MP- ಸಂಪಾದಕೀಯ (ಮೈಸೂರು ಮೇಯರ್ ಚುನಾವಣೆ)

414
Share

ಕೊನೆ ಗಳಿಗೆಯವರೆಗೂ ಏನನ್ನೂ ಊಹಿಸಲಾಗದ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದ ಮೈಸೂರು ಮೇಯರ್ ಉಪಮೇಯರ್ ಚುನಾವಣೆ ಅನುಕ್ರಮವಾಗಿ ಜೆಡಿಎಸ್ ಕಾಂಗ್ರೆಸ್ ಪಾಲಾದ ನಾಟಕೀಯ ಬೆಳವಣಿಗೆ ನಡೆದೇ ಹೋಯಿತು .ಇಂದು ಬೆಳಿಗ್ಗೆ ವರೆಗೆ ಕಾಂಗ್ರೆಸ್ಸನ್ನು ವಿರೋಧಿಸುತ್ತಲೇ ಬಂದಂಥ ಕುಮಾರಸ್ವಾಮಿ ಅವರ ನಡೆ ಕುತೂಹಲ ಮೂಡಿಸಿದ್ದು ನಿಜ . ಕಳೆದು ಹೋದ ವರ್ಷಗಳ ಮೈತ್ರಿಯ ಇತಿಹಾಸ ಅವಲೋಕಿಸಿದಾಗ ಜನತಾದಳ ಎಂದೂ ಕೂಡ ಬಿಜೆಪಿ ಯವರನ್ನೂ ಹತ್ತಿರ ಸೇರಿಸಿರಲಿಲ್ಲ .ಜನತಾ ದಳವು ಒಂದುಪಕ್ಷವೇ ಅಲ್ಲ ಎಂದು ಮೂದಲಿಸುತ್ತಿದ್ದ ಸಿದ್ಧರಾಮಯ್ಯನವರನ್ನು ನಿನ್ನೆಯಷ್ಟೇ ಪ್ರಬಲ ವಾಗಿ ವಿರೋಧಿಸುವ ಹೇಳಿಕೆಗಳನ್ನು ನೀಡುತ್ತಿದ್ದ ಕುಮಾರಸ್ವಾಮಿ ರವರು ತಮ್ಮ ಶಕ್ತಿ ಏನೆಂಬುದನ್ನು ಸಾಬೀತುಪಡಿಸುವೆವು ಎಂದು ಹೇಳುತ್ತಲೇ ಬಂದಿದ್ದರು. ಹೀಗಾಗಿ ಕುಮಾರಸ್ವಾಮಿ ಅವರು ಈ ಬಾರಿ ಬಿಜೆಪಿ ಸಖ್ಯ ಬೆಳೆಸುವುದು ನಿಶ್ಚಿತ ಎಂಬುದೇ ಇಂದು ಬೆಳಗ್ಗಿನ ವರೆಗೆ ಇದ್ದ ತೀರ್ಮಾನ ಆಗಿತ್ತು. ಇಂದು ಬೆಳಿಗ್ಗೆ ಕೊನೆ ಗಳಿಗೆಯಲ್ಲಿ ಎಂಟ್ರಿ ಕೊಟ್ಟ ಡಿ ಕೆ ಶಿವಕುಮಾರ್ ರವರು ಕೋಮುವಾದಿ ಪಕ್ಷ ಬಿಜೆಪಿಯನ್ನು ಹೇಗಾದರೂ ಮಾಡಿ ದೂರ ಇಡಬೇಕೆಂದು ಕುಮಾರಸ್ವಾಮಿಯೊಂದಿಗೆ ಮಾತುಕತೆ ನಡೆಸಿ ಬಿಜೆಪಿ ಗೆ ಮೇಯರ್ ಸ್ಥಾನ ತಪ್ಪಿಸಲು ಪ್ಲಾನ್ ಮುಂದಿಡುತ್ತಿದ್ದಂತೆಯೇ ಸಿದ್ಧರಾಮಯ್ಯ ಅವರು ಮೇಯರ್ ಸ್ಥಾನ ತಮ್ಮ ಪಕ್ಷಕ್ಕೆ ನೀಡುವುದಾದರೆ ಓಕೆ ಎಂದಿದ್ದರು .ಆದರೆ ಸಿದ್ದು ರವರನ್ನು ಪ್ರಬಲವಾಗಿಯೇ ವಿರೋಧಿಸುವ ಕುಮಾರಸ್ವಾಮಿ ತಮ್ಮ ಸಡಿಲಿಕೆಯನ್ನು ಬಿಟ್ಟುಕೊಡದೆ ತಮಗೆ ಮೇಯರ್ ಸ್ಥಾನ ಕೊಟ್ಟು ಉಪಮೇಯರ್ ಸ್ಥಾನ ತಾವು ಪಡೆಯಬೇಕೆಂಬ ಹಠ ಹಿಡಿದಿದ್ದರಿಂದ ಎಲ್ಲಾ ಪ್ಲಾನುಗಳು ಬುಡಮೇಲಾಯಿತು. ಸಿದ್ದು ಅಂದುಕೊಂಡಂತೆ ಶಾಂತಕುಮಾರಿ ಅವರನ್ನು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೂ ಸಹ .