MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 81

241
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 81

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

414 . ಓಂ ಸುರದ್ವಿಷಾಂ ಲುಪ್ತಶಕ್ತಯೇ ನಮಃ
415 . ಓಂ ವಿಮುಖಾರ್ಚಾನಾಂ ಲುಪ್ತಶ್ರೀಯೇ ನಮಃ
416 . ಓಂ ಲೂತಾವಿಸ್ಫೋಟನಾಶನಾಯ ನಮಃ
417 . ಓಂ ಏಕಾರಪೀಠಮಧ್ಯಸ್ಥಾಯ ನಮಃ
418 . ಓಂ ಏಕಪಾದಕೃತಾಸನಾಯ ನಮಃ

414. ಓಂ ಸುರದ್ವಿಷಾಂ ಲುಪ್ತಶಕ್ತಿಃ –
ದೇವತೆಗಳ ಶತ್ರುಗಳಾದ ರಾಕ್ಷಸರ ಶಕ್ತಿಲೋಪವನ್ನು ಮಾಡಿದ್ದರಿಂದ ಅವನು ಸುರದ್ವಿಷಾಂ ಲುಪ್ತಶಕ್ತಿಯು.
ಓಂ ಸುರದ್ವಿಷಾಂ ಲುಪ್ತಶಕ್ತಯೇ ನಮಃ

415. ಓಂ ವಿಮುಖಾರ್ಚಾನಾಂ ಲುಪ್ತಶ್ರೀಃ –
ಪೂಜಾದಿ ಸತ್ಕ್ರಿಯೆಗಳಲ್ಲಿ ಶ್ರದ್ಧೆ ಇಲ್ಲದವರ ಸಂಪತ್ತನ್ನು ಹರಿಸುತ್ತಾನೆ. ಆದ್ದರಿಂದ ಗಣೇಶನು ವಿಮುಖಾರ್ಚಾನಾಂ ಲುಪ್ತಶ್ರೀ.
ಓಂ ವಿಮುಖಾರ್ಚಾನಾಂ ಲುಪ್ತಶ್ರಿಯೇ ನಮಃ

416. ಓಂ ಲೂತಾವಿಸ್ಫೋಟನಾಶನಃ-
ಭಾ: ದಂತಲೂತಾದಯೋ ರೋಗಾ ಆಂತರಾ ಬಹಿರಾಮಯಾಃ ।
ಸ್ಫೋಟಾದ್ಯಾಸ್ತಾನ್ನಿಹಂತೀತಿ ಲೂತಾವಿಸ್ಫೋಟನಾಶನಃ ॥
ದಂತಲೂತಾ (ಒಸಡಿನ ರೋಗ) ಮೊದಲಾದ ರೋಗಗಳು ಶರೀರದ ಒಳಗಿನ ರೋಗಗಳು. ಸ್ಫೋಟ (ಸಿಡುಬು) ಮೊದಲಾದವುಗಳು ಶರೀರದ ಮೇಲ್ಭಾಗದ ರೋಗಗಳು. ಆ ಎರಡು ರೋಗಗಳನ್ನು ಹೋಗಲಾಡಿ ಸುವವನಾದ್ದರಿಂದ ಅವನು ಲೂತಾವಿಸ್ಫೋಟನಾಶನನು.
ಓಂ ಲೂತಾವಿಸ್ಫೋಟನಾಶನಾಯ ನಮಃ
ಏಕಾರಪೀಠಮಧ್ಯಸ್ಥ ಏಕಪಾದಕೃತಾಸನಃ।
ಏಜಿತಾಖಿಲ ದೈತ್ಯಶ್ರೀರೇಧಿತಾಖಿಲ ಸಂಶ್ರಯಃ॥
ಐಶ್ವರ್ಯ ನಿಧಿರೈಶ್ವರ್ಯಮೈಹಿಕಾಮುಷ್ಮಿಕ ಪ್ರದಃ।
ಐರಂಮದಸಮೋನ್ಮೇಷ ಐರಾವತ ನಿಭಾನನಃ॥

417. ಓಂ ಏಕಾರಪೀಠಮಧ್ಯಸ್ಥಃ-
ಭಾ: ಏಕಾರಪೀಠಮಧ್ಯಸ್ಥ ಸ್ತ್ರಿಕೋಣಾಂತಸ್ಸ್ಥಬಿಂದುಗಃ ।
ತ್ರಿಕೋಣದಲ್ಲಿನ ಬಿಂದುವಿನ ಮಧ್ಯದಲ್ಲಿ ಇರುವವನಾದ್ದರಿಂದ ಅವನು ಏಕಾರಪೀಠಮಧ್ಯಸ್ಥನು.
ಓಂ ಏಕಾರಪೀಠಮಧ್ಯಸ್ಥಾಯ ನಮಃ

418. ಓಂ ಏಕಪಾದಕೃತಾಸನಃ-
ಭಾ: ಕಾಶ್ಯಾಮೇಕಪದಾ ತಿಷ್ಠನ್ನೇಕಪಾದ ಕೃತಾಸನಃ।
ಕಾಶೀಕ್ಷೇತ್ರದಲ್ಲಿ ಗಣೇಶನು ಒಂದೇ ಪಾದದ ಮೇಲೆ ನಿಂತಿದ್ದಾನೆ. ಆದ್ದರಿಂದ ಅವನು ಏಕಪಾದಕೃತಾಸನನು.
ಓಂ ಏಕಪಾದಕೃತಾಸನಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share