MP – ಫೋಕಸ್-ಕ್ಯಾನ್ಸರ್ ನಿರ್ವಹಣೆ ಮತ್ತು ಜಾಗೃತಿ : ಮಣಿಪಾಲ್ ಹಾಸ್ಪೆಟಲ್ಸ್ ಬೆಂಗಳೂರು

457
Share

ಕ್ಯಾನ್ಸರ್ ನಿರ್ವಹಣೆ ಮತ್ತು ಜಾಗೃತಿ  :   ಮಣಿಪಾಲ್ ಹಾಸ್ಪೆಟಲ್ಸ್ ಬೆಂಗಳೂರು ವತಿಯಿಂದ  ಕ್ಯಾನ್ಸರ್‌ ನಿರ್ವಹಣೆ ಮತ್ತು ಜಾಗೃತಿ ಕುರಿತು ನೇರ ಕಾರ್ಯಕ್ರಮ ಆಯೋಜಿಸಲಾಗಿತ್ತು . ಭಾರತ ಸೇರಿದಂತೆ ಜಗತ್ತಿನಾದ್ಯಂತ ಸಾವು ಹಾಗೂ ಅಂಗವೈಕಲ್ಯಕ್ಕೆ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ . ಭಾರತದ ರಾಷ್ಟ್ರೀಯ ಕ್ಯಾನ್ಸರ್‌ ನೋಂದಣಿ ಕಾರ್ಯಕ್ರಮದ ಮೂಲಕ ಪ್ರಕಟಗೊಂಡಿರುವ ವರದಿಯೊಂದರ ಪ್ರಕಾರ ಮಂದಿ ಭಾರತೀಯರ ಪೈಕಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವಿದೆ ಎಂದು ಹೇಳಲಾಗಿದೆ . ಈ ನಡುವೆ 2020 ರಲ್ಲಿ . ಅಂದರೆ ಒಂದೇ ವರ್ಷದಲ್ಲಿ ಭಾರತದಲ್ಲಿ 17.3 ಲಕ್ಷ ಹೊಸ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗಿದ್ದು , 8,8 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ . ಸ್ತನ , ಶ್ವಾಸಕೋಶ ಮತ್ತು ಗರ್ಭಕಂಠ ( ಸೆರ್ವಿಕ್ಸ್ ) ಕ್ಯಾನ್ಸರ್‌ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ . ಕುಳಿತಲ್ಲೇ ಕೆಲಸ ಮಾಡುವ ಜಡ ಜೀವನಶೈಲಿ , ಅನಾರೋಗ್ಯದಿಂದ ಕೂಡಿರುವ ಆಹಾರ ಪದ್ಧತಿ , ಸಂಭಾವ್ಯ ಕ್ಯಾನ್ಸರ್ ಸೇರಿದಂತೆ ಇತರೆ ಎಲ್ಲ ರೀತಿಯ ಅನುವಂಶಿಕ ಹಾಗೂ ಪರಿಸರಕ್ಕೆ ಸಂಬಂಧಿಸಿದ ಅಂಶಗಳಿಂದಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತಿದೆ . ಈ ಅಪಾಯಯದ ಸಂದರ್ಭಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಪರಿನಾಮಕಾರಿಯಾಗಿ ತಡೆಯಬಹುದಾಗಿದೆ . ಸಾರ್ವಜನಿಕರಲ್ಲಿ ಕ್ಯಾನ್ಸರ್‌ ಕುರಿತು ಅರಿವು ಮೂಡಿಸಿ , ಸೀನಿಂಗ್ ಪರೀಕ್ಷೆಗಳನ್ನು ನಡೆಸಿ ಅಪಾಯವನ್ನು ಗುರುತಿಸಿ , ನಿರ್ವಹಿಸುವ ಜೊತೆಗೆ , ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಕ್ಯಾನ್ಸರ್ ತಡೆಯಬಹುದಾಗಿದೆ ಎಂಬುದನ್ನು ನೇರ ಸಂವಾದದ ಸಂದರ್ಭದಲ್ಲಿ , ಕ್ಯಾನ್ಸರ್‌ ಜಾಗೃತಿಯ ಮಹತ್ವ ಮತ್ತು ಜಾಗೃತಿಯ ಮೂಲಕ ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್‌ ಇರುವುದನ್ನು ಪತ್ತೆಹಚ್ಚಲು ಹೇಗೆ ಸಾಧ್ಯವಾಗುತ್ತದೆ ಂಬುದನ್ನು ತಜ್ಞರ ತಂಡವು ತಿಳಿಸಿಕೊಟ್ಟಿತು . ಉದಾಹರಣೆಗೆ , ದೊಡ್ಡ ಕರುಳಿನ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರನ್ನು ಪತ್ತೆಹಚ್ಚಿದರೆ ಅವರು ಬದುಕುಳಿಯುವ ಸಾಧ್ಯತೆ ಶೇ .91 ರಷ್ಟಿರುತ್ತದೆ . ಆದರೆ ಕ್ಯಾನ್ಸರ್‌ ಇರುವುದು ತಡವಾಗಿ ಪತ್ತೆಯಾದರೆ ರೋಗಿಯು ಬದುಕುಳಿಯುವ ಸಾಧ್ಯತೆ ಕೇವಲ ಶೇ .11 ರಷ್ಟಿರುತ್ತದೆ . ಹೀಗಾಗಿ ರೋಗಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸುವುದು ಸರಿಯಲ್ಲ ಎಂದು ತಜ್ಞರು ತಿಳಿಸಿದರು . ಇದೇ ವೇಳೆ ಕ್ಯಾನ್ಸರ್ ಚಿಕಿತ್ಸೆಗೆ ಇರುವ ಆಯ್ಕೆಗಳ ಕುರಿತು ಸಹ ನೇರ ಸಂವಾದದಲ್ಲಿ ಚರ್ಚಿಸಲಾಯಿತು . ಕ್ಯಾನ್ಸರ್ ನಿರ್ವಹಣೆಗೆ ಇರುವ ಸುಧಾರಿತ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಆಯ್ಕೆಗಳ ಕುರಿತು ತಜ್ಞರು ಮಾಹಿತಿ ನೀಡಿದರು . ಜೊತೆಗೆ ಮುಂದುವರಿದ ತಂತ್ರಜ್ಞಾನದಿಂದ ಮಾತ್ರ ಸಾಧ್ಯವಿರುವ ವೈಯಕೀಕರಿಸಿದ ಕ್ಯಾನ್ಸರ್ ಚಿಕಿತ್ಸೆ ಮೇಲೆಯೂ ಸಂವಾದದಲ್ಲಿ ಬೆಳಕುಚೆಲ್ಲಲಾಯಿತು . ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಮಣಿಪಾಲ್ ಆಸ್ಪತ್ರೆಗಳ ಸಮೂಹವು ಅಡ್ವಾನ್ಸ್ಡ್ ಕ್ಯಾನ್ಸರ್‌ನ ಪತ್ತೆಹಚ್ಚುವಿಕೆ ಹಾಗೂ ನಿರ್ವಹಣೆಗಾಗಿ ಸ್ಟೇಟ್ – ಆಫ್ – ದ – ಆರ್ಟ್ ರೋಬೋಟಿಕ್ ಸರ್ಜರೀಸ್ ಮತ್ತು ಹೈಪರ್‌ಥರ್ಮಿಕ್ ಇಟಾಪೆರಿಟೋನಿಯಲ್ ಕಿಮೋ
