MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 5

402
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 5

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠ,
ಮೈಸೂರು .

ಇಂದಿನ ನಾಮಾವಳಿ –

17. ಓಂ ಗಜಾನನಾಯ ನಮಃ

17. ಓಂ ಗಜಾನನ : –
ಭಾಷ್ಯ : ‘ ಅನಪ್ರಾಣನ ‘ ಇತ್ಯಸ್ಮಾದ್ಧಾತೋರ್ಣಿಚಿ ತತೋಲ್ಯುಟಿ ।
ಗಜಾನನಯತೀತ್ಯರ್ಥೆ ಸಾಧುರೇಷ ಗಜಾನನಃ ll

ಪ್ರಾಣನಾರ್ಥಕವಾದ ‘ ಅನ ‘ ಧಾತುವಿಗೆ ` ಣಿಚ್ ‘ ಪ್ರತ್ಯಯವನ್ನು ಸೇರಿಸಿ , ಅದಕ್ಕೆ ಲ್ಯುಟ್ ಪ್ರತ್ಯಯವನ್ನು ಜೋಡಿಸಿದಾಗ ಗಜಾನ್ – ಅನಯತಿ ಗಜಗಳನ್ನು ( ಜೀವಿಗಳನ್ನು ) ಪ್ರಾಣವಂತರನ್ನಾಗಿ ಮಾಡುತ್ತಾನೆ ಎಂದು ಅರ್ಥಸಿದ್ಧಿಯಾಗುತ್ತದೆ . ಆದ್ದರಿಂದ ಆ ಅರ್ಥದಲ್ಲಿ ಅವನು ಗಜಾನನನು .
ಭಾ : ಯತ್ತು – ಪ್ರಾಚಾ ಗಜವಕ್ತ್ರ ಗಜಾನನ ಪದಯೋರವಯವಾರ್ಥಾ ಭೇದೇ ಪೌನರುಕ್ತ್ಯಾ ಸಹಸ್ರನಾಮಸ್ತುತಿಬಾಧ ಏವ ; ನ ಹ್ಯೇಕಮೇವ ನಾಮಸಹಸ್ರ – ವಾರಮಾವರ್ತಿತಂ ಸ್ತುತಯೇ ಪರ್ಯಾಪ್ತಂ ಭವತಿ ; ಕಿಂತು ಸ್ಮತಿ ಮಾತ್ರೋಪ ಯೋಗ್ಯವಭವತಿ ; ಅತಃ ಸರ್ವಾಣಿ ನಾಮಾನಿ ಪ್ರತ್ಯೇಕಂ ಪರಸ್ಪರ ಭಿನ್ನಾರ್ಥ ಪ್ರಕಾಶಕಾನ್ಯೇವೇತ್ಯುಕ್ತಮ್ ; ತತ್ ಪ್ರತಿಜ್ಞಾಮಾತ್ರಮ್ ನಾಮಶಬ್ದಸ್ಯ ಪ್ರಾತಿಪದಿಕ ವಾಚಕತ್ವನಾರ್ಥೈಕ್ಯ ೭ ಪಿ ಶಬ್ದಭೇದ ಮಾತ್ರೇಣ ನಾಮ ಸಹಸ್ರಕರಣಕಸ್ತುತಿ ಬಾಧಾಭಾವಾತ್ , ಏತೇನೈಕವ ನಾಮ್ನ ಆವೃತ್ತೌ ತದಾಪತ್ತಿರ್ನಿರಸ್ತಾ |

