MP – ಗಾನಸಿರಿ : ಸುದೀಕ್ಷಾ……..

904
Share

 

ಸಂಚಿಕೆ 1

ಮೈಸೂರು- ಕುಮಾರಿ ಸುದೀಕ್ಷಾ ಏಳನೇ ತರಗತಿ:  ದೇವರನಾಮ ಹಾಗೂ ಭಕ್ತಿಗೀತೆ

ಮೈಸೂರು ಪತ್ರಿಕೆ ಓದುಗರಿಗೆ ಪ್ಲವನಾಮ ಸಂತ್ಸರದ ಶುಭಾಶಯಗಳೊಂದಿಗೆ  ವಿನೂತನ ಕಾರ್ಯಕ್ರಮ *MP- ಗಾನಸಿರಿ* ಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ .ಕಳೆದ  ದಸರೆಯ ಸಮಯದಲ್ಲಿ ಹತ್ತು ದಿನಗಳು ಇಂತಹದೇ ಕಾರ್ಯಕ್ರಮ ನೀಡಿ ಮೈಸೂರು ಪತ್ರಿಕೆಯು ಮೆಚ್ಚುಗೆ ಗಳಿಸಿತ್ತು  ಕೇಳುಗರ ಕೋರಿಕೆಯ ಮೇರೆಗೆ ವಾರಕ್ಕೊಮ್ಮೆ ಇನ್ನು ಮುಂದೆ ಇದೇ ಕಾರ್ಯಕ್ರಮವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ .ಎಲ್ಲ ವರ್ಗದ ಎಲ್ಲ ವಯಸ್ಸಿನ ಹಾಡುಗಾರರಿಗೆ ಈ ವೇದಿಕೆಯನ್ನು  ಮೀಸಲಿರಿಸಲಾಗಿದೆ.

ವಾರದ ಒಂದುದಿನ 2 ಹಾಡುಗಳನ್ನು  ಹಾಡುಗಾರರು ಶುದ್ಧ ಕಂಠದಲ್ಲಿ ಹಾಡಿ  ಲ್ಯಾಂಡ್ ಸ್ಕೇಪ್ ನಲ್ಲಿ ಚಿತ್ರೀಕರಿಸಿ ಕಳುಹಿಸಬೇಕು.ಬರಿ ಶೃತಿಯೊಂದಿಗೆ ಹಾಡಬೇಕು. ಪಕ್ಕವಾದ್ಯ ಇಟ್ಟುಕೊಳ್ಳುವಂತಿಲ್ಲ. ಒಂದು  ಪಾಸ್ ಪೋರ್ಟ್ ಅಳತೆಯ ಫೋಟೋ ಕಳುಹಿಸಬೇಕು.
ಸ್ವ ಪರಿಚಯ ಮೊದಲ ಹಾಡಿಗೆ ಮಾಡಿದರೆ ಸಾಕು. ಎರೆಡನೆ ಹಾಡಿನ ವಿವರ ನೀಡಬೇಕು.
ವಿವರ – ಪೋಷಕರ ಹೆಸರು
ಅಭ್ಯಾಸ ಮಾಡಿದ ಗುರುಗಳ ಹೆಸರು
ಗುರುಗಳ ದೂರವಾಣಿ ಸಂಖ್ಯೆ ನೀಡಬಹುದು.
ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ – 6361130459

Share