MP – ಕವನ ಸಂಗ್ರಹ :**ಸಾವಿಲ್ಲದ ಕವನ** _________________ ಪದ ಪದ ಜೋಡಿಸೆ

771
Share

# ಕವನದ ಶೀರ್ಷಿಕೆ :

**ಸಾವಿಲ್ಲದ ಕವನ**
_________________ ಪದ ಪದ ಜೋಡಿಸೆ ಕವನ||
ಭಾವನೆಯ ಪ್ರತಿರೂಪ ಕವನ ||
ಕನಸಿನ ಕಲ್ಪನೆಯೇ ಕವನ||
ಪ್ರಕೃತಿಯ ಚೆಲುವ
ವರ್ಣನೆಯೇ ಕವನ ||
ಹೆಣ್ಣಿನ ಮನ ಸೆಳೆವುದೇ
ಕವನ ||
ಕವಿಯ ಮನದಾಳ ದಾಸೆಯೇ ಕವನ ||
ದುಃಖವ ಮರೆಸಿ ನಗಿಸುವುದು ಕವನ ||
ಸಂತೋಷದ ಪ್ರತಿಬಿಂಬವೇ
ಕವನ ||
ಬಾಳಿನ ಸುಮಧುರ ಕ್ಷಣಗಳಲ್ಲಿ ಉದಯಿಸುವ
ಕವನ ||
ನೊಂದ ಹೃದಯಕೆ
ಸಾಂತ್ವನ ಈ ಕವನ ||
ಪ್ರೀತಿ, ಪ್ರೇಮ ,ಕಾಮನೆಯ,
ಬಣ್ಣವೇ ಕವನ ||
ಪ್ರಚಲಿತ ಸುದ್ದಿಗಳ
ರಚನೆಯೇ ಕವನ ||
ಅಂತರಾತ್ಮದಲಿ ಮೊಳೆತು
ಚಿಮ್ಮಿ ಹುಟ್ಟುವುದೇ ಕವನ ||
ಕವನಕೆ , ಕವನ ಸೇರಿ ಬೃಹದಾಕಾರವಾಗಿ ಬೆಳೆದು ,
ಹೆಸರು ಕೊಡುವುದೇ ಕವನ ||
ಸಾವಿಲ್ಲದ ಕವನ ||
ಈ ಸಾವಿಲ್ಲದ ಕವನ ||

ಎನ್ .ಸುಧೀರ್ ಕುಮಾರ್
ಮೈಸೂರು.
(ಕೋಟೆ ಚನ್ನಪಟ್ಟಣ)


Share