MP-ಟಾಕ್ -ಮೈಸೂರು ಜಿಲ್ಲೆ ಮಲೇರಿಯಾ, ಮುಕ್ತ ಎಂದ ಡಾ.ಚಿದಂಬರಂ

360
Share

 

ಇಂದಿನ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಡಾ . ಚಿದಂಬರಮ್ ಅವರು ಮಲೇರಿಯಾ ವಿಷಯದ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ ಮೈಸೂರು ಜಿಲ್ಲೆಯಲ್ಲಿ ಮಲೇರಿಯಾ ಸೋಂಕು ಮುಕ್ತ ಮಾಡಲಾಗಿದೆ ಎಂದು ಅವರು ತಿಳಿಸಿ ಜನತೆಯಲ್ಲಿ ಅರಿವು ಉಂಟು ಮಾಡಿ ಅಂತ ಕಾರ್ಯಕ್ರಮವನ್ನು ಬಗ್ಗೆ ತಿಳಿಸಿಕೊಟ್ಟಿದ್ದಾರೆೆ.

ಯೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ , ಮೈಸೂರು ಜಿಲ್ಲೆ . ಮಲೇರಿಯಾ ಮುಕ್ತ ಎಂದು ಪ್ರಕಟಿಸಲು ಮುಂದಾಗಿದೆ
ಮಲೇರಿಯಾ ನಿರ್ಮೂಲನೆಗೆ ಪಣ ತೊಟ್ಟಿ ನಿಂತಿದ್ದು ಮೂರು ನಾಲ್ಕು ವರ್ಷದಿಂದ ಮೈಸೂರು ಜಿಲ್ಲೆಯಲ್ಲಿ ಮಾರಾಯ ಮಲೇರಿಯಾ ಸೋಂಕೂ ಇಲ್ಲದಂತೆ ಜಿಲ್ಲೆಯನ್ನು ನೋಡಿಕೊಳ್ಳಲಾಗಿದೆ ಎಂದು ಡಾಕ್ಟರ್ ಚಿದಂಬರಂ ಅವರು ತಿಳಿಸಿದ್ದಾರೆ || ಮಲೇರಿಯಾ ಮುಕ್ತ ಸಮಾಜ ನಿರ್ಮಿಸೋಣ || ಮಲೇರಿಯಾ ರೋಗ ಮುಕ್ತ ಜಿಲ್ಲೆಗಾಗಿ ( Elimination of Malaria ) ಎಲ್ಲರ ಜವಾಬ್ದಾರಿ || ಮಲೇರಿಯಾದಿಂದ ನೀವು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿ ,
1. ಮಲೇರಿಯಾ ಜ್ವರ ಎಂದರೇನು ? ಮಲೇರಿಯಾ ಜ್ವರ ಪ್ಲಾಸ್ಕೋಡಿಯಂ ವೈವಾಕ್ಸ್ / ಫಾಲ್ಸಿಫಾರಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುವ ಖಾಯಿಲೆ , ಇದು ಸೋಂಕು ಹೊಂದಿದ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ , ಈ ಸೊಳ್ಳೆಗಳು ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಚ್ಚುತ್ತವೆ . 2. ಈ ರೋಗದ ಮುಖ್ಯ ಲಕ್ಷಣಗಳು ಯಾವುದು ? ಚಳಿ / ನಡುಕ – ಜ್ವರ – ಬೆವರುವುದು ಇವು ಮಲೇರಿಯಾದ ಮುಖ್ಯ ಲಕ್ಷಣಗಳು , ಪ್ಲಾಸ್ಕೋಡಿಯಂ ಫಾಲ್ಸಿಫಾರಂನಿಂದ ತೀವ್ರತರವಾದ ಜ್ವರದ ಜೊತೆಗೆ ಮರಣ ಸಂಭವಿಸಬಹುದು . 3. ರೋಗ ಪತ್ತೆ ಹೇಗೆ ? ರಕ್ತ ಪರೀಕ್ಷೆಯಿಂದ ರೋಗ ಪತ್ತೆ ಮಾಡಲಾಗುವುದು . ಇದು ಅತ್ಯಂತ ಸುಲಭ ವಿಧಾನ . ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲಾಗುವುದು . 4. ಈ ಜ್ವರಕ್ಕೆ ಚಿಕಿತ್ಸೆ ಏನು ? ಮಲೇರಿಯಾ ಜ್ವರಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ಲಭ್ಯವಿದ್ದು , ಸಂಪೂರ್ಣ ಚಿಕಿತ್ಸೆಯಿಂದ ಜ್ವರ ಗುಣಮುಖವಾಗುತ್ತದೆ . 