MP- ಕವನಸಂಗ್ರಹ: ಹೋಳಿ ಹಬ್ಬ ಆಶಾಲತಾ,

671
Share

: ಹೋಳಿ ಹಬ್ಬ

ಬಣ್ಣಗಳ ರಂಗಿನಾಟವಾಡುವ ಹಬ್ಬ ಹೋಳಿ
ಜಾತಿ-ಮತಗಳ ಬೇಧವಿಲ್ಲದೆ ಸರ್ವಧರ್ಮದವರು ಆಚರಿಸುವ ಹಬ್ಬ ಹೋಳಿ
ತನ್ನದೇ ಆದ ಆಚಾರ-ವಿಚಾರ, ಸಂಪ್ರದಾಯಗಳನ್ನು ಹೊಂದಿರುವ ಹಬ್ಬ ಹೋಳಿ
ಪ್ರೀತಿ-ವಿಶ್ವಾಸದ, ಗೆಳತನ-ಭಾತೃತ್ವದ ಅರಿವನ್ನು ಮೂಡಿಸುವ ಹಬ್ಬ ಹೋಳಿ
ಫಾಲ್ಗುಣಮಾಸದ ಹುಣ್ಣಿಮೆಯಂದು ಆಚರಿಸುವ ಹಬ್ಬ ಹೋಳಿ ||1||

ಪೌರಾಣಿಕ ಹಾಗೂ ದೈವಿ ಸ್ವರೂಪದ ಮಹತ್ವವುಳ್ಳ ಹಬ್ಬ ಹೋಳಿ
ಶ್ರೀಮನ್ನಾರಾಯಣನು ತನ್ನ ಭಕ್ತನನ್ನು ಹಿರಣ್ಯಕಷಿಪು ಹಾಗೂ ಹೋಲಿಕಾಳಿಂದ ರಕ್ಷಿಸಿದ ದೈವೀ ಮಹಿಮೆಯನ್ನು ಸಾರುವ ಹಬ್ಬ
ಹೋಲಿಕಾಳನ್ನು ಬೆಂಕಿಯಿಂದ ದಹಿಸಿದಕ್ಕಾಗಿ ಈ ಹಬ್ಬಕ್ಕೆ ಹೋಳಿ ಎಂಬ ಹೆಸರು ಬಂದಿದೆ.
ರಾಧಾ- ಕೃಷ್ಣರ ಪ್ರೀತಿಯ ಪ್ರತೀಕವಾಗಿದೆ ಹೋಳಿ ಹಬ್ಬ ||2||

ಶಿವ-ಪಾರ್ವತಿಯರ ಸಮ್ಮಿಲನಕ್ಕಾಗಿ ಕಾಮದೇವನು ತನ್ನ ದೇಹವನ್ನು ತ್ಯೆಜಿಸಿದ
ತ್ಯಾಗದ ಕಥೆಯನ್ನು ತಿಳಿಸುವ ಹಬ್ಬ ಹೋಳಿ
ಧ್ಯಾನಸ್ಥನಾದ ಶಿವನ ಮೇಲೆ ಮದನನು ಹೂ ಬಾಣವನ್ನು ಬಿಟ್ಟ ದಿನ ಹೋಳಿ
ತಪೋಭಂಗಗೊಂಡ ಪರಶಿವನು ಕ್ರೋಧಗೊಂಡು ತನ್ನ ಮೂರನೆ ಕಣ್ಣಿನಿಂದ
ಮದನನನ್ನು ದಹಿಸಿದ ದಿನ ಹೋಳಿ ||3||

ಜೀವನದಲ್ಲಿ ಸಂತೋಷವನ್ನು, ಹೊಸತನವನ್ನು ನೀಡುವ ಹಬ್ಬ ಹೋಳಿ
ವಿಧವಿಧವಾದ ಬಣ್ಣಗಳಿಂದ ಓಕುಳಿಯಾಡುತ್ತ
ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವ ವರ್ಣ ರಂಜಿತ ಹಬ್ಬ ಹೋಳಿ
ವಸಂತಮಾಸದ ಆರಂಭವನ್ನು, ಚಳಿಗಾಲದ ಅಂತ್ಯವನ್ನು ಸೂಚಿಸುವ ಹಬ್ಬ ಹೋಳಿ
ಕಾಮ ದಹನದ ಕಟ್ಟಿಗೆಗಾಗಿ ಹದಿನಾರು ದಿನಗಳು
ವಿಶೇಷ ಅಲಂಕಾರ, ವೇಷಭೂಷಣಗಳಿಂದ ಮನೆ-ಮನೆಗಳ ಮುಂದೆ ನೃತ್ಯ ಮಾಡುತ್ತ ಆಚರಿಸುವ ಹಬ್ಬ ಹೋಳಿ ||4||

ಕಾಮ, ಕ್ರೋಧಾದಿ ಅರಿ ಷಡ್ವರ್ಗಗಳನ್ನು ಸುಟ್ಟು
ಸದಾಚಾರಗಳನ್ನು ರೂಢಿಸಿಕೊಳ್ಳಿ ಎಂದು ಹೇಳುವ ಹಬ್ಬ ಹೋಳಿ
ದುಷ್ಟಶಕ್ತಿಗಳ ನಿರ್ನಾಮದ ದ್ಯೋತಕ ವಾಗಿದೆ ಹೋಳಿ ಹಬ್ಬ,
‘ಕೆಡುಕಿಗೆ ಸೋಲು ಒಳಿತಿಗೆ ಜಯ ‘ ಎಂಬ ಸಂದೇಶ ಸಾರುವ ಹಬ್ಬ ಹೋಳಿ ||5||
: ಎಂ.ಎಸ್. ಆಶಾಲತಾ, ಸಹಾಯಕ ವ್ಯವಸ್ಥಾಪಕರು, ಎಂಡಿಸಿಸಿಬ್ಯಾಂಕ್, ಮದ್ದೂರು (ಚನ್ನಪಟ್ಟಣ)


Share