MP- ಸಂಪಾದಕೀಯ, ಸಾರ್ವಜನಿಕರೇ ಕರೋನಾ 2ನೇ ಅಲೆಗೆ ಹೊಣೆಯಾಗದಿರಿ

597
Share

ಕರ್ನಾಟಕ ರಾಜ್ಯದಲ್ಲಿ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದಾದರೂ ಅದಕ್ಕೆ ಅವಕಾಶ ನೀಡುವುದಿಲ್ಲ ,ಜನರು ಸಹಕಾರ ನೀಡದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ , ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಾದ್ದು ಎಲ್ಲರ ಕರ್ತವ್ಯ . ಉಲ್ಬಣ ಗೊಳ್ಳುವ ಲಕ್ಷಣಗಳು ಕಂಡು ಬಂದಿದ್ದರೂ ಮತ್ತೆ ಲಾಕ್ ಡೌನ್ ಅಥವಾ ಕರ್ಫ್ಯೂ ಜಾರಿ ಮಾಡುವ ಚಿಂತನೆ ಸರಕಾರಕ್ಕಿಲ್ಲ ,ಹೀಗೆ ಮಾಡಿದರೆ ಈಗಾಗಲೇ ಸಂಕಷ್ಟದಲ್ಲಿರುವ ವ್ಯಾಪಾರ ವಹಿವಾಟಿಗೆ ಮತ್ತಷ್ಟು ತೊಂದರೆಯಾಗುತ್ತದೆ ಆದ್ದರಿಂದ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ,ಒಂದೆಡೆ ಹೆಚ್ಚು ಜನ ಸೇರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೀಗೆ ಹೇಳಿದವರು ಬೇರೆ ಯಾರೂ ಇಲ್ಲ ರಾಜ್ಯದ ಮುಖ್ಯಮಂತ್ರಿಗಳು. ಪರಿಸ್ಥಿತಿಯ ಈ ಸಂಬಂಧ ಇಂದು ಸಂಜೆ ತಜ್ಞರ ,ವೈದ್ಯರ ಸಭೆಯನ್ನು ಕರೆದಿದ್ದು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆಯ ದಿನ ಪತ್ರಿಕಾ ಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಕಳೆದ 2ದಿನಗಳ ಹಿಂದೆ ಮೈಸೂರು ಪತ್ರಿಕೆಯು ಎಂಪಿ ಟಾಕ್ ನಲ್ಲಿ ಇದೇ ವಿಷಯವಾಗಿ ಚರ್ಚೆ ಕೈಗೊಂಡಿತ್ತು.ಇದನ್ನು ಮತ್ತೆ ಮತ್ತೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಕರೋನದ ಎರಡನೇ ಅಲೆ ಉಲ್ಬಣಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಬರುತ್ತಿದೆ. ನೆರೆ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳಲ್ಲಿ 24 ಗಂಟೆಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗುತ್ತಿದೆ . ಇದು ಅಪಾಯಕಾರಿಯೂ ಆತಂಕಕಾರಿಯೂ ಹೌದು. ಸ್ವತಃ ಮುಖ್ಯಮಂತ್ರಿಗಳೇ ಎಚ್ಚರಿಕೆ ನೀಡಿ ಲಾಕ್ ಡೌನ್ ಹೇರುವುದಿಲ್ಲ ಎಂದು ಹೇಳಿದರೂ ಅದರ ಮರ್ಮ “ನಮಗೆ ಇಷ್ಟವಿಲ್ಲ ಆದರೆ ಪರಿಸ್ಥಿತಿ ಹದಗೆಟ್ಟರೆ ಏನೂ ಮಾಡಲಾಗುವುದಿಲ್ಲ ಎಂದು ಪರೋಕ್ಷವಾಗಿ ಲಾಕ್ ಡೌನ್ ಹೇರುವ ಸುಳಿವು ನೀಡಿದ್ದಾರೆ ಎಂದೇ ಹೇಳಬಹುದು . ತಕ್ಷಣದಿಂದಲೇ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಕೋವಿದ್ 19 ರ ನಿಯಮಾವಳಿಗಳನ್ನು ಪಾಲಿಸದಿದ್ದರೆ ನಮ್ಮ ಹಳ್ಳ ನಾವೇ ತೊಡಿಕೊಳ್ಳಬೇಕಾಗುತ್ತದೆ. – ಮತ್ತೊಮ್ಮೆ ಮಗದೊಮ್ಮೆ ಹೇಳುತ್ತಿದ್ದೇವೆ ಸಾರ್ವಜನಿಕರೇ ಎಚ್ಚೆತ್ತುಕೊಳ್ಳಿ *ಮಾಸ್ಕ್ ಧರಿಸಲೇಬೇಕು ಅಂತರ ಕಾಪಾಡಲೇ ಬೇಕು ಎಂಬುದನ್ನು ಮರೆಯದಿರಿ*


Share