MP- ಕಲಾ ಪರಂಪರೆ: ಕಲಾಪ್ರತಿಭೆ ಜನಾರ್ಧನ್

1123
Share

 

 

ಸರ್ವೇಜನ ಸುಖಿನೋಭವಂತು.
ಪ್ರಿಯ ವೀಕ್ಷಕರೇ, ಕೊರೊನ ಎಲ್ಲೆಡೆ ಇರುವುದರಿಂದ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡೋಣ, ಅವಶ್ಯಕತೆ ಇದ್ದರೆ ಮಾತ್ರ ಹೊರಬರೋಣ.
ಬಂಧುಗಳೇ ಮೈಸೂರು ಕಲಾಪರಂಪರೇ ಇಂದಿಗೆ 20ನೇ ಅವ್ರುತಿ ತುಂಬಿದೆ, ಇಲ್ಲಿಯವರೆಗೆ ಮೈಸೂರು ಪತ್ರಿಕೆ ಮತ್ತು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ವತಿಯಿಂದ 19ಪ್ರತಿಭಾನ್ವಿತಾ ಕಲಾವಿದರುಗಳನ್ನು ಪರಿಚಯ ಮಾಡಿದ್ದು, ಇಂದಿಗೆ 20ನೇ ಅದ್ಭುತ ಮೈಸೂರಿನ ಕಲಾ ಪ್ರತಿಭೆ….
B. N. ಜನಾರ್ಧನ್ ರವರು. ಶ್ರೀಯುತರು ಒಳ್ಳೆಯ ನುರಿತ ಗಿಟಾರ್ ವಾದಕರು ಮತ್ತು light and sound ಎಂಜಿನಿಯರ್ ಸಹ. ತಂದೆ ದಿವಂಗತ, ಬಂಗಾರಿ ನರಸೀಮಯ್ಯ್ ಮತ್ತು ತಾಯಿ ದಿವಂಗತ ಜಾನಕಮ್ಮ. ಕರ್ನಾಟಕದಲ್ಲೇ ಪ್ರಥಮ್ ಬಾರಿಗೆ ನಾಟಕಕ್ಕೆ ಬೇಕಾದ ಸಿನರಿ ಮತ್ತು ರಂಗ ಸಜ್ಜಿಕೆ ಪರಿಕರಗಳನ್ನು ಪರಿಚಯ ಮಾಡಿದ ಹೆಗ್ಗಳಿಕೆ ಇವರ ತಂದೆಯದು. ಜನಾರ್ಧನ್ ರವರು ಸುಮಾರು 47ವರ್ಷಗಳಿಂದ ತಮ್ಮನ್ನು ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುತ್ತಾರೆ. ಶ್ರೀಯುತರು ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, P. B. ಶ್ರೀನಿವಾಸ್ ಹೀಗೆ ಅನೇಕ ದಿಗ್ಗಜರೊಡನೆ ವೇದಿಕೆ ಹಂಚಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಮಗ ಟ್ರಿನಿಟಿ ಕಾಲೇಜ್ ಆಫ್ ಲಂಡನ್ ಯೂನಿವರ್ಸಿಟಿಯ ಪಿಯಾನೋ ದಲ್ಲಿ 6ಗ್ರೇಡ್ ಉತ್ತಿರ್ಣಆಗಿರುತ್ತಾನೆ ಮಗಳು ಅನನ್ಯ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾಳೆ. ಜನಾರ್ಧನ್ ರವರು ಸರಳ ವ್ಯಕ್ತಿ, ಯಾವುದೇ ಸನ್ಮಾನ ಇಷ್ಟ ಪಡುವವರಲ್ಲ. ನೋಡಿ ತಿಳಿ ಮಾಡಿ ಕಲಿ ಎಂಬ ವ್ಯಕ್ತಿ.
ಇವರ ಸಂಪರ್ಕಕ್ಕೆ :9845759759.
ಸುಸಜ್ಜಿತವಾದ ಸೌಂಡ್ ಸಿಸ್ಟಮ್ ಸಹ ಇವರ ಬಳಿ ಇದೆ.
ವೀಕ್ಷಕ ಬಂಧುಗಳೇ ತಮ್ಮ ಅಮೂಲ್ಯ ಪ್ರೋತ್ಸಾಹದಿಂದ ವೀಕ್ಷಣೆ 8ಲಕ್ಷ ದ ವರೆವಿಗೂ ತಲುಪಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಧನ್ಯವಾದಗಳು.
ಇದು ಮೈಸೂರು ಪತ್ರಿಕೆ ಮತ್ತು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ಪ್ರಸ್ತುತಿ.
ವಂದನೆಗಳು. C. R. ರಾಘವೇಂದ್ರ ಪ್ರಸಾದ್.9880279791.
ಮೈಸೂರು ಪತ್ರಿಕೆ ಸಂಪಾದಕರು.
ವೆಂಕಟ್ ಕೃಷ್ಣ.9901398398.


Share