MP-ಟಾಕ್: ಏಕೆ ಬೇಕು? ಏಕೆ ಬೇಡ?:10th and 12th ಪರೀಕ್ಷೆ

1014
Share

 

 

 

ಇಂದಿನ ಎಂಪಿ- ಟಾಕ್ ಕಾರ್ಯಕ್ರಮದಲ್ಲಿ ‘ಏಕೆ ಬೇಕು? ಏಕೆ ಬೇಡ?’ ಹತ್ತು ಹನ್ನೆರಡರ ಪರೀಕ್ಷೆ!! ಎಂಬ ವಿಷಯವಾಗಿ ಚರ್ಚಿಸಲಾಗುತ್ತಿದೆ.
ಇಂದಿನ ಕಾರ್ಯಕ್ರಮದಲ್ಲಿ ಹಲವು ವೀಕ್ಷಕರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಹೇಳುವುದಾದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗಳು ಬೇಡ ಎಂಬುದೇ ಆಗಿದೆ.
ವಿದ್ಯಾರ್ಥಿಗಳು ಪೋಷಕರು ಬಹಳ ಆತಂಕದಲ್ಲಿದ್ದು ಪರೀಕ್ಷೆ ನಡೆಸುವುದರಿಂದ ಕರೋನಾ ಹರಡುವ ಭಯ ಆವರಿಸಿದೆ.
ಆದರೆ ಪರೀಕ್ಷೆ ಎಂಬುದು ಒಬ್ಬ ವಿದ್ಯಾರ್ಥಿಯನ್ನು ಅಳೆಯುವ ಮಾನದಂಡ ಇದನ್ನು ಸರಕಾರ ಹೇಗೆ ನಾಜೂಕಾಗಿ ನಿಭಾಯಿಸಬಹುದು ? ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ಗಳೇ ಹನ್ನೆರಡನೇ ತರಗತಿ ಸಿಬಿಎಸ್ ಸಿ ಪರೀಕ್ಷೆಗಳು ಬೇಡ ಎಂದು ಹೇಳಿರುವುದರಿಂದ ರಾಜ್ಯ ಸರ್ಕಾರಕ್ಕೆ ಬೇರೆ ಮಾರ್ಗವೇ ಇಲ್ಲದೆ ಪ್ರಧಾನಿಗಳ ನಿರ್ಧಾರಕ್ಕೆ ಪೂರಕವಾಗಿ ಇರ ಬೇಕಾಗಿದೆ .ಆದರೆ ಮೊದಲಿಂದಲೂ ಪರೀಕ್ಷೆ ಬೇಕೇ ಬೇಕು ಎಂಬ ಹಠ ಧೋರಣೆಯಲ್ಲಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿಲುವಿಗೆ ಏನಾಗಬಹುದು? ಸುರೇಶ್ ಅವರ ಧೋರಣೆ ಗೆಲ್ಲುವುದೊ ಸೋಲುವುದೊ ಕಾದು ನೋಡಬೇಕಾಗಿದೆ ಎಂಬುದೇ ಇಂದಿನ ಎಂಪಿ -ಟಾಕ್ ನಲ್ಲಿ ಕೇಳಿಬಂದಿದೆ.


Share