MP-TALK : ಹೆಚ್ಚಳ -ಎಚ್ಚರ

922
Share

 

ರಾಜ್ಯದಾದ್ಯಂತ ತೀವ್ರ ಆತಂಕ ಸೃಷ್ಟಿಸುತ್ತಿರುವ ಕರೋನಾ ಅಲೆಯ ಬಗ್ಗೆ ಇಂದಿನ ಎಂಪಿ ಟಾಪ್ ನಲ್ಲಿ “ಹೆಚ್ಚಳ- ಎಚ್ಚರ” ಎಂಬ ಶೀರ್ಷಿಕೆಯಡಿ ವಾರದ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿ 1798 ಆ್ಯಕ್ಟಿವ್ ಕೇಸುಗಳು ವರದಿಯಾಗಿದೆ. ಬೆಂಗಳೂರು ಒಂದರಲ್ಲೇ 1186 ಪ್ರಕರಣಗಳು ಅದರಲ್ಲೂ ನಗರ ಪ್ರದೇಶದಲ್ಲಿ ಹೆಚ್ಚಳ ಕಂಡುಬಂದಿರುವುದು ನೆರೆಯ ನಗರಗಳಾದ ತುಮಕೂರು, ಮೈಸೂರು, ಮುಂತಾದ ಸ್ಥಳಗಳಲ್ಲಿ ತೀವ್ರ ಆತಂಕ ಸೃಷ್ಟಿಸುತ್ತಿದೆ .ರಾಜ್ಯದ ಬಹುತೇಕ ಗಡಿ ಪ್ರದೇಶಗಳಲ್ಲಿ ಅದರಲ್ಲೂ ತುಮಕೂರು 43 ದಕ್ಷಿಣ ಕನ್ನಡ 52 ಮೈಸೂರು 59 ಉಡುಪಿ 66 ಕಲ್ಬುರ್ಗಿ 61 ವಿಜಯನಗರ 51 ಹಾಸನ 32 ಬೀದರ್ 49 ಚಿಕ್ಕಬಳ್ಳಾಪುರ 23 ಪ್ರಕರಣಗಳು ವರದಿಯಾಗಿದ್ದು ,ಇದು ತೀವ್ರ ಆತಂಕಕ್ಕೆ ಎಡೆಮಾಡಿದೆ. ವಿದೇಶದ ಕೆಲವು ನಗರಗಳಲ್ಲಿ ಎರಡನೇ ಅಲೆ ಮೀರಿ ಮೂರನೇ ಅಲೆಕಡೆ ಹೊರಟಿದೆ ಎಂದು ಹೇಳಲಾಗುತ್ತಿದೆ, ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಎರಡನೇ ಅಲೆಯ ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಬಹಳ ಖಿನ್ನರಾಗಿ ಆತಂಕ ವ್ಯಕ್ತಪಡಿಸಿದ್ದು ಇದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಕೂಡ ಅಷ್ಟೇ ರೀತಿಯಲ್ಲಿ ತಮ್ಮ ಆತಂಕ ,ಬೇಸರ ವ್ಯಕ್ತಪಡಿಸಿದ್ದು ರಾಜ್ಯ ಸರಕಾರಕ್ಕೆ ಪೂರಕ ಸಾಥ್ ಕೊಡುತ್ತಿದ್ದಾರೆ . ರಾಜ್ಯದ ಜನತೆಗೆ ಮತ್ತೆ ಮತ್ತೆ ಹೇಳುತ್ತಿರುವಂತೆ ಎಚ್ಚರಿಕೆ ವಹಿಸದಿದ್ದರೆ. ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ತಜ್ಞರ ವರದಿಗಳು ಬಹಳ ಆತಂಕ ಸೃಷ್ಟಿಸುತ್ತಿದ್ದು ಜನತೆ ಕೋವಿದ್ ನಿಯಮಾವಳಿಗಳನ್ನು ಅನುಸರಿಸುವುದು ಒಂದೇ ಇದಕ್ಕೆ ಪರಿಹಾರ ….ಹೀಗೆ ಇಂದಿನ ಮಾತು ಮುಂದುವರಿಯುತ್ತದೆ.


Share