‘ ಗಜಾನನ , ಗಜವಕ್ತ್ರ ‘ ಎಂಬ ಎರಡು ಪದಗಳೂ ಒಂದೇ ಅರ್ಥವನ್ನು ತಿಳಿಸುತ್ತಿರುವುದರಿಂದ ಸಹಸ್ರನಾಮ ಸ್ತೋತ್ರಕ್ಕೆ ಪುನರುಕ್ತಿದೋಷವು ಬಂದಂತಾಯಿತು . ಒಂದೇ ನಾಮವನ್ನು ಸಾವಿರ ಸಲ ಆವೃತ್ತಿಮಾಡಿದರೆ ಸಹಸ್ರನಾಮದಿಂದ ಸ್ತುತಿಮಾಡಿದ ಫಲ ಸಿಗುವುದಿಲ್ಲ . ಅದು ಕೇವಲ ಸ್ಮೃತಿಮಾತ್ರವಾಗುತ್ತದೆ . ಒಂದೇ ನಾಮವನ್ನು ಸಾವಿರ ಬಾರಿ ಪಠಿಸಿದರೆ ಸಹಸ್ರನಾಮಗಳಿಂದ ಸ್ತುತಿಮಾಡಿದಂತೆ ಆಗುವುದಿಲ್ಲ . ಆದ್ದರಿಂದ ಸಾವಿರನಾಮಗಳೂ ಕೂಡಾ ಒಂದಕ್ಕಿಂತೊಂದು ಭಿನ್ನಾರ್ಥವನ್ನು ತಿಳಿಸುವುದೇ ಆಗಿವೆ ಎಂದು ಗ್ರಹಿಸಬೇಕೆಂದು ಪ್ರಾಚೀನರು ಹೇಳಿದ್ದಾರೆ . ಅದು ಕೇವಲ ಪ್ರತಿಜ್ಞಾ ಮಾತ್ರವೇ ಸರಿ . ಇಲ್ಲಿ ನಾಮ ಎಂದರೆ ಪ್ರಾತಿಪದಿಕ ಎಂದರ್ಥ . ಶಬ್ದ ಎಂದಲ್ಲ . ಆದರಿಂದ ಅರ್ಥವು ಸಮವಾಗಿದ್ದರೂ ಶಬ್ದಭೇದವನ್ನು ಮಾತ್ರ ಸ್ವೀಕರಿಸಿ , ಸಹಸ್ರನಾಮಕ್ಕೆ ಯಾವ ಧಕ್ಕೆಯೂ ಆಗಲಿಲ್ಲ ಎಂದರಿಯಬೇಕು .
ಕಿಂ ಬಹುನಾ ! ಅರ್ಥಭೇದಾತ್ ಶಬ್ದಭೇದಂ ಗೌಣಮಷ್ಯಂಗೀಕೃತ್ಯ ಆಚಾರ್ಯ ಭಗವತ್ಪಾದೈಃ ವಿಷ್ಣುಸಹಸ್ರನಾಮ ಸ್ತುತಿ ನಿರ್ವಾಹಕರಣಾತ್ , ಶಬ್ದಭೇದೇ ನಾಮ ಭೇದಾತ್ ಕೈಮುತಿಕ ನ್ಯಾಯೇನಾಪಿ ತದಬಾಧಃ , ಅತೋ ನಿಗಮ ನಿರುಕ್ತಾದಿ ಪ್ರಸಿದ್ಧನುರೋಧಾದಕ್ಲಿಷ್ಟೋ ೭ ರ್ಥೋ ಯಥಾಲಾಭಂ ವರ್ಣ್ಯತಾಂನಾಮ , ನಪುನಃ ಅರ್ಥಭೇದ ಏವಾಪೇಕ್ಷಿತ ಇತಿ ನಿರ್ಬಂಧೋ ಯುಕ್ತಃ , ಏವಂ ಪ್ರೌಢಿಮತಸ್ತವ ಗಸ್ಥ ಖಾನ್ತಾನಸ್ಥ ಇತಿ ನಾಮೋರೇಕಾರ್ಥತ್ವೇನ ವ್ಯಾಚಕ್ಷಾಣಸ್ಯ ಕಥಂ ನ ಲಜ್ಜಾ, ಕಥಂವಾ ಕಿರೀಟೀ, ಕುಂಡಲೀ, ಹಾರೀ, ವನಮಾಲೀತಿ ನಾಮ್ನಾಂ ತ್ವದೀಯ ಪಾಠರೀತ್ಯಾ ಪುನರುಕ್ತಾನಾಂ, , ಅರ್ಜುನ , ಶೇಷ , ಮನೋಹರ , ಬಲರಾಮ ಪರತ್ವೇನ ಸಂಭವದರ್ಥಾಂತರಾಸಾಮಷ್ಯೇಕ ವಿಧಾನಾರ್ಥಕತ್ವೇನ ತಾವಕಂ ವರ್ಣನಂ ಯುಜ್ಯತಾಮ್ ?
