ಅಮೃತ್ ಯೋಜನೆಯಡಿ ನಿರ್ಮಿಸಲಾದ ಜಲಸಂಗ್ರಹಾಗಾರ ಲೋಕಾರ್ಪಣೆ

293
Share

 

*ಅಮೃತ್ ಯೋಜನೆಯಡಿ ನಿರ್ಮಿಸಲಾದ ಜಲಸಂಗ್ರಹಾಗಾರ ಲೋಕಾರ್ಪಣೆ ಮಾಡಿದ ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಬೈರತಿ ಬಸವರಾಜ್*

ಮೈಸೂರು,):
ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೇಂದ್ರ ಪುರಷ್ಕೃತ ಅಮೃತ್ ಯೋಜನೆಯಡಿ ವಿಜಯನಗರ 1ನೇ ಹಂತದಲ್ಲಿ ನಿರ್ಮಿಸಿರುವ ಬೃಹತ್ ಜಲ ಸಂಗ್ರಹಾಗಾರವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಅವರು ಶುಕ್ರವಾರ ಉದ್ಘಾಟಿಸಿದರು.

ಇದು 13 ದಶ ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಾಗಾರವಾಗಿದೆ. ಇಲ್ಲಿ 4 ಎಂಜಿ ಮತ್ತು 6 ಎಂಜಿ ಸಾಮರ್ಥ್ಯದ ಟ್ಯಾಂಕ್‌ಗಳು ನಿರ್ಮಾಣಗೊಂಡಿವೆ. ಒಟ್ಟು 156 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಮಾಡಲಾಗಿದೆ. ಇದರಲ್ಲಿ ಶೇ. 50 ರಷ್ಟು ಕೇಂದ್ರ ಸರ್ಕಾರ, ಶೇ. 20ರಷ್ಟು ರಾಜ್ಯ ಸರ್ಕಾರ ಮತ್ತು ಶೇ.30 ರಷ್ಟು ನಗರ ಪಾಲಿಕೆ ಅನುದಾನ ಒದಗಿಸಿದೆ.

ಈ ಸಂದರ್ಭದಲ್ಲಿ ಶಾಸಕರಾದ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ವಾಹಕ ನಿರ್ದೇಶಕ ಟಿ.ಎಚ್.ಎಂ. ಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಮಂಡಳಿ ಮುಖ್ಯ ಇಂಜಿನಿಯರ್ ಎಸ್‌.ಬಿ.ಸಿದ್ದನಾಯಕ್, ಎಇಇ ಆಸೀಫ್ ಇಕ್ಬಾಲ್ ಖಲೀಲ್, ಮುಡಾ ಆಯುಕ್ತ ಡಿ.ಬಿ.ನಟೇಶ್, ಮತ್ತಿತರರು ಉಪಸ್ಥಿತರಿದ್ದರು.


Share