MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 74

269
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 74

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

280 . ಓಂ ಇಕ್ಷುಸಾಗರಮಧ್ಯಸ್ಥಾಯ ನಮಃ
281 . ಓಂ ಇಕ್ಷುಭಕ್ಷಣಲಾಲಸಾಯ ನಮಃ
282 . ಇಕ್ಷುಚಾಪಾತುರೇಕಶಂರಿಯೇ ನಮಃ
283 . ಓಂ ಇಕ್ಷುಚಾಪ ನಿಷೇವಿತಾಯ ನಮಃ
284 . ಓಂ ಇಂದ್ರಗೋಪ ಸಮಾನಶ್ರಿಯೇ ನಮಃ
285 . ಓಂ ಇಂದ್ರವರದಲಶ್ಯಾಮಾಯ ನಮಃ
286 . ಓಂ ಇಂದುಮಂಡಲ ನುರ್ಮಲಾಯ ನಮಃ

280. ಓಂ ಇಕ್ಷುಸಾಗರಮಧ್ಯಸ್ಥಃ-
381. ಇಕ್ಷುಭಕ್ಷಣಲಾಲಸಃ-
ಭಾ: ಇಕ್ಷುಶಬ್ದಾದಿಮಂ ನಾಮಯುಗಲಂ ಪ್ರಕಟಾರ್ಥಕಂ೤
ಇಕ್ಷು ಶಬ್ದವು ಆದಿಯಲ್ಲಿರುವ ಈ ಎರಡು ನಾಮಗಳ ಅರ್ಥವು ಸ್ಪಷ್ಟವಾಗಿದೆ.
ಕಬ್ಬಿನ ರಸದ ಸಮುದ್ರದ ಮಧ್ಯದಲ್ಲಿ ಇರುವವನಾದ್ದರಿಂದ ಅವನು ಇಕ್ಷುಸಾಗರಮಧ್ಯಸ್ಥನು.
ಓಂ ಇಕ್ಷುಸಾಗರಮಧ್ಯಸ್ಥಾಯ ನಮಃ
ಕಬ್ಬನ್ನು ತಿನ್ನುವುದರಲ್ಲಿ ಬಹಳ ಇಷ್ಟವಿರುವವನಾದ್ದರಿಂದ ಅವನು ಇಕ್ಷುಭಕ್ಷಣಲಾಲಸನು.
ಓಂ ಇಕ್ಷುಭಕ್ಷಣಲಾಲಸಾಯ ನಮಃ
ಇಕ್ಷುಚಾಪಾತಿರೇಕಶ್ರೀ ರಿಕ್ಷುಚಾಪನಿಷೇವಿತಃ೤
ಇಂದ್ರಗೋಪ ಸಮಾನಶ್ರೀ ರಿಂದ್ರನೀಲಸಮದ್ಯುತಿಃ೤೤
ಇಂದೀವರದಲಶ್ಯಾಮ ಇಂದುಮಂಡಲ ನಿರ್ಮಲಃ೤

382. ಇಕ್ಷುಚಾಪಾತಿರೇಕಶ್ರೀಃ-
ಭಾ: ಇಕ್ಷುಚಾಪಾತಿರೇಕಶ್ರೀ ರ್ಮದನಾದಧಿಕಕಾಂತಿಮಾನ್‌೤
ಇಕ್ಷುಚಾಪನೆಂದರೆ ಮನ್ಮಥ ಎಂದರ್ಥ. ಮನ್ಮಥನಿಗಿಂತ ಹೆಚ್ಚಾದ ಕಾಂತಿಮಂತನಾದ್ದರಿಂದ ಅವನು ಇಕ್ಷುಚಾಪಾತಿರೇಕಶ್ರೀ.
ಓಂ ಇಕ್ಷುಚಾಪಾತಿರೇಕಶ್ರಿಯೇ ನಮಃ