ಪಾಲಿಕೆ ಸದಸ್ಯರು . ಸಿದ್ದುಗೆ ಕವಡೆಕಾಸಿನ ಗೌರವವನ್ನು ನೀಡದೇ ಯಾರೊಬ್ಬರೂ ಮತ ನೀಡಲಿಲ್ಲ ಬದಲಿಗೆ ಕುಮಾರಸ್ವಾಮಿ ಕೃಪಾಪೋಷಿತ ನಾಟಕ ಮಂಡಲಿಯ ರುಕ್ಮಿಣಿ ಮಾದೇಗೌಡರವರನ್ನು ಬೆಂಬಲಿಸುವ ಮುಖಾಂತರ ಮೇಯರ್ ಸ್ಥಾನ ಬಿಟ್ಟುಕೊಟ್ಟರು.ಕಾಂಗ್ರೆಸ್ ನ ಅಫ್ತಾಬ್ ಬೇಗ್ ಉಪಮೇಯರ್ ಆಗಿ ತೃಪ್ತಿ ಗೊಂಡರು .ಇಂದಿನ ಈ ಚುನಾವಣೆಯಲ್ಲಿ ಕಂಡುಬರುವುದೇನೆಂದರೆ ಸಿದ್ದರಾಮಯ್ಯ ರವರಿಗೆ ತಮ್ಮ ಪಕ್ಷದಿಂದ ಆಗಲಿ ಸಮೀಪದ ವಿರೋಧ ಪಕ್ಷ ಜನತಾ ದಳದಿಂದ ಆಗಲಿ ಕನಿಷ್ಠ ಬೆಲೆಯೂ ಇಲ್ಲ ಎಂಬುದನ್ನು ಬಲಪಡಿಸಿದೆ.ಡಿಕೆಶಿ ಮೇಲುಗೈ ಸಾಧಿಸಿದ್ದಾರೆ ಎನ್ನುವಂತೆ ಕಂಡುಬಂದಿದೆ.ಕುಮಾರಸ್ವಾಮಿ ರವರು ಮೇಲ್ನೋಟಕ್ಕೆ ಬಿಜೆಪಿಯೊಂದಿಗೇ ಇರುವ ರೀತಿ ನಾಟಕ ಮಾಡಿ ಒಳಒಳಗೆ ಸಿದ್ಧರಾಮಯ್ಯ ಪ್ರಭಾವ ಇರದ ಕಾಂಗ್ರೆಸ್ ನೊಂದಿಗೆ ಮತ್ತೊಂದು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವಂತೆ ಕಂಡು ಬರುತ್ತಿದೆ.ಒಟ್ಟಿನಲ್ಲಿ ಕೆಲವೇ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುವ ಜನತಾದಳವು ರಾಜ್ಯಮಟ್ಟದಲ್ಲಾಗಲೀ ಸ್ಥಳೀಯ ಮಟ್ಟದಲ್ಲಾಗಲಿ ಹಿಡಿತ ಸಾಧಿಸುವುದರಲ್ಲಿ ಅವಕಾಶವಾದಿಗಳು ಎಂಬುದನ್ನು ಸಾಬೀತು ಪಡಿಸಿದ್ದಾರೆ.ತಂತ್ರಗಾರಿಕೆ ಏನೇ ಆಗಿರಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಇಪ್ಪತ್ತ ಮೂರನೇ ಮೇಯರ್ ಆಗಿರುವ ಶ್ರೀಮತಿ ರುಕ್ಮಿಣಿ ಮಾದೇಗೌಡ ಹಾಗೂ ಉಪಮೇಯರ್ ಅಫ್ತಾಬ್ ಬೇಗ್ ರವರು ಒಳ್ಳೆಯ ಆಡಳಿತ ನೀಡುವ ಮುಖಾಂತರ ಮೈಸೂರಿನ ಘನತೆಯನ್ನು ಹೆಚ್ಚಿಸಲಿ. ಶುಭಮಸ್ತು .


Share