: ಥೆರಪಿ ( ಹೆಚ್‌ಐಪಿಎಸಿ ) ಮತ್ತು ಪ್ರೆಷರೈಸ್ ಇಂಟ್ರಾವೆರಿಟೋನಿಯಲ್‌ ಏರೋಸೋಲ್ ಕಿಮೋಥೆರಪಿ ( ವಿಐಪಿಎಸಿ ) ತಂತ್ರಜ್ಞಾನಗಳನ್ನು ಪರಿಚಯಿಸಿದೆ . “ ಸಾಂಪ್ರದಾಯಿಕ ಕ್ಯಾನ್ಸರ್ ಚಿಕಿತ್ಸಾ ವಿಧಾನವು ಜಟಿಲತೆಯಿಂದ ಕೂಡಿರುವ ಜೊತೆಗೆ ರೋಗಿಗಳ ಸ್ನೇಹಿಯೂ ಅಲ್ಲ . ಇಲ್ಲಿ ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಚೇತರಿಕೆಗೆ 3 ತಿಂಗಳು ತಗುಲಲಿದ್ದು , ರೋಗಿಯು ಸರ್ಜರಿಯ ಬಳಿಕ 10 ರಿಂದ 12 ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಬೇಕಾಗುತ್ತದೆ . ಈ ವಿಷಯದಲ್ಲಿ ನಾವು ರೋಬೋಟಿಕ್‌ ಮಿನಿಮಲಿ ಇನ್ವೆನ್ಸಿವ್ ಸರ್ಜರಿಗಳಿಗೆ ಧನ್ಯವಾದ ಹೇಳಲೇಬೇಕು . ರೋಬೋಟಿಕ್ ಮಿನಿಮಲಿ ಇನ್ವೆನ್ಸಿವ್ ಸರ್ಜರಿ ನಡೆಸಿದ ಮರುದಿನವೇ ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕಳಿಸಿಕೊಡಬಹುದು . ರೋಗಿ ಕೂಡ ಬಹು ಬೇಗ ಸ್ವಚ್ಛಸ್ಥಿತಿಗೆ ಮರಳುತ್ತಾರೆ ಅಥವಾ ಚೇತರಿಸಿಕೊಳ್ಳುತ್ತಾರೆ . ಈ ಸರ್ಜರಿಯಲ್ಲಿ ರೋಗಿಗೆ ನೋವಾಗುವುದಿಲ್ಲ . ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿಕೊಂಡರೆ ಇಲ್ಲಿ ಅಡ್ಡಪರಿಣಾಮಗಳೂ ಕಡಿಮೆ ಹಾಗೂ ರಕ್ತವನ್ನು ವರ್ಗಾಯಿಸುವ ಅಗತ್ಯವೂ ಇರುವುದಿಲ್ಲ . ಮಣಿಪಾಲ್ ಹಾಸ್ಟೆಟಲ್‌ಗೆ ಹೆಚ್‌ಐಪಿಎಸಿ ಮತ್ತು ಪಿಐಪಿಎಸಿ ತಂತ್ರಜ್ಞಾನಗಳನ್ನು ಜರ್ಮನಿಯಿಂದ ತರಿಸಿಕೊಳ್ಳಲಾಗಿದೆ . ತೀವ್ರ ಸ್ವರೂಪದ ಕ್ಯಾನ್ಸರ್ , ಮೆಟಾಸ್ಟಾಟಿಕ್ ಮತ್ತು ವಾಸಿಮಾಡಲು ಸಾಧ್ಯವಿಲ್ಲದೇ ಇರುವ ಅಂಡಾಶಯದ ಕ್ಯಾನ್ಸರ್ , ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್‌ಗಳಿಗೂ ಸಹ ಪರಿಣಾಮಕಾರಿ ಚಿಕಿತ್ಸೆ ನೀಡಲು ಈ ತಂತ್ರಜ್ಞಾನಗಳು ನೆರವಾಗುತ್ತವೆ , ” ಎಂಶ ಮಣಿಪಾಲ್ ಹೆಲ್ ಎಂಟರೈಸ್ ಪ್ರೈವೇಟ್ ಲಿಮಿಟೆಡ್ ( ಎಂಎಎಚ್ ಇಪಿಎಲ್ ) ನ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥರು , ಮಣಿಪಾಲ್ ಹಾಸ್ಪಿಟಲ್‌ಗಳು ಬೆಂಗಳೂರಿನ ಮಣಿಪಾಲ್ ಕಾಂಪ್ರಹೆನ್ಸಿವ್‌ ಸೆಂಟರ್‌ನ ಹೆಚ್ ಒಡಿ ಮತ್ತು ಸರ್ಜಿಕಲ್ ಮತ್ತು ಗೈನಿಕ್ ಸಲಹಾಕಾರರು . ಓಂಕೋ ಮತ್ತು ರೋಬೋಟಿಕ್ ಸರ್ಜನ್ , ಹೆಚ್‌ಐಪಿಇಸಿ ಸೂಪರ್ ಸ್ಪೆಷಲಿಸ್ಟ್ , ಪ್ರೊ ಡಾ . ಸೋಮಶೇಖರ್ ಎಸ್.ಪಿ , ಅವರು ಮಾಹಿತಿ ನೀಡಿದರು . ಮಣಿಪಾಲ್ ಆಸ್ಪತ್ರೆಗಳಲ್ಲಿ ಇರುವ ಸುಧಾರಿತ ತಂತ್ರಜ್ಞಾನಗಳು ಕೇವಲ ಕ್ಯಾನ್ಸರ್ ಚಿಕಿತ್ಸೆಗೆ ಸೀಮಿತವಾಗಿರದೆ , ಕ್ಯಾನ್ಸರ್ ಚಿಕಿತ್ಸೆ ನಂತರದ ಅಡ್ಡಪರಿಣಾಮಗಳ ನಿರ್ವಹಣೆ ಮತ್ತು ಸರ್ಜರಿ ನಂತರದ ಒಟ್ಟಾರೆ ಜೀವಹನದ ಗುಣಮಟ್ಟ ಸುಧಾರಣೆಗೂ ನೆರವಾಗುತ್ತವೆ . ಜೊತೆಗೆ ಅನುಭವಿ . ನುರಿತ ಪ್ಲಾಸ್ಟಿಕ್ , ಮರುನಿರ್ಮಾಣ ಹಾಗೂ ಕಾಸ್ಕೆಟಿಕ್ ಸರ್ಜನ್‌ಗಳನ್ನು ಆಸ್ಪತ್ರೆಯು ಒಳಗೊಂಡಿದೆ . ಇವರು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗಳ ಅಂಗಾಂಗಗಳ ಮರುನಿರ್ಮಾಣಕ್ಕೆ ನೆರವಾಗುತ್ತಾರೆ . “ ಲಿಂಫಡೀಮಾದಿಂದ ಬಳಲುತ್ತಿರುವ ರೋಗಿಗಳಿಗೆ , ಸ್ಪೆಷಲೈಸ್ ಮೈಕ್ರೋಸ್ಕೋಪ್ ಮತ್ತು ಸುಪ್ರಾ – ಮೈಕ್ರೋ ಸರ್ಜರಿ ಬಳಸಿಕಂಡು ಚಿಕಿತ್ಸೆ ನೀಡಿ ಗುಣಮುಖರಾಗಲು ಮಣಿಪಾಲ್ ಹಾಸ್ಪಿಟಲ್ ನೆರವಾಗುತ್ತಿದೆ . ನಮ್ಮ ಆಸ್ಪತ್ರೆಗಳಲ್ಲಿ ಬಳಸುವ ಸುಧಾರಿತ ತಂತ್ರಜ್ಞಾನಗಳು ಭಾರತದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿವೆ . ” ಎಂದು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗಳ ಪ್ಲಾಸಿಕ್ , ಮರುನಿರ್ಮಾಣ ಮತ್ತು ಕಾಸೆಟಿಕ್ ಸರ್ಜರಿ ವಿಭಾಗದ ಸಲಹಾಕಾರರಾಗಿರುವ ಡಾ . ಅಶೋಕ್ ಬಿ.ಸಿ. ಅವರು ಹೇಳಿದರು .

