MP ಕಲಾ ಪರಂಪರೆ ಕಾರ್ಯಕ್ರಮದಲ್ಲಿ-ದೇವಾನಂದ್ ವರಪ್ರಸಾದ್ ,

965
Share

 

 

ನಮಸ್ತೆ ಗೆಳೆಯರೇ, ನಮ್ಮ, ನಿಮ್ಮೆಲ್ಲರ ಕಲಾ ಪಾರಂಪರೆಯ ಈ ದಿನದ ಕಲಾವಿದರು ಶ್ರೀಯುತ ದೇವಾನಂದ್ ವರಪ್ರಸಾದ್ ರವರು,
ನಿಮ್ಮೆಲ್ಲರಿಗೂ ಮೈಸೂರು ಪತ್ರಿಕೆ ಮತ್ತು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ವತಿಯಿಂದ ಸ್ವಾಗತಗಳು.
ಮಾನ್ಯರೆ, ಶ್ರೀ ಯುತ ದೇವಾನಂದ ವರ ಪ್ರಸಾದ್ ರವರು ಮೂಲತಃ ಅರಕಲಗೂಡು ನವರು ಆದರೆ ಇವರ ಕಲಾ ಪ್ರಕಾರ ಮೋಡಿ ಬಂದಿದ್ದು ಮೈಸೂರಿನಲ್ಲಿ.
ಶ್ರೀಯುತರು ಜಾನಪದ, ಕ್ರಾಂತಿ ಗೀತೆಗಳು, ರಂಗ ಗೀತೆಗಳು ಹಾಗೂ ನಾಡು, ನುಡಿ, ಜಲ, ನಾಡ ಸಂಸ್ಕೃತಿಯ ಜಾಗೃತಿ ಗೀತೆಗಳನ್ನು ರಚಿಸಿ ಹಾಡಿ ಕೀರ್ತಿ ಹೊಂದಿರುವ ಕಲಾವಿದರು. ಶ್ರೀಯುತರ ತಂದೆ ಕೆ. T. ಕೇಶವಯ್ಯ್, ತಾಯಿ ಕಾಳಮ್ಮ.
ಇವರ ತಾಯಿಯವರು ಸೊಬನೇ ಪದಗಳನ್ನು ಸುಲಲಿತವಾಗಿ ಹಾಡಿತ್ತಿದ್ದರೆ, ಇವರ ತಂದೆ ರಂಗ ಗೀತೆಗಳನ್ನ ಹಾಡುತಿದ್ದರು. ಕಳಪಾರಂಪರೆಯ ಕುಟುಂಬ.ದೇವಾನಂದ್ ರವರ ಗುರುಗಳು ಜನ್ನಿ ಸರ್ (ಜನಾರ್ಧನ್ )ರಂಗಾಯಣ ಖ್ಯಾತ ಜಾನಪದ ಗಾಯಕರು.
ಶ್ರೀಯುತರು ಪದವೀಧರರು ಮತ್ತು ವೃತ್ತಿಯಲ್ಲಿ ಕಾಲೇಜಿನಲ್ಲಿ ಬೋಧಕರಗಿದ್ದರು, ನಂತರದಲ್ಲಿ ಸಂಗೀತವೇ ಜೀವನ ಎಂದು ತಮ್ಮ ಜಾನಪದ ಕಲೆಯನ್ನೇ ಜೀವನಕ್ಕೆ ಅಳವಡಿಸಿಕೊಂಡು ಏಕತಾರಿ ಎಂಬ ಸಂಸ್ಥೆಯನ್ನು ಕಟ್ಟಿ ಕಳೆದ 20ವರ್ಷಗಳಿಂದ ಕಾಲಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಶಿಷ್ಯವೃಂದವನ್ನು ಹೊಂದಿದ್ದಾರೆ.
ಇತ್ತೀಚಿಗೆ ಕೊರೊನ ಜಾಗೃತಿ ಗೀತೆಗಳು ರಚಿಸಿ ರಾಗ ಸಂಯೋಜಿಸಿ ಮಾಧ್ಯಮಗಳ ಮೂಲಕ ಜಾಗೃತಿ ನೀಡಿರುತ್ತಾರೆ.
ಪ್ರಶಸ್ತಿ ಅನೇಕ ಬಂದಿವೆ

.: ದೇವಾನಂದ್ ರವರ ಸಂಪರ್ಕಕ್ಕೆ

.9900462955

ಕಾರ್ಯಕ್ರಮ ನಿರೂಪಣೆ,

ಡಾ . ಸಿ.ಆರ್ . ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್( ಸಂಸ್ಥಾಪಕರು) ಆಫ್ ದಿ ಸ್ಕೂಲ್ ಆಫ್ ರಿದಮ್ ಮೈಸೂರು , ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್ . ( ಸಿಲಬಸ್ ಟೀಚಿಂಗ್ )


Share