MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 41

294
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 41

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

212 . ಓಂ ಶ್ಲಿಷ್ಟಜಾನವೇ ನಮಃ
213 . ಓಂ ಸ್ಥೂಲೋರವೇ ನಮಃ
214 . ಓಂ ಪ್ರೋನ್ನಮತ್ಕಟಯೇ ನಮಃ
215 . ಓಂ ನಿಮ್ನನಾಭಯೇ ನಮಃ

211. ಓಂ ಶ್ಲಿಷ್ಟಜಾನುಃ-
ಭಾ: ಜಂಘೋರು ಸಂಧಿಯುಗ್ಮಂ ಚೇದಸ್ಪಷ್ಟಂ ಶ್ಲಿಷ್ಟಜಾನುಕಃ ।

ಮಂಡಿಯು, ತೊಡೆಗಳ ಸಂಧಿ ಭಾಗವು ಕಾಣಿಸದೇ ಇದ್ದರೆ ಅಥವಾ ಸಮಾನವಾಗಿದ್ದರೆ ಅವನು ಶ್ಲಿಷ್ಟಜಾನುವು ಎಂದೆನಿಸಿಕೊಳ್ಳುತ್ತಾನೆ. (ಅನಾರೋಗ್ಯದಿಂದ ನೀರಸವಾಗಿ ಇರುವವರ ಮಂಡಿಯ ಚಿಪ್ಪು ಕೊಬ್ಬರಿಚಿಪ್ಪಿನ ಹಾಗೆ ಹೊರಗೆಬಂದು ಕಾಣಿಸುತ್ತಿರುತ್ತದೆ. ಹಾಗೆ ಕಾಣಿಸುವುದು ಒಳ್ಳೆಯ ಲಕ್ಷಣವಲ್ಲ.)
ಓಂ ಶ್ಲಿಷ್ಟಜಾನವೇ ನಮಃ

212. ಓಂ ಸ್ಥೂಲೋರುಃ-
ಭಾ: ಸ್ಥೂಲೋರುರೂರುಯುಗಲಂ ಸ್ಥೂಲಂ ವೈ ಯಸ್ಯ ಸ ಸ್ಮೃತಃ ।

ಬಲವಾದ ತೊಡೆಗಳು ಇರುವವನಾದ್ದರಿಂದ ಗಣೇಶನು ಸ್ಥೂಲೋರುವು.
ಓಂ ಸ್ಥೂಲೋರವೇ ನಮಃ

213. ಓಂ ಪ್ರೋನ್ನಮತ್ಕಟಿಃ-
ಭಾ: (ಆ) ನಮ್ರೋನ್ನಮತ್ಕಟಿರ್ಯಸ್ಯ ಸ ಪ್ರೋಕ್ತಃ ಪ್ರೋನ್ನಮತ್ಕಟಿಃ ।

ಉನ್ನತವಾದ ಕಟಿಪ್ರದೇಶ(ಸೊಂಟದ ಭಾಗ) ಇರುವವನಾದ್ದರಿಂದ ಪ್ರೋನ್ನಮತ್ಕಟಿಯು.
ಓಂ ಪ್ರೋನ್ನಮತ್ಕಟಯೇ ನಮಃ

ನಿಮ್ನನಾಭಿಃ ಸ್ಥೂಲಕುಕ್ಷಿಃ ಪೀನವಕ್ಷಾ ಬೃಹದ್ಭುಜಃ
ಪೀನಸ್ಕಂಧಃ ಕಂಬುಕಂಠಃ ಲಂಬೋಷ್ಠೋ ಲಂಬನಾಸಿಕಃ

214. ಓಂ ನಿಮ್ನನಾಭಿಃ-
ಭಾ: ಗಾಂಭೀರ್ಯತೋ ನಿಮ್ನನಾಭಿಃ………………..

ಆಳವಾದ ಹೊಕ್ಕಳು ಇರುವುದರಿಂದ ಅವನು ನಿಮ್ನನಾಭಿಯು.
ಓಂ ನಿಮ್ನನಾಭಯೇ ನಮಃ

215. ಓಂ ಸ್ಥೂಲಕುಕ್ಷಿಃ-
ಭಾ: ………………ಸ್ಥೂಲಕುಕ್ಷಿಃ ಪಿಚಂಡಿಲಃ ।
ದೊಡ್ಡಹೊಟ್ಟೆ ಉಳ್ಳವನಾದ್ದರಿಂದ ಗಣೇಶನು ಸ್ಥೂಲಕುಕ್ಷಿ.
ಓಂ ಸ್ಥೂಲಕುಕ್ಷಯೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share