MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 87

270
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 87

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :
444 .ಓಂ ಕೂಷ್ಮಾಂಡ ಗಣನಾಯಕಾಯ ನಮಃ
445 . ಓಂ ಕಾರುಣ್ಯ ದೇಹಾಯ ನಮಃ
446 . ಓಂ ಕಪಿಲಾಯ ನಮಃ
447 . ಓಂ ಕಥಕಾಯ ನಮಃ
448 . ಓಂ ಕಟಿಸೂತ್ರಭೃತೇ ನಮಃ

444. ಓಂ ಕೂಷ್ಮಾಂಡಗಣನಾಯಕಃ-
ಭಾ: ದುಷ್ಟಗ್ರಹಾಣಾಂ ನೇತಾ ತ್ವಂ ಕೂಷ್ಮಾಂಡಗಣನಾಯಕಃ।
ದುಷ್ಟಗ್ರಹಗಳಾದ ಕೂಷ್ಮಾಂಡಗಣಗಳಿಗೆ ನೇತಾರನಾದ್ದರಿಂದ ಅವನು ಕೂಷ್ಮಾಂಡಗಣನಾಯಕನು.
ಓಂ ಕೂಷ್ಮಾಂಡ ಗಣನಾಯಕಾಯ ನಮಃ

445. ಓಂ ಕಾರುಣ್ಯದೇಹಃ-
ಭಾ: ಕಾರುಣ್ಯದೇಹಃ ಕರುಣಾಮೂರ್ತಿತ್ವಾತ್……
ದೇಹತಾಳಿದ ಕರುಣಾರಸವೋ ಎಂಬಂತೆ ಇರುವುದರಿಂದ ಅವನು ಕಾರುಣ್ಯದೇಹನು.
ಓಂ ಕಾರುಣ್ಯದೇಹಾಯ ನಮಃ

446. ಓಂ ಕಪಿಲಃ-
ಭಾ: …………..ಕಪಿಲೋ ಮುನಿಃ
ಗಣೇಶನು ಕಪಿಲ ಮಹರ್ಷಿಯ ಸ್ವರೂಪನಾದ್ದರಿಂದ ಕಪಿಲನು.
ಓಂ ಕಪಿಲಾಯ ನಮಃ

447. ಓಂ ಕಥಕಃ-
ಭಾ: ವರ್ಣಿತೋ ವಾ7ಸಿ ಕಥಕಃ ಸಂಪ್ರದಾಯಾನ್ ಪ್ರವರ್ತಯನ್‌।
ಹೇ ಗಣೇಶಾ! ನೀನು ಎಲ್ಲಾ ಗ್ರಂಥಗಳಲ್ಲಿಯೂ ಕವಿಗಳೆಲ್ಲರಿಂದಲೂ ಕೀರ್ತಿಸಲ್ಪಟ್ಟಿದ್ದೀಯೆ. ಆದ್ದರಿಂದ ನೀನು ಕಥಕನು. ಅಥವಾ ನೀನು ಸಂಪ್ರದಾಯ ಪ್ರವರ್ತಕನು. ಆದ್ದರಿಂದ ಕಥಕನು.
ಓಂ ಕಥಕಾಯ ನಮಃ

448. ಓಂ ಕಟಿಸೂತ್ರಭೃತ್-
ಭಾ: ರತ್ನಪ್ರೋತಸ್ವರ್ಣಕಾಂಚೀ ಧಾರಣಾತ್ಕಟಿಸೂತ್ರಭೃತ್‌।
ರತ್ನಖಚಿತವಾದ ಚಿನ್ನದ ಉಡುದಾರವನ್ನು ಧರಿಸಿರುವುದರಿಂದ ಅವನು ಕಟಿಸೂತ್ರಭೃತ್.
ಓಂ ಕಟಿಸೂತ್ರಭೃತೇ ನಮಃ
ಖರ್ವಃ ಖಡ್ಗಪ್ರಿಯಃ ಖಡ್ಗ-ಖಾನ್ತಾನ್ತಸ್ಥಃ ಖನಿರ್ಮಲಃ
ಖಲ್ವಾಟಶೃಂಗನಿಲಯಃ ಖಟ್ವಾಂಗೀ ಖದುರಾಸದಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share