ಶಂಕರ ಭಗವತ್ಪಾದಾಚಾರ್ಯರು ತಮ್ಮ ವಿಷ್ಣುಸಹಸ್ರನಾಮಭಾಷ್ಯದಲ್ಲಿ ಅರ್ಥಭೇದವಿರುವುದರಿಂದ ಗೌಣವಾದ ಶಬ್ದಭೇದವನ್ನೂ ಅಂಗೀಕರಿಸಿದ್ದಾರೆ . ಪ್ರಸ್ತುತನಾಮದಲ್ಲಿ ಶಬ್ದಭೇದವಿರುವುದರಿಂದ ಸಹಸ್ರನಾಮಕ್ಕೆ ಯಾವರೀತಿಯ ಭಂಗವೂ ಆಗಲಿಲ್ಲವೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯವಿಲ್ಲ . ಆದ್ದರಿಂದ ಹೇಳುವುದೇನೆಂದರೇ ವೇದ , ನಿರುಕ್ತಗಳನ್ನು ಅನುಸರಿಸಿ ಪ್ರಸಿದ್ಧಾರ್ಥಕ್ಕೆ ಭಂಗ ಬರದಂತೆ ಸುಲಭವಾದ ಅರ್ಥವನ್ನು ವರ್ಣಿಸಿ ತಿಳಿಸುವುದು ಉತ್ತಮ . ಅರ್ಥಭೇದವು ಖಡ್ಡಾಯವಾಗಿ ಇರಲೇಬೇಕೆನ್ನುವುದು ಯುಕ್ತವಲ್ಲ . ಅರ್ಥಭೇದವು ಇರಲೇಬೇಕೆನ್ನುವ ಪ್ರಾಚೀನಪಂಡಿತರು ‘ ಗಸ್ಥ , ಖಾಂತಾಂತಸ್ಥ ‘ ಎಂಬ ನಾಮಗಳಿಗೆ ಏಕಾರ್ಥವನ್ನು ಯಾವ ಆಧಾರದಮೇಲೆ ತಿಳಿಸಿದರೆಂದು ತಮಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ . ‘ ಕಿರೀಟೀ , ಕುಂಡಲೀ , ಹಾರೀ , ವನಮಾಲೀ ‘ – ಎಂಬ ನಾಮಗಳು ಒಬ್ಬ ವ್ಯಕ್ತಿಯನ್ನೇ ತಿಳಿಸುತ್ತಿರುವುದರಿಂದ ನಿಮ್ಮ ( ಪ್ರಾಚೀನರ ) ಮತಾನುಸಾರವಾಗಿ ಅವುಗಳನ್ನು ಪುನರುಕ್ತಿಗಳೆನ್ನಬೇಕು . ಆದರೇ ಆ ನಾಲ್ಕು ಪದಗಳಿಗೂ ‘ ಅರ್ಜುನ , ಶೇಷ , ಮನೋಹರ , ಬಲರಾಮ ‘ ಎಂದು ನಾಲ್ಕು ಅರ್ಥಗಳನ್ನು ತಿಳಿಸುವ ಅವಕಾಶವಿದ್ದರೂ ಹಾಗೆ ತಿಳಿಸದೇ ಒಬ್ಬನೇ ವ್ಯಕ್ತಿಯು ಆ ನಾಲ್ಕು ಪದಗಳಿಂದಲೂ ಹೇಳಲ್ಪಡುತ್ತಿದ್ದಾನೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸಮಂಜಸವಾಗಿದೆ . ಅಷ್ಟೇ ಅಲ್ಲದೆ ‘ ಲಂಬೋದರ ‘ ಪದವನ್ನು ವಿರಾಡಾತ್ಮನ ಪರವಾಗಿಯೂ , ವಿಘ್ನಪದವನ್ನು ವಾಯುಪರವಾಗಿಯೂ , ಗಜಾನನ ಪದವನ್ನು ಸೂರ್ಯಪರವಾಗಿಯೂ ಅರ್ಥೈಸುವುದು ಬಹುನ್ಯಾಯ ವಿರುದ್ಧವೂ , ಬುದ್ಧಿವಿಷಯವಾಗುವುದರಲ್ಲಿ ಕಷ್ಟದಿಂದ ಕೂಡಿರುವುದೂ , ಕುಸೃಷ್ಟಿಯೂ ಆಗಿದೆ . ಆ ರೀತಿಯಲ್ಲಿ ಅರ್ಥಗಳನ್ನು ಕಲ್ಪಿಸುವುದರಿಂದಲೂ ಅವುಗಳನ್ನು ಪಠಿಸುವುದರಿಂದಲೂ ಯಾವ ರೀತಿಯ ಅದೃಷ್ಟಫಲವೂ ಹುಟ್ಟುವುದಿಲ್ಲ . ಪ್ರಾಮಾಣಿಕರು ಪ್ರಾಚೀನರ ಮತವನ್ನು ಉಪೇಕ್ಷಿಸಬೇಕು .
ಓಂ ಗಜಾನನಾಯ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share