MP- ವಿಶೇಷ ಕಾರ್ಯಕ್ರಮ-ಅಂತರಾಷ್ಟ್ರೀಯ ಯೋಗ ದಿನಾಚರಣೆ -78ರ ವೆಟರನ್ ಯೋಗ – ವೀಕ್ಷಿಸಲೇಕು

756
Share

 

 

 

ಮೈಸೂರು ನಗರದ ವಿಶೇಷ ಶಿಕ್ಷಕಿ, ಅವಧೂತ ದತ್ತಪೀಠದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಯೋಗಪಟು
ವಯೋವೃದ್ದೆ ಸುಭದ್ರಮ್ಮ ಅವರು ತಮ್ಮ ಇಳಿವಯಸ್ಸಿನಲ್ಲಿ ಯೋಗಾಸನ ಮಾಡಿ ತೋರಿಸಿಕೊಟ್ಟಿದ್ದಾರೆ. 78 ವರ್ಷದ ಯೋಗಪಟು ಶ್ರೀಮತಿ ಸುಭದ್ರಮ್ಮ ಅವರು ಮೈಸೂರು ನಗರದ ರಮಾ ವಿಲಾಸ ರಸ್ತೆಯಲ್ಲಿ ವಾಸವಾಗಿದ್ದು ಮೈಸೂರು ಅವಧೂತ ದತ್ತಪೀಠದ ಶ್ರೀಶ್ರೀಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಸ್ವಾಮೀಜಿ ಅವರಿಂದ ಯೋಗ ತರಬೇತಿಯನ್ನು ಪಡೆದುಕೊಂಡು ಯೋಗ ತರಗತಿ ನಡೆಸುತ್ತಿದ್ದಾರೆ. ಜೊತೆಗೆ ಆನ್ಲೈನ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ, ಅಷ್ಟೇ ಅಲ್ಲದೆ ಈಗಿನ ಕಾಲದ ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ಅಥವ ದಿನಪೂರ್ತಿ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರಿಗೆ ವಿಶೇಷವಾದ ಎಕ್ಸಸೈಜ್ ತಿಳಿಸಿಕೊಡಲು ಮುಂದಾಗಿದ್ದಾರೆ. ಮತ್ತೊಂದು ವಿಶೇಷವೇನೆಂದರೆ ಶ್ರೀಮತಿ ಸುಭದ್ರಮ್ಮ ಅವರು ಬೆಂಗಳೂರು ಸೇರಿದಂತೆ ಇತರ ಹಲವಾರು ಸ್ಥಳಗಳಿಗೆ ತೆರಳಿ ಯೋಗ ತರಗತಿಯನ್ನು ನಡೆಸುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ.

ಜೂನ್ ೨೧ ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆ ಯು ಘೋಷಿಸಿದೆ.
ಯೋಗವು ಭಾರತೀಯ ಮೂಲದ, ೬,೦೦೦ ವರ್ಷ ಹಳೆಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015 ರಲ್ಲಿ ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ ೨೧ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದ ಪರಿಣಾಮ ಅಂದಿನಿಂದ ಪ್ರತೀ ವರ್ಷದ ಜೂನ್ ೨೧ ರಂದು ವಿವಿಧ ಧ್ಯೇಯವಾಕ್ಯ ಗಳಿಂದ ಯೋಗ ದಿನವನ್ನು ಆಚರಿಸಲಾಗುತ್ತಿದೆ .

ಈ ದಿನ ಭಾರತದಾದ್ಯಂತ ಪ್ರಮುಖ ನಗರಗಳ ಕೇಂದ್ರ ಸ್ಥಳಗಳಲ್ಲಿ ಯೋಗಾಸನಪ್ರದರ್ಶನ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಪಸ್ತುತದಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ವೈರಸ್​ ಹರಡುವಿಕೆಯ ನಿಯಂತ್ರಣಕ್ಕಾಗಿ ಅದೆಷ್ಟೋ ಪ್ರಯತ್ನಗಳು ದಿನದಿಂದ ದಿನಕ್ಕೆ ನಡೆಯುತ್ತಲೇ ಇದೆ. ಹೀಗಿರುವಾಗ ಜನರು ತಮ್ಮ ಆರೋಗ್ಯದ ಸುರಕ್ಷತೆಯ ಕುರಿತಾಗಿ ಗಮನ ಹರಿಸಲೇ ಬೇಕಾಗಿದೆ.
ಯೋಗ ಅಭ್ಯಾಸದಿಂದ, ರೋಗಗಳ ಹರಡುವಿಕೆ ಹಾಗೂ ಅವುಗಳು ದೇಹದ ಮೇಲೆ ಬೀರುವ ಪರಿಣಾಮಗಳಿಂದ ದೂರವಿರಬಹುದು. ಪ್ರತಿನಿತ್ಯ ಯೋಗ ಮಾಡುವ ಅಭ್ಯಾಸವನ್ನು ರೂಢಿಯಲ್ಲಿ ಇಟ್ಟುಕೊಳ್ಳಿ.

*ಯೋಗಕ್ಕಾಗಿ ಯೋಗ – ಧ್ಯೇಯ ವಾಕ್ಯ*

ಹಿಂದಿನ ವರ್ಷ ‘ನಿಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಯೋಗ’ ಎಂಬ ಧ್ಯೇಯ ವಾಕ್ಯದ ಮೂಲಕ ಯೋಗ ದಿನವನ್ನು ಆಚರಿಸಲಾಯಿತು. ಆರೋಗ್ಯದಲ್ಲಿ ಚೇತರಿಕೆಯ ಜನತೆಗೆ ಜೀವನದಲ್ಲಿ ಆರಾಮವಾಗಿರಲು ಭರವಸೆಯನ್ನು ನೀಡುತ್ತದೆ.
ಅದೇ ರೀತಿ ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನ 2021 ಧ್ಯೇಯ ವಾಕ್ಯ *‘ಯೋಗಕ್ಕಾಗಿ ಯೋಗ’*.ಎಂಬುದಾಗಿದೆ .
ಪ್ರಸ್ತುತದಲ್ಲಿನ ಸಾಂಕ್ರಾಮಿಕ ಸಮಯದಲ್ಲಿ ಯೋಗವು ಮಾನಸಿಕ ಸದೃಢತೆಯನ್ನು ತಂದುಕೊಡುತ್ತದೆ.
ಸಾಂಕ್ರಾಮಿಕದಿಂದ ಬಳಲಿದವರಿಗೆ ಖಿನ್ನತೆ, ಸುಸ್ತು ಈಗಲೂ ಇದೆ. ಹಾಗಿರುವಾಗ ‘ಯೋಗಕ್ಷೇಮಕ್ಕಾಗಿ ಯೋಗ’ ಎಂಬ ಉದ್ದೇಶದೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಕೊವಿಡ್​-19 ಸಾಂಕ್ರಾಮಿಕದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಮ್ಮ ದೇಹ ಸಹಕರಿಸಬೇಕು. ವೈರಸ್​ ವಿರುದ್ಧ ಹೋರಾಡಬೇಕು. ಹೀಗಿರುವಾಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿು ಹೆಚ್ಚಿಸಿಕೊಳ್ಳಲು ಯೋಗ ಭಂಗಿಗಳು ಸಹಾಯ ಮಾಡುತ್ತವೆ. ಪ್ರತಿನಿತ್ಯವು ಕೂಡಾ ಯೋಗ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ.

*ಜೂನ್ 21ರ ವಿಶೇಷ*

ಜೂ.21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

 


Share