mp ಫೋಕಸ್- ಕಾರ್ಮಿಕರು……..! ……..!

54
Share

 

*ಕಾರ್ಮಿಕರು……..!*

ಉತ್ತು, ಬಿತ್ತು ಒಪ್ಪತ್ತು ತಿಂದು, ಜಗಕ್ಕೆ ಅನ್ನ ನೀಡುವ ಅನ್ನದಾತರಿವರು ಕಾರ್ಮಿಕರು,

ದೇಶ ಕಾಯೋ ಪ್ರತ್ಯಕ್ಷ ದೈವವಿವರು, ಚಳಿ, ಮಳೆ, ಗಾಳಿಯೆನ್ನದೆ ಗಡಿಯಲ್ಲಿ ನಿಂತ ಯೋಧರು, ಭಾರತಾಂಬೆಯ ಹೆಮ್ಮೆಯ ಪುತ್ರರಿವರು ಕಾರ್ಮಿಕರು.

ತಂತ್ರ, ಮಂತ್ರಗಳ ಗೋಜಿಲ್ಲ, ಯಂತ್ರಗಳೇ ಜೀವನವೆಲ್ಲಾ, ದುಡಿವ ಕಾರ್ಖಾನೆಯ ಯೋಗಿಯಿವರು, ಕಾರ್ಮಿಕರು.

ರಕ್ಷಕರಿವರು, ರಜೆಯಿಲ್ಲದೆ ದುಡಿಯುವವರು, ಶಾಂತಿ, ನೆಮ್ಮದಿಯ ನೀಡಿಹ ಹರಿಕಾರರು, ಆರಕ್ಷಕರಿವರು ಕಾರ್ಮಿಕರು.

ರಕ್ತದಲ್ಲೇ ಮಿಂದೇಳುವರು, ಸಾವು, ನೋವ ತಪ್ಪಿಸಿ ಬದುಕು ನೀಡುವ ಹರಿಯ ಅಪರಾವತಾರ ವೈದ್ಯರಿವರು, ಕಾರ್ಮಿಕರು.

ಕಪ್ಪು ತೊಟ್ಟು ತಪ್ಪೆಸಗಿದವರಿಗೆ ಶಿಕ್ಷೆ ಕೊಡಿಸೋ ಕರಿ ಕೋಟಿನ ವಕೀಲರಿವರು ಕಾರ್ಮಿಕರು.

ಹಗಲು, ಇರಳುನ್ನದೆ ಕೆಲಸವ ಮಾಡುವವರು, ಸಮಾಜ ಸುಧಾರಣೆಯ ಕನಸು ಹೊತ್ತ ಹರಿಕಾರರಿವರು, ಮಾಧ್ಯಮದ ಗೆಳೆಯರಿವರು, ಕಾರ್ಮಿಕರು.

ಚಪ್ಪಲಿ ತೊಡಿಸೋ ಚಮ್ಮಾರ‌ರು, ಮಡಿಕೆ ಕುಡಿಕೆ ಕೊಡಿಸೋ ಕುಂಬಾರರು, ಕಬ್ಬಿಣ ತಟ್ಟೋ ಕಮ್ಮಾರರು, ಬಟ್ಟೆ ತೊಡಿಸೋ ನೇಕಾರರು, ಬಟ್ಟೆ ತೊಳೆಯೋ ಮಡಿವಾಳರು, ಕಲ್ಲು ಕೆತ್ತೋ ವಿಶ್ವಕರ್ಮರು, ಕೇಶ ವಿನ್ಯಾಸದ ಕ್ಷೌರಿಕರು, ರುಚಿಯಾದ ಅಡುಗೆ ಮಾಡುವ ಬಾಣಸಿಗರು, ಮೀನು ಹಿಡಿಯೋ ಬೆಸ್ತರು, ಮರಗೆಲಸ ಮಾಡೋ ಬಡಿಗರು, ಚಿನ್ನ ಬೆಳ್ಳಿ ಕಾಯಕದ ಅಕ್ಕಸಾಲಿಗರು, ಬುಟ್ಟಿ ಹೆಣೆಯೋ ಮೇದರು ರಾಜ್ಯ ಕೇಂದ್ರ ಹಾಗೂ ಖಾಸಗಿ ನೌಕರರನ್ನು ಸೇರಿ ದುಡಿಯುವ ಸಮಸ್ತರು ಕಾರ್ಮಿಕರು.

ಕಾಯಕವೇ ಕೈಲಾಸ ಅಂತಾ ನಂಬಿ ಕಾಯಕ ಮಾಡುತ್ತಿರೋ ಕಾಯಕಯೋಗಿಗಳಿಗೆ,

ಕಾಯಕವೇ ದೇವರೆಂದು, ದಣಿದರು ದುಡಿಯುವುದ ಬಿಡದ ಕಾಯಕ ಧಣಿಗಳಿಗೆ,

ಕೈಲಾಗದಿದ್ದರು ಕಷ್ಟಪಟ್ಟು ದುಡಿದು ಬದುಕುತ್ತಿರುವ ಸ್ವಾಭಿಮಾನಿಗಳಿಗೆ,

ಇಳಿ ವಯಸ್ಸಲ್ಲೂ ಎಳೆ ವಯಸ್ಸಿನವರಂತೆ ಕಾಯಕ ಮಾಡುತ್ತಿರುವ ಹಿರಿಯ ಜೀವಗಳಿಗೆ ಕಾರ್ಮಿಕ ದಿನಾಚರಣೆ ಶುಭಾಶಯಗಳು.

*ದಣಿದರು ಸರಿ ದುಡಿದು ತಿನ್ನೋಣ, ಹಸಿದಿದ್ದಿದ್ದರು ಸರಿ ಕಸಿಯದೇ ಬದುಕೋಣ.*

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*


Share