MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 84

270
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 84

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

429 . ಓಂ ಓಷಧೀಪತಯೇ ನಮಃ
430 . ಓಂ ಔದಾರ್ಯನಿಧಯೇ ನಮಃ
431 . ಓಂ ಔದ್ಧತ್ಯಧುರ್ಯಾಯ ನಮಃ
432 . ಓಂ ಔದ್ಧತ್ಯಧುರ್ಯಾಯ ನಮಃ
433 . ಓಂ ಸುರನಾಗಾನಾಮಂಕುಶಾಯ ನಮಃ

429. ಓಂ ಓಷಧೀಪತೆ : –
ಭಾ: ಓಷಧೀಪತಿರೌದಾರ್ಯನಿಧಿರಿತ್ಯಾಹ್ವಯೌ ಸ್ಫುಟೌ೤
ಓಷಧಿಗಳಿಗೆ ಪ್ರಭುವಾದ್ದರಿಂದ ಅವನು ಓಷಧೀಪತಿಯು.
ಓಂ ಓಷಧೀಪತಯೇ ನಮಃ

430. ಓಂ ಔದಾರ್ಯನಿಧಿಃ-
ದಾನಿಯನ್ನೂ, ತ್ಯಾಗಶೀಲಿಯನ್ನೂ, ದಯಾಳುವನ್ನೂ, ಮೃದುಹೃದಯನನ್ನೂ, ಉದಾರ ಎನ್ನುತ್ತಾರೆ. ಉದಾರನ ಭಾವವೇ ಔದಾರ್ಯ. ಔದಾರ್ಯಕ್ಕೆ ನಿಧಿಯಾದ್ದರಿಂದ ಗಣೇಶನು ಔದಾರ್ಯನಿಧಿಯು.
ಓಂ ಔದಾರ್ಯನಿಧಯೇ ನಮಃ

431. ಓಂ ಔದ್ಧತ್ಯಧುರ್ಯಃ-
ಭಾ: ಔದ್ಧತ್ಯಮುದ್ಧತತ್ತ್ವಂ ಯತ್ ಸ್ವಭಕ್ತಾನುಜಿಘೃಕ್ಷಯಾ೤
ಸ್ವೋತ್ಕರ್ಷದ್ಯೋತನಂ ತತ್ರ ಶ್ರೇಷ್ಠ ಔದ್ಧತ್ಯಧುರ್ಯಕಃ೤೤
ಭಕ್ತರನ್ನು ಅನುಗ್ರಹಿಸುವ ವಿಷಯದಲ್ಲಿ ತಮ್ಮ ದೊಡ್ಡತನವನ್ನು ಪ್ರಕಾಶಿಸುವವರಲ್ಲಿ ಶ್ರೇಷ್ಠನಾದ್ದರಿಂದ ಅವನು ಔದ್ಧತ್ಯಧುರ್ಯನು.
ಓಂ ಔದ್ಧತ್ಯಧುರ್ಯಾಯ ನಮಃ

432. ಓಂ ಔನ್ನತ್ಯನಿಸ್ವನಃ-
ಭಾ: ಬೃಂಹಿತಂ ಯಸ್ಯ ಸರ್ವೋಚ್ಛಂ ಸ ಸ್ಯಾದೌನ್ನತ್ಯನಿಸ್ವನಃ೤
ಎಲ್ಲಾ ಶಬ್ದಗಳಿಗಿಂತಲೂ ಜೋರಾದ ಘೀಂಕಾರವನ್ನು ಮಾಡುತ್ತಿರುವವನಾದ್ದರಿಂದ ಅವನು ಔನ್ನತ್ಯನಿಸ್ವನನು.
ಓಂ ಔನ್ನತ್ಯನಿಸ್ವನಾಯ ನಮಃ
ಅಂಕುಶಸ್ಸುರನಾಗಾನಾಮಂಕುಶ ಸ್ಸುರವಿದ್ವಿಷಾಮ್‌೤
ಅಃಸಮಸ್ತವಿಸರ್ಗಾಂತಪದೇಷು ಪರಿಕೀರ್ತಿತಃ೤೤

433. ಓಂ ಸುರನಾಗಾನಾಮಂಕುಶಃ –
ಭಾ: ಅಂಕುಶಸ್ಸುರನಾಗಾನಾಂ ತ್ರೈಲೋಕ್ಯಸ್ಯ ನಿಯಾಮಕಃ೤
ಊರ್ಧ್ವಂ ಸುರಾ ಅಧೋ ನಾಗಾ ಮರ್ತ್ಯಲೋಕೋಪಲಕ್ಷಣಮ್‌೤೤
ಮೂರು ಲೋಕಗಳ ನಿಯಾಮಕನಾದ್ದರಿಂದ ಅವನು ಸುರನಾಗಾನಾಮಂಕುಶನು. ಸುರಶಬ್ದವು ಊರ್ಧ್ವಲೋಕಗಳಲ್ಲಿರುವ ದೇವತೆಗಳನ್ನೂ, ನಾಗಶಬ್ದವು ಭೂಮಿಯ ಕೆಳಗಿರುವ ಪಾತಾಳಾದಿ ಲೋಕಗಳನ್ನು ಅಥವಾ ಅಷ್ಟದಿಗ್ಗಜಗಳನ್ನೂ ಹೇಳುತ್ತದೆ. ಆದ್ದರಿಂದ ಸುರನಾಗಶಬ್ದವು ಭೂಲೋಕಕ್ಕೆ ಉಪಲಕ್ಷಣವು. ಹಾಗಾಗಿ ಗಣೇಶನು ಭೂಮಿಯ ನಿಯಾಮಕನೆಂದು ತಿಳಿಯಬೇಕು.
ಓಂ ಸುರನಾಗಾನಾಮಂಕುಶಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share