MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮದ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 11

539
Share

 

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 11

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

48. ಓಂ ಸಿದ್ಧಿಪ್ರಿಯಾಯ ನಮಃ
49. ಓಂ ಸಿದ್ಧಾಯ ನಮಃ
50. ಓಂ ಸಿದ್ಧಿವಿನಾಯಕಾಯ ನಮಃ
51. ಓಂ ಅವಿಘ್ನಾಯ ನಮಃ
52. ಓಂ ತುಂಬುರವೇ ನಮಃ

48. ಓಂ ಸಿದ್ಧಿಪತಿಃ
ಭಾಷ್ಯ : ಅಣಿಮಾದ್ಯಷ್ಟ ಸಿದ್ಧೀನಾಂ ಪಾತಾ ಸಿದ್ಧಿಪತಿಸ್ತತಃ ।
ಅಣಿಮಾ ಮೊದಲಾದ ಅಷ್ಟ ಸಿದ್ಧಿಗಳನ್ನೂ ರಕ್ಷಿಸುತ್ತಾನೆ. ಆದ್ದರಿಂದ ಸಿದ್ಧಿಪತಿ. ( ಅಣಿನಾದಿ ಸಿದ್ಧಿಗಳನ್ನು ಸಾಧಿಸಿ ಸಿದ್ಧಿರನ್ನು ಚ್ಯುತರಾಗದೇ ಕಾಪಾಡುತ್ತಾನೆ. ಆದ್ದರಿಂದಲೂ ಗಣೇಶನು ಸಿದ್ದಿಪತಿ . )
ಓಂ ಸಿದ್ದಿಪತಯೇ ನಮಃ

49. ಓಂ ಸಿದ್ಧಃ : –
ಭಾಷ್ಯ :
ಗೋರಕ್ಷಾದಿ ಮಹಾಸಿದ್ಧರೂಪತ್ವಾತ್ ಸಿದ್ಧ ಉಚ್ಯತೇ ।

ಗೋರಕ್ಷನಾಥ ಮೊದಲಾದ ಸಿದ್ಧರ ಸ್ವರೂಪನಾದ್ದರಿಂದ ಎಂದೆನಿಸಿಕೊಳ್ಳುತ್ತಾನೆ .
ಓಂ ಸಿದ್ದಾಯ ನಮಃ

೫೦. ಓಂ ಸಿದ್ಧಿವಿನಾಯಕಃ : – ಭಾಷ್ಯ :
ಭಕ್ತ ಸಿದ್ಧಿರ್ವಿಶೇಷೇಣ ನಯನ್ ಸಿದ್ಧಿವಿನಾಯಕಃ |

ವಿಶೇಷವಾಗಿ ಸಿದ್ಧಿಗಳನ್ನು ಆ ಉಂಟುಮಾಡುವುದರಿಂದ ಸಿದ್ಧಿವಿನಾಯಕನು .
ಓಂ ಸಿದ್ಧಿವಿನಾಯಕಾಯ ನಮಃ

ಅವಿಘ್ನಸ್ತುಂಬುರುಃ ಸಿಂಹವಾಹನೋ ಮೋಹಿನೀ ಪ್ರಿಯಃ ।
ಕಟಂಕಟೋ ರಾಜಪುತ್ರಃ ಶಾಲಕಃ ಸಮ್ಮಿತೋ ೭ ಮಿತಃ ||

51. ಓಂ ಅವಿಘ್ನಃ
ಭಾಷ್ಯ :
ಭಾವಪ್ರಧಾನ ನಿರ್ದೆಶಾದವಿತ್ವಂ ಪಶುತಾಂ ಹರನ್ |
ವಿಘ್ನೈರ್ವಿರಹಿತತ್ವಾದ್ವಾ ೭ ಪ್ಯವಿಘ್ನ ಇತಿ ಕಥ್ಯತೇ ||

‘ ಆವಿ – ಫ್ ‘ ಅವಿ ಅಂದರೆ ‘ ಪಶು ‘ ಎಂದರ್ಥ . ಇಲ್ಲಿ ಭಾವಪ್ರಧಾನವನ್ನು ಹೋಗಲಾಡಿಸುವುದರಿಂದ ಗಣೇಶನು ಅವಿಘ್ನನು . ‘ ಅ – ವಿಘ್ನ ‘ ವಿಘ್ನಗಳನ್ನು ತೊಲಗಿಸುವುದರಿಂದಲೂ ಅವಿಘ್ನನು.
ಓಂ ಅವಿಘಾಯ ನಮಃ

52. ಓಂ ತುಂಬುರುಃ : –
ಭಾಷ್ಯ :
ರೋರೂಯಮಾಣಸ್ತುಂಬೇನ ವೈಣಿಕೈರಿತಿ ತುಂಬುರುಃ ।
ಇಮೇ ಗಾಯಂತಿ ವೀಣಾಯಾಂ ಏತಮೇವೇತಿಹಿ ಶ್ರುತಿಃ ||

ವೀಣೆಯನ್ನು ನುಡಿಸುವ ನೈಪುಣ್ಯವುಳ್ಳ ವೈಣಿಕರಿಂದ ಸ್ತುತಿಸಲ್ಪಡುವುದರಿಂದ ತುಂಬುರು ಎಂದು ಹೆಸರು . “ ಸ ಏಷ ಯೇ ಚೈತಸ್ಮಾದರ್ವಾಂಚೋ ಲೋಕಾಸ್ತೇಷಾಂ ಚೇಷ್ಟೇ ಮನುಷ್ಯಕಾಮಾಣಾಂ ಚೇತಿ ತದ್ಯ ಇಮೇ ವೀಣಾಯಾಂ ಗಾಯಂತ್ಯೇತಂ ತೇ ಗಾಯಂತಿ ತಸ್ಮಾತ್ತೇ ಧನಸನಯಃ ‘ ಎಂಬ ಛಾಂದೋಗ್ಯೂಪನಿಷತ್ತಿನ ( ೧-೭-೬ ) ಮಂತ್ರವೂ ಸಹಾ ಇದೇ ಅರ್ಥವನ್ನು ತಿಳಿಸುತ್ತಿದೆ . ಅವನನ್ನು ಗಾಯನ ಮಾಡುವುದರಿಂದ ಎಲ್ಲರೂ ಧನವಂತರಾಗುತ್ತಿದ್ದಾರೆ .
ಓಂ ತುಂಬುರವೇ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share