MP- ಟಾಕ್ : 22-5-21:ಕರೋನ- ಶವಸಂಸ್ಕಾರ/ ಗೊಂದಲ ನಿವಾರಣೆ- ವೇದ .ಬ್ರಹ್ಮ. ಶ್ರೀ. ವಿಶ್ವನಾಥ ಶಾಸ್ತ್ರಿ

1610
Share

 

 

ಶವಸಂಸ್ಕಾರ ಬಗ್ಗೆ ಇರುವ ಗೊಂದಲ ನಿವಾರಣೆಯನ್ನು ಅಂದರೆ ಕರೊನ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಶವವನ್ನು ಅಂತ್ಯಸಂಸ್ಕಾರ (ಶವಸಂಸ್ಕಾರ) ಮಾಡಲು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕುಟುಂಬದವರಿಗೆ ಕೊಡದೆ ಇರುವುದರಿಂದ ಹೇಗೆ ಸಂಸ್ಕಾರ ಮಾಡಬೇಕು ಮತ್ತು ಯಾವಾಗ ಮಾಡಬಹುದು ಎಂಬುದರ ಬಗ್ಗೆ ವೇದ ಬ್ರಹ್ಮ ಶ್ರೀ ವಿಶ್ವನಾಥ್ ಶಾಸ್ತ್ರಿಯವರು ಸರಳವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ

ಯಾವುದೇ ಪಕ್ಷಿ ಪ್ರಾಣಿ ಮನುಷ್ಯರೇ ಆಗಲಿ ಹುಟ್ಟಿತೆಂದರೆ ಅದರ ಹಿಂದೆ ಸಾವು ನಿಶ್ಚಿತ. ಮನುಷ್ಯನಾಗಿ ಹುಟ್ಟಿ ನಾನು ಇಂದು ಜೀವಿ ಸುತ್ತಿರುವೆನೆಂದರೆ ಅದಕ್ಕೆ ಕಾರಣೀಭೂತರು ತಂದೆ ತಾಯಿಗಳು.
ಎಷ್ಟೇ ಕಷ್ಟಕಾರ್ಪಣ್ಯಗಳಿದ್ದರೂ ತಮ್ಮ ಮಕ್ಕಳ ಏಳಿಗೆಯೊಂದನ್ನೇ ಬಯಸುವ ತಂದೆತಾಯಿಗಳು ಒಂದೊಮ್ಮೆ ಗತಿಸಿದ ರೆಂದರೆ ಅವರಿಗೆ ಅವರ ಮಕ್ಕಳಾದವರು ವಿಧಿಪೂರ್ವಕವಾಗಿ ಅವರಿಗೆ ಕೃತಜ್ಞತಾಪೂರ್ವಕವಾಗಿ ಅವರ ಅಂತ್ಯ ಸಂಸ್ಕಾರಗಳನ್ನು ಮಾಡಲೇ ಬೇಕು.ಇಂದು ಕರೋನಾ ಎಂಬ ಪೆಡಂಭೂತ ಇಡೀ ಲೋಕಕ್ಕೆ ಆವರಿಸಿ ಪ್ರತಿಯೊಬ್ಬರ ಬದುಕನ್ನು ದುಸ್ತರಗೊಳಿಸಿದೆ.
ತರಗೆಲೆ ಉದುರುವಂತೆ ಪ್ರಾಣ ಪಕ್ಷಿಗಳು ಹಾರಿ ಹೋಗುತ್ತಿವೆ.ಇಂಥ ಸಂದರ್ಭದಲ್ಲಿ ತಂದೆ ಅಥವಾ ತಾಯಿ ಇಹಲೋಕ ತ್ಯಜಿಸಿದಾಗ ಅವರ ಪುತ್ರರು ಅಥವಾ ಕರ್ತೃ ಗಳು ಔರ್ಧ್ವದೇಹಿಕ ಕರ್ಮಗಳನ್ನು ಅಥವಾ ಮುಂದಿನ ವಿಧಿವಿಧಾನಗಳನ್ನು ಹೇಗೆ ನಡೆಸಬೇಕೆಂಬ ಜಿಜ್ಞಾಸೆ ಸಹಜವಾಗಿ ಎಲ್ಲರಲ್ಲೂ ಅದರಲ್ಲೂ ಸಂಪ್ರದಾಯಸ್ಥರನ್ನು ಕಾಡುವುದು ಸರ್ವೇಸಾಮಾನ್ಯ. ಇಂಥ ಶ್ರೀಸಾಮಾನ್ಯನ ಮನಸ್ಸಿನಲ್ಲಿ ಉದ್ಭವವಾಗುವ ಅನೇಕ ವಿಷಯಗಳಿಗೆ ಇಂದಿನ ಮೈಸೂರು ಪತ್ರಿಕೆ ಎಂಪಿ – ಟಾಕ್ ನಲ್ಲಿ ವೇದಬ್ರಹ್ಮ ಶ್ರೀ ವಿಶ್ವನಾಥ ಶಾಸ್ತ್ರಿಗಳು ಕೆಲವೊಂದು ವಿಷಯಗಳನ್ನು ಸವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ .
ಪಂಚಭೂತಗಳಿಂದ ನಿರ್ಮಿತವಾಗಿರುವ ಈ ದೇಹ ಪಂಚಭೂತಗಳಲ್ಲಿ ಲೀನ ಮಾಡುವುದು ಪ್ರತಿ ಒಬ್ಬ ಕರ್ತ್ರುವಿನ ಕರ್ತವ್ಯ. ಉಪಕಾರಕ್ಕೆ ಪ್ರತಿ ಉಪಕಾರದ ಕೃತಜ್ಞತಾ ಪೂರ್ವಕ ಅಭ್ಯಾಸ. ಪ್ರತಿಯೊಬ್ಬರೂ ಅವರವರ ಸಂಪ್ರದಾಯ ಕ್ಕೆ ತಕ್ಕಂತೆ ಮಾಡಲೇಬೇಕು.
ಕರೋನಾ ಸಂಕಷ್ಟದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಗೌರವಿಸಿ ಸಂದರ್ಭ ಅನುಸಾರ ಔರ್ಧ್ವದೇಹಿಕ ಕರ್ತವ್ಯಗಳನ್ನು ಕರ್ತೃ ಮಾಡಲೇ ಬೇಕು.
ಒಂದು ವೇಳೆ ರ್ಕರ್ತೃವಿಗೆ ಸಂಕಷ್ಟ ಒದಗಿದಲ್ಲಿ ಅದನ್ನು ಯಾವಾಗ ಹೇಗೆ ಮಾಡಬೇಕೆಂದು ವಿಶ್ವನಾಥ ಶಾಸ್ತ್ರಿಗಳು ಪ್ರಶ್ನೋತ್ತರ ಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ವೀಕ್ಷಿಸಿ


Share