MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮದ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 6

383
Share

 

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 6

ಸಂಸ್ಕೃತದಿಂದ ಕನ್ನಡ ಅನುವಾದ :
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತಪೀಠ, ಮೈಸೂರು.

ಇಂದಿನ ನಾಮಾವಳಿಗಳು :

18. ಓಂ ಭೀಮಾಯ ನಮಃ
19. ಓಂ ಪ್ರಮೋದಾಯ ನಮಃ
20. ಓಂ ಆಮೋದಾಯ ನಮಃ
21. ಓಂ ಸುರಾನಂದಾಯ ನಮಃ
22. ಓಂ ಮದೋತ್ಕಟಾಯ ನಮಃ

18. ಓಂ ಭೀಮ : –
ಭಾಷ್ಯ :
ದುಷ್ಟಾನಾಂಭಯಕಾರಿತ್ವಾತ್ ಭೀಮ ಇತ್ಯುಚ್ಯತೇ ಬುಧೈಃ ।

ದುಷ್ಟಬುದ್ದಿ ಇರುವವರಿಗೆ ಭಯವನ್ನುಂಟುಮಾಡುವುದರಿಂದ ವಿದ್ವಾಂಸರು ಗಣೇಶನನ್ನು ಭೀಮ ಎಂದಿದ್ದಾರೆ .
ಓಂ ಭೀಮಾಯ ನಮಃ

19. ಓಂ ಪ್ರಮೋದ : –
ಭಾಷ್ಯ : ಇಷ್ಟಲಾಭಾತ್ಸುಖಂ ಯತ್ತು ಸಪ್ರಮೋದ ಇತಿ ಸ್ಮೃತಃ ।
ಕೋರಿದುದು ಸಿಕ್ಕಿದಾಗ ಉಂಟಾಗುವ ಸುಖವು ಪ್ರಮೋದವೆಂದು ಹೇಳಲ್ಪಟ್ಟಿದೆ . ಆ ಪ್ರಮೋದವನ್ನು ಕೊಡುವುದರಿಂದಲೂ , ತಾನೇ ಆನಂದರೂಪನಾಗಿ ಇರುವುದರಿಂದಲೂ , ಅವನು ಪ್ರಮೋದನು .
ಓಂ ಪ್ರಮೋದಾಯನಮಃ

20. ಓಂ ಆಮೋದ : –
ಭಾಷ್ಯ : ತತಃ ಪ್ರಾಕ್ ಸುಖಮಾಮೋದಃ ದೃಷ್ಟಾರ್ಥ ಪ್ರಾಪ್ತಿ ನಿಶ್ಚಯಾತ್ |

ಬುದ್ಧಿಯಲ್ಲಿ ದೃಷ್ಟಾರ್ಥವು ಪ್ರಾಪ್ತಿಯಾಗುವುದು ಎಂಬ ನಿಶ್ಚಯವು ಆದನಂತರದ ಸುಖವನ್ನು ಆಮೋದ ಎನ್ನುತ್ತಾರೆ . ಗಣೇಶನು ಆಮೋದಸ್ವರೂಪನು .
ಓಂ ಆಮೋದಾಯ ನಮಃ

21. ಓಂ ಸುರಾನಂದ : –
ಭಾಷ್ಯ :
ಇಷ್ಟಾರ್ಥ ಭೋಗಜನಿತಂ ಸುಖಮಾನಂದ ಉಚ್ಯತೇ |
ಸಸುರೋತ್ಥಃ ಸುರಥ್ಯೋವಾ ಸುರಾನಂದ ಸ್ತದಾತ್ಮನಾ ||

ಇಷ್ಟಾರ್ಥ ಭೋಗಗಳನ್ನು ಅನುಭವಿಸುವುದರಿಂದ ಉಂಟಾಗುವ ಸುಖವನ್ನು ಆನಂದವೆನ್ನುತ್ತಾರೆ . ದೇವತೆಗಳ ಅನುಗ್ರಹದಿಂದಾಗಲೀ , ಒಳ್ಳೇ ಮಾರ್ಗದಲ್ಲಿ ನಡೆಯುವುದರಿಂದಾಗಲೀ ಉಂಟಾಗುವ ಆನಂದವನ್ನು ಸುರಾನಂದವೆನ್ನುತ್ತಾರೆ . ಗಣೇಶನು ಸುರಾನಂದಸ್ವರೂಪನು .
ಓಂ ಸುರಾನಂದಾಯ ನಮಃ

22. ಓಂ ಮದೋತ್ಕಟ : –
ಭಾಷ್ಯ : ಅತ ಏವಾನ್ಯ ವಿಷಯ ಮೋಷಾದಾತ್ಮಕ ಭಾವತಃ ।
ಮದೇನಾವರಣೋತ್ಕ್ರಾಂತ್ಯಾ ಮದೋತ್ಕಟ ಇತಿ ಸ್ಮೃತಃ ||

ಆತ್ಮ ಒಂದೇ ಇರುವುದು ಎಂಬ ಭಾವನೆಯನ್ನು ಅನುಗ್ರಹಿಸಿ ಅನ್ಯ ವಿಷಯಗಳನ್ನು ಹೋಗಲಾಡಿಸುತ್ತಾನಾದ್ದರಿಂದಲೂ ಆ ಭಾವನೆಯಿಂದ ಉಂಟಾದ ಮದವೆಂಬ ಸಂತೋಷದಿಂದ ನಾನಾ ತರಹದ ಆವರಣೆಗಳನ್ನು ದಾಟುವ ಹಾಗೆ ಮಾಡುವುದರಿಂದಲೂ ಗಣೇಶನು ಮದೋತ್ಕಟನು ಎಂದು ತಿಳಿಯಲ್ಪಡುತ್ತಾನೆ .
ಓಂ ಮದೋತ್ಕಟಾಯ ನಮಃ

( ಮುಂದುವರೆಯುವುದು )

(ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share