: ಮಣಿಪಾಲ್ ಆಸ್ಪತ್ರೆಯ ಕುರಿತು : ಹೆಸರಾಂತ ಮಣಿಪಾಲ್ ಆಸ್ಪತ್ರೆಯು ಭಾರತದಾದ್ಯಂತ ತನ್ನ ಜಾಲವನ್ನು ಹೊಂದಿದ್ದು , ವಾರ್ಷಿಕ 20 ಲಕ್ಷ ( 2 ಮಿಲಿಯನ್ ) ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ . ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಮಲ್ಟಿ ಸ್ಪೆಷ್ಯಾಲಿಟಿ ಸೌಲಭ್ಯವನ್ನು ಸಾಮಾನ್ಯರಿಗೂ ಕೈಗೆಟುಕುವಂತೆ ಮಾಡುವ ಗುರಿ ಹೊಂದಲಾಗಿದೆ . ಬೆಂಗಳೂರಿನಲ್ಲಿ ತನ್ನ ಪ್ರತಿಷ್ಠಿತ ಶಾಖೆಯನ್ನು ಹೊಂದಿದ್ದು , ದೇಶದಾದ್ಯಂತ 7 ತೃತೀಯ ಆರೈಕೆ ಕೇಂದ್ರ , 5 ದ್ವಿತೀಯ ಆರೈಕೆ ಕೇಂದ್ರ , 2 ಪ್ರಾಥಮಿಕ ಆರೈಕೆ ಕ್ಲಿನಿಕ್‌ಗಳನ್ನು ಭಾರತ ಮತ್ತು ವಿದೇಶಗಳಲ್ಲಿ ಹೊಂದಿದೆ . ಮಣಿಪಾಲ್ ಆಸ್ಪತ್ರೆಯು ಇಂದು 15 ಆಸ್ಪತ್ರೆಗಳಲ್ಲಿ 5,900 ಹಾಸಿಗೆಗಳನ್ನು ನಿರ್ವಹಣೆ ಮಾಡುತ್ತಿದೆ . ಜಗತ್ತಿನಾದ್ಯಂತ ಮಣಿಪಾಲ್ ಆಸ್ಪತ್ರೆಯು ರೋಗಿಗೆ ಸಮಗ್ರ ಚಿಕಿತ್ಸೆಯನ್ನು ನೀಡುತ್ತಿದೆ . ಲಾಗೋಸ್ , ನೈಜೀರಿಯಾಗಳಲ್ಲಿ ಮಣಿಪಾಲ್ ಆಸ್ಪತ್ರೆಯ ಒನ್ ಡೇ ಕೇರ್ ಕ್ಲಿನಿಕ್‌ಗಳು ಇವೆ . ಕ್ಲಿನಿಕಲ್ ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನೈತಿಕತೆ ಕಾಯ್ದುಕೊಂಡಿರುವುದಕ್ಕೆ ಎಎಎಚ್‌ಆರ್‌ಪಿಪಿಯಿಂದ ಮಾನ್ಯತೆ ಪಡೆದಿರುವ ಭಾರತದ ಮೊದಲ ಆಸ್ಪತ್ರೆ ಮಣಿಪಾಲ್ ಆಗಿದೆ . ಜೊತೆಗೆ ಎನ್‌ಎಬಿಎಲ್ , ಎನ್ಎಬಿಎಚ್ ಮತ್ತು ಐಎಸ್ಒನಿಂದ ಪ್ರಮಾಣೀಕರಿಸಲಾಗಿದೆ . ಮಣಿಪಾಲ್ ಆಸ್ಪತ್ರೆಯು ಭಾರತದಲ್ಲಿ ಗೌರವಾನ್ವಿತ ಆಸ್ಪತ್ರೆಯಾಗಿದ್ದು , ಗ್ರಾಹಕ ಸಮೀಕ್ಷೆ ಪ್ರಕಾರ ರೋಗಿಗಳು ಶಿಫಾರಸ್ಸು ಮಾಡುವ ಆಸ್ಪತ್ರೆ ನಮ್ಮದಾಗಿದೆ . ಹೆಚ್ಚಿನ ಮಾಹಿತಿಗೆ , ದಯವಿಟ್ಟು ಸಂಪರ್ಕಿಸಿ : ಕಾನ್ಸೆಪ್ಟ್ ಪಬ್ಲಿಕ್ ರಿಲೇಷನ್ಸ್ : ಮಣಿಪಾಲ್ ಆಸ್ಪತ್ರೆಗಳು ಹಳೆಯ ವಿಮಾನ ನಿಲ್ದಾಣ ರಸ್ತೆ : ರಾವನ್ ರಾಘವ್ @ 7795213926 ಶ್ರೀನಾಥ್ ಕೆ ಮೆನನ್ @ 9633401602


Share