383. ಓಂ ಇಕ್ಷುಚಾಪ ನಿಷೇವಿತಃ-
ಭಾ: ಚಾಪದೇವತಯಾ ಮೂರ್ತಿಮತ್ಯಾ ಪಂಚಶರೇಣ ವಾ೤
ನಿತ್ಯಂ ಯಃ ಸೇವ್ಯತೇ ಸೋ7ಯಮಿಕ್ಷುಚಾಪನಿಷೇವಿತಃ೤೤
ಧನುಸ್ಸು ಎಂಬ ಆಯುಧದ ಅಧಿದೇವತೆಯು ದೇಹವನ್ನು ಧರಿಸಿ ಗಣೇಶನನ್ನು ಪೂಜಿಸುತ್ತಿದ್ದಾಳೆ. ಆದ್ದರಿಂದ ಅವನು ಇಕ್ಷುಚಾಪನಿಷೇವಿತನು. ಅಥವಾ ಪಂಚಶರನಾದ ಮನ್ಮಥನಿಂದ ನಿತ್ಯವೂ ಸೇವಿಸಲ್ಪಡುವವನಾದ್ದರಿಂದಲೂ ಅವನು ಇಕ್ಷುಚಾಪನಿಷೇವಿತನು.
ಓಂ ಇಕ್ಷುಚಾಪ ನಿಷೇವಿತಾಯ ನಮಃ

384. ಓಂ ಇಂದ್ರಗೋಪ ಸಮಾನಶ್ರೀಃ-
385. ಓಂ ಇಂದ್ರನೀಲ ಸಮದ್ಯುತಿಃ-
386. ಓಂ ಇಂದೀವರದಲಶ್ಯಾಮಃ-
387. ಓಂ ಇಂದುಮಂಡಲನಿರ್ಮಲಃ
ಭಾ: ಏತಸ್ಯೈವಾರಕ್ತರೂಪಂ ಭಾಸ್ವರಾಭಾಸ್ವರಾಸಿತೇ೤
ಶುಕ್ಲಂ ಚ ಭಾಸ್ವರಂ ಧ್ಯೇಯಂ ಕಾಮನಾ ಭೇದತೋ ಜನೈಃ೤೤
ಯುಗಭೇದೇನ ಭೇದಸ್ತತ್ಪುರಾಣೇಪಿ ನಿರೂಪಿತಃ೤
ಇತಿ ಧ್ವನಯಿತುಂ ನಾಮ ಚತುಷ್ಕಂ ಪ್ರಕಟಾರ್ಥಕಂ೤೤
ಗಣೇಶನನ್ನು ಕೋರಿಕೆಗಳಿಗೆ ಅನುಸಾರವಾಗಿ ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆಯ ಬಣ್ಣಗಳಲ್ಲಿ ಇರುವವನ ಹಾಗೆ ಧ್ಯಾನಿಸಬೇಕೆಂದು ಪುರಾಣಗಳು ಹೇಳುತ್ತಿವೆ.
ಮಳೆಗಾಲದಲ್ಲಿ ಹುಟ್ಟುವ ಹುಳುಗಳಂತಹ ಕೆಂಪಾದ ಬಣ್ಣದಿಂದ ಪ್ರಕಾಶಿಸುತ್ತಿರುವವನಾದ್ದರಿಂದ ಅವನು ಇಂದ್ರಗೋಪ ಸಮಾನಶ್ರಿಯನು.
ಓಂ ಇಂದ್ರಗೋಪ ಸಮಾನಶ್ರಿಯೇ ನಮಃ

ಇಂದ್ರನೀಲ ಮಣಿಯಂತೆ ನೀಲಿಬಣ್ಣದ ಅಥವಾ ಕಪ್ಪುಬಣ್ಣದ ಕಾಂತಿಯಿಂದ ಬೆಳಗುತ್ತಿರುವವನಾದ್ದರಿಂದ ಅವನು ಇಂದುಮಂಡಲನಿರ್ಮಲನು.
( ಗಣೇಶನನ್ನು ಒಂದೊಂದು ಯುಗದಲ್ಲಿ , ಒಂದೊಂದು ಬಣ್ಣದಲ್ಲಿ ಧ್ಯಾನಿಸಬೇಕೆಂದು ಕೂಡಾ ಪುರಾಣಗಳು ಹೇಳುತ್ತಿವೆ. ಕಲಿಯುಗದಲ್ಲಿ ಬೆಳ್ಳಗಿರುವ ಗಣೇಶನನ್ನು ಧ್ಯಾನಿಸಬೇಕು. ಆದ್ದರಿಂದಲೇ ಎಲ್ಲರೂ ‘ ಶುಕ್ಲಾಂಬರಧರಂ ‘ ಎಂದು ಆ ಸ್ವಾಮಿಯನ್ನು ಪ್ರಾರ್ಥಿಸುತ್ತಾರೆ. )
ಓಂ ಇಂದುಮಂಡಲ ನಿರ್ಮಾಲಾಯ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share