MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮದ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 26

309
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 26

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

131 . ಓಂ ಶಿವಾಶೋಕಹಾರಿಣೇ ನಮಃ
132 . ಓಂ ಗೌರೀಸುಖಾವಹಾಯ ನಮಃ
133 . ಓಂ ಉಮಾಂಗಮಜಲಾಯ ನಮಃ
134 . ಓಂ ಗೌರೀತೇಜೋಭುವೇ ನಮಃ
135 . ಓಂ ಸ್ವರ್ಧುನೀಭವಾಯ ನಮಃ

131 . ಓಂ ಶಂಭುತೇಜಾಯನಮಃ : –
ಭಾಷ್ಯ :
ಮಹಿಷಾದಿಹತೌ ಭಗ್ನೋತ್ಸಾಹಾಯಾ ವರ್ಧಯನ್ ಬಲಮ್ ।
ದಾಕ್ಷಾಯಣ್ಯಾಃ ಶಿವಾಶೋಕಹಾರೀತಿ ಪರಿಗೀಯತೇ ॥

( ಶಿವಾ+ಶೋಕ) ಮಹಿಷಾಸುರನು ಮುಂತಾದ ರಾಕ್ಷಸರನ್ನು ವಧಿಸುವುದರಲ್ಲಿ ಉತ್ಸಾಹವನ್ನು ಕಳೆದುಕೊಂಡ ಪರಾಶಕ್ತಿಯಲ್ಲಿ ಉತ್ಸಾಹವನ್ನು, ಬಲವನ್ನು ಉಂಟುಮಾಡಿದ್ದರಿಂದ ಆ ಏಕದಂತನು ಶಿವ ಶೋಕಹಾರಿಯಾಗಿದ್ದಾನೆ.
( ಶಿವಾ = ಪಾರ್ವತೀ )
ಓಂ ಶಿವಾಶೋಕಹಾರಿಣೇ ನಮಃ

132 . ಓಂ ಗೌರೀಸುಖಾವಹಃ : –
ಭಾಷ್ಯ :
ಹರ್ಷಂ ಗೌರ್ಯಾಸ್ತಪಸ್ಯಂತ್ಯಾಃ ಕುರ್ವನ್ ಗೌರೀಸುಖಾವಹಃ ।

ತಪಸ್ಸನ್ನು ಆಚರಿಸುತ್ತಿದ್ದ ಗೌರೀದೇವಿಗೆ ಆನಂದದಾಯಕನಾದ್ದರಿಂದ ಗೌರಿ ಪುತ್ರನು ಗೌರಿ ಸುಖಾವಹನಾಗಿದ್ದಾನೆ.
ಓಂ ಗೌರೀಸುಖಾವಹಾಯ ನಮಃ

133 . ಓಂ ಉಮಾಂಗಮಲಜಃ : –
ಭಾಷ್ಯ :
ನಿಜಾಂಗೋದ್ವರ್ತನೋತ್ಥೇನ ಮಲೇನ ಪ್ರತಿಮಾಮುವಾ ।
ಚಕ್ರವ ತದಂತಃ ಪ್ರವಿಶನ್ ಉಮಾಂಗಮಲಜೋ ಮತಃ ॥

ಮಾದೇವಿಯೂ ತನ್ನ ಶರೀರಕ್ಕೆ ಲೇಪನವಾಗಿ ಬಳಿದುಕೊಂಡಿದ್ದ ಹಿಟ್ಟಿನಿಂದ ಒಂದು ಬೊಂಬೆಯನ್ನು ಮಾಡಿದಳು. ಸೂಕ್ಷ್ಮರೂಪನಾಗಿದ್ದ ಗಣೇಶನು ಆ ಗೊಂಬೆಯಲ್ಲಿ ತನ್ನ ಶಕ್ತಿಯಿಂದ ಪ್ರವೇಶಿಸಿ ಸ್ಥೂಲ ರೂಪನಾದನು. ಆಗಿನಿಂದ ಗಣೇಶನನ್ನು ವಿದ್ವಾಂಸರು ಉಮಾಂಗಮಲಜನೆಂದು ಕರೆಯುತ್ತಿದ್ದಾರೆ. ( ಉಮಾದೇವಿಯು ಮೃತ್ತಿಕೆಯನ್ನು ಪೂಸಿಕೊಂಡಿದ್ದಳೆಂದು ಕೆಲವರ ಅನಿಸಿಕೆ. )
ಓಂ ಉಮಾಂಗಮಲಜಾಯ ನಮಃ

134 . ಗೌರೀತೇಜೋಭೂಃ : –
ಭಾಷ್ಯ :
ಚಂಡಿಕಾಭೂಯಮಾತ್ಮಾನಂ ವಿಷ್ಣುಬ್ರಹ್ಮಾದಿ ತೇಜಸಾಂ ।
ಆಧಾರತ್ವಾದಸೌ ಗೌರೀತೇಜೋಭೂರಿತಿ ಕಥ್ಯತೇ ॥

ವಿಷ್ಣು ಬ್ರಹ್ಮಾದಿಗಳ ತೇಜಸ್ಸಿಗೆ ಆಧಾರಭೂತವಾದ, ಚಂಡಿಕಾದೇವಿಯಿಂದ ಪೂರ್ಣವಾದ ಆತ್ಮ ಸ್ವರೂಪನಾದ್ದರಿಂದ ಅವನು ತೇಜೋ ಭೂಃ.
ಓಂ ಗೌರೀತೇಜೋಭುವೇ ನಮಃ

135 . ಓಂ ಸ್ವರ್ಧುನೀಭವಃ : –
ಭಾಷ್ಯ :
ಸ್ಕಂದೋ ಗಂಗೋದ್ಭವಸ್ತಸ್ಮಾದಭೇದಾತ್ ಸ್ವರ್ಧುನೀಭವಃ ।
ಸ್ವರ್ಧುನ್ಯಾ ಉದ್ಭವೋ ಯಸ್ಮಾದಿತಿ ವಾ ಸ್ವರ್ಧುನೀಭವಃ ॥

ಸ್ವರ್ಧುನೀ ಎಂದರೆ ಗಂಗಾನದಿ . ಕುಮಾರಸ್ವಾಮಿಯು ಗಂಗೋದ್ಭವನಾದ್ದರಿಂದ ಸ್ಪರ್ಧುನೀಭವನು. ಗಣೇಶನಿಗೆ ಕುಮಾರಸ್ವಾಮಿಯಲ್ಲಿ ಅಭೇದ ವಿರುವುದರಿಂದ ಅವನೂ ಸಹ ಸ್ವರ್ಧುನೀಭವನೇ ಆಗಿದ್ದಾನೆ. ಅಥವಾ ಮಂದಾಕಿನೀ ನದಿಯಿಂದ ಹುಟ್ಟಿದ್ದರಿಂದ ಗಣೇಶನನ್ನು ಸ್ವರ್ಧುನೀಭವನೆಂದು ಕರೆಯುತ್ತಾರೆ.
ಓಂ ಸ್ವರ್ಧುನೀಭವಾಯ ನಮಃ

ಯಜ್ಞಕಾಯೋ ಮಹಾನಾದೋ ಗಿವರ್ಷ್ಮಾ ಶುಭಾನನಃ ।
ಸರ್ವಾತ್ಮಾ ಸರ್ವದೇವಾತ್ಮಾ ಬ್ರಹ್ಮಮೂರ್ಧಾ ಕಕುಪ್ ಶ್ರುತಿಃ ॥

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share