ಅಷ್ಟಾದಶ ದ್ವೀಪಪತಿಃ ಸಪ್ತೈಕಾದ ಸಂಖ್ಯಯೋಃ ।
ದ್ವೀಪೋಪ ದ್ವೀಪಯೋರ್ಜಂಬುಸಿಂಹಲಾದ್ಯೋರಧೀಶ್ವರಃ ॥
ಜಂಬೋ ಮೊದಲಾದ ಏಳು ಪ್ರಧಾನ ದ್ವೀಪಗಳಿಗೂ ಸಿಂಹಳ ಮೊದಲಾದ ಹನ್ನೊಂದು ದ್ವೀಪಗಳಿಗೂ ಅಧಿಪತಿಯಾದ್ದರಿಂದ ಅಷ್ಟಾದಶ ದ್ವೀಪಪತಿಯು .
( ಕೆಲವರು 7 ಮುಖ್ಯ ದ್ವೀಪಗಳು, ಹದಿನೆಂಟು ಉಪ ದ್ವೀಪಗಳು ಎಂದು ಅಭಿಪ್ರಾಯಪಟ್ಟಿದ್ದಾರೆ. ಹದಿನೆಂಟು ಉಪ ದ್ವೀಪಗಳ ಹೆಸರುಗಳು ಹೀಗಿವೆ –
1 .ರಮ್ಯಾ, 2. ರಮಕ , 3 . ದ್ವಾರಕಾ, 4. ಸಿಂಹಳ , 5.ಕೈವಲ್ಯ, 6. ಮಲಯ, 7. ಅಶ್ವಭದ್ರಾ, 8. ಕೇತು, 9 ಗೋಬಿಲ, 10. ಅವಂತಿ, 11. ಪುಷ್ಕರ, 12 .ಋಷಭ, 13. ರೈವತ, 14 .ನಿಮ್ಲೋಚನಿ, 15 .ಯಾಮ್ಯ, 16. ಪಾರಾವಾರ, 17. ಸೌರ, 18 . ಕೃತಮಾಲ. ಜಂಬು ಮೊದಲಾದ ದ್ವೀಪಗಳ ಹೆಸರುಗಳನ್ನು ಹಿಂದೆ ತಿಳಿಸಿದ್ದೇವೆ .)
ಓಂ ಅಷ್ಟಾದಶ ದ್ವೀಪಪತಯೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share