5 , ಈ ರೋಗ ನಿಯಂತ್ರಣ ಹೇಗೆ ? ಅನಾಫಿಲಿಸ್ ಸೊಳ್ಳೆಗಳ ನಿಯಂತ್ರಣ ಮಲೇರಿಯಾ ರೋಗದ ಹತೋಟಿಗೆ ಮುಖ್ಯ ವಿಧಾನ . ಈ ಸೊಳ್ಳೆಗಳು ಸ್ವಚ್ಛ ಹರಿಯುವ ನೀರು , ಮಳೆ ನೀರು ಇತ್ಯಾದಿಗಳಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಕ್ರಮವಹಿಸಬೇಕು . ಸೊಳ್ಳೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳು : ಎಲ್ಲಾ ನೀರಿನ ತೊಟ್ಟಿಗಳು , ಡ್ರಮ್‌ಗಳು , ಬ್ಯಾರಲ್‌ಗಳು , ಏರ್ ಕೂಲರ್ , ತೊಟ್ಟಿ ಇತ್ಯಾದಿಗಳನ್ನು ವಾರಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು . > ನೀರನ್ನು ಖಾಲಿ ಮಾಡಲು ಸಾಧ್ಯವಿಲ್ಲದ ವಸ್ತುಗಳಾದ ಟೈರು , ಎಳನೀರಿನ ಚಿಪ್ಪು , ಮರದ ಪೊಟರೆಯಲ್ಲಿ , ಹೂವಿನ ಕುಂಡಗಳ ತಟ್ಟೆಗಳಲ್ಲಿ , ಒಡೆದ ಬಾಟಲಿ , ಕುಡಿದು ಬಿಸಾಡಿದ ಪ್ಲಾಸಿಕ್ ಲೋಟ , ಬಾಟಲ್ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು . > ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸುವುದು , ಮೈತುಂಬ ಬಟ್ಟೆ ಧರಿಸುವುದು , ಸೊಳ್ಳೆಗಳ ಕಚ್ಚುವಿಕೆಯಿಂದ ರಕ್ಷಣೆ ಪಡೆಯುವುದು , > ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡುವುದು , ಸೊಳ್ಳೆಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಅತಿ ಮುಖ್ಯ : ಸಾರ್ವಜನಿಕರು ಸೊಳ್ಳೆಗಳ ನಿಯಂತ್ರಣದಲ್ಲಿ ಮುತುವರ್ಜಿವಹಿಸಿ ಭಾಗವಹಿಸದಿದ್ದರೆ , ಸೊಳ್ಳೆಗಳ ನಿಯಂತ್ರಣ ಅಸಾಧ್ಯವಾಗುತ್ತದೆ . ಸ್ವಚ್ಛತೆ , ನೈರ್ಮಲ್ಯತೆ ಕಾಪಾಡಿ . * ನೀರು ನಿಲ್ಲದಂತೆ ಎಚ್ಚರ ವಹಿಸಿ , ಮಲೇರಿಯಾ , ಡೆಂಗ್ಯೂ ಮತ್ತು ಚಿಕುಂಗುನ್ಯಾ ಜ್ವರದಿಂದ ಪಾರಾಗಿ 2020 ನೇ ಇಸವಿಗೆ ಮೈಸೂರು ಜಿಲ್ಲೆಯನ್ನು ಮಲೇರಿಯಾ ಮುಕ್ತ ( Elimination of Malaria ) ಜಿಲ್ಲೆಯಾಗಿ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು , ಇದನ್ನು ಯಶಸ್ವಿಗೊಳಿಸಲು ಸಾರ್ವಜನಿಕರು , ಇತರೆ ಇಲಾಖೆಗಳು ಸಹಕರಿಸಲು ಮನವಿ ” ಪ್ರಕಟಣೆ : ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ , ಮೈಸೂರು ಜಿಲ್ಲೆ , ಮೈಸೂರು . #


Share