MP ಕಲಾಪರಂಪರೆ –  ಪಂಡಿತ್ ರಮೇಶ್ ಕೊಲುಕುಂದ ಮುಂದುವರಿದ  ಸಂಚಿಕೆ ಭಾಗ 2… .16-7-21

469
Share

 

 

 

 

MP ಕಲಾಪರಂಪರೆ –  ಪಂಡಿತ್ ರಮೇಶ್ ಕೊಲುಕುಂದ ಮುಂದುವರಿದ  ಸಂಚಿಕೆ ಭಾಗ 2… .ಗುರುಭ್ಯೋನಮಃ :ಹರಿಃ ಓಂ!.

ಸಮಸ್ತ ವೀಕ್ಷಕ ಕಲಾ ಪೋಷಕರಿಗೆ ಮೈಸೂರು ಕಲಾಪರಂಪರೆಯ ವತಿಯಿಂದ ಹಾರ್ದಿಕ ಸ್ವಾಗತಗಳು…
ಇಂದಿನ ಶೀರ್ಷಿಕೆ ಹಿಂದೂಸ್ತಾನಿ ಸಂಗೀತ ಮೈಸೂರು ಕಲಾ ಪರಂಪರೆ ಯಲ್ಲಿ ಪಂಡಿತ್ :ರಮೇಶ್ ಕುಲು ಕುಂದ ರವರು ಅದ್ಬುತ ಹಿಂದೂಸ್ತಾನಿ ಗಾಯಕರು. ವೀಕ್ಷಕರೇ ನಾವು ಇಂದಿನ ಆವ್ರುತಿ ಎರೆಡು ಕಂತುಗಳಲ್ಲಿ ಪ್ರಸ್ತುತ ಪಡೆಸುತ್ತಿದ್ದೇವೆ ಕಾರಣ ಇಂತಹ ಅದ್ಭುತ ಕಲಾವಿದರುಗಳಿಗೆ ಅವರ ಸಾಧನೆಯ ಪರಿಚಯ ಹಾಗೂ ಗಾಯನ ಪ್ರಸ್ತುತಿಗೆ ಕಾಲಾವಕಾಶ ಕೊಡಬೇಕಾಗಿದೆ ಹಾಗಾಗಿ ನಿಮ್ಮೆಲ್ಲರ ಸಹಕಾರ ಬೇಕು.
ಬಂಧುಗಳೇ ರಮೇಶ್ ಕೊಲುಕುಂದ ರವರು ಮೂಲತಃ ಉತ್ತರ ಕರ್ನಾಟಕದವರು, ಶ್ರೀಯುತರು ತಮ್ಮ 12ನೇ ವಯಸ್ಸಿಗೆ ಕಲಾಭ್ಯಾಸ ಪ್ರಾರಂಭಿಸಿ, ಸರಿಸುಮಾರು 30ವರ್ಷಗಳಿಂದ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುತ್ತಾರೆ. ಇವರ ತಂದೆ ಹುಸೇನಪ್ಪ ರಂಗಭೂಮಿ ಕಲಾವಿದರು, ಗುರುಗಳಾದ ಅಮರೇಶ ಗವಯ್ ಗಳ ಆಶ್ರಮ ದಲ್ಲಿ ಇವರ ಸಂಗೀತ ಅಭ್ಯಾಸ ಮಾಡಿ ನಂತರದಲ್ಲಿ, ಪದ್ಮಭೂಷಣ ಪುಟ್ಟರಾಜ ಗವಯ್ ಗಳ ಬಳಿ ಸಂಗೀತ ಅಭ್ಯಾಸ ಪೂರ್ಣ ಗೊಳಿಸಿದರು. ರಮೇಶ್ ರವರಿಗೆ ನೃತ್ಯ ಅಕೇಡೆಮಿ ಇಂದ ಯುವ ಚೇತನ ಎಂಬ ಬಿರುದು ಬಂದಿದೆ.
ಶ್ರೀಯುತರು ಆಕಾಶ ವಾಣಿ ಯ B ದರ್ಜೆ ಕಲಾವಿದರು.
ಮೈಸೂರು ಕಲಾಪರಂಪರೆಯ, ಹಿಂದೂಸ್ತಾನಿ ಸಂಚಿಕೆಯ 26ನೇ ಆವ್ರುತಿಯಲ್ಲಿ ಭಾಗ 1.
ಇದೆ ಸಂಚಿಕೆ ಭಾಗ 2… ಮುಂದುವರಿಯುವುದು.
ಪಂಡಿತ್ ರಮೇಶ್ ಕೊಲುಕುಂದ ರವರಿಗೆ ನೀವು ಸಂಪರ್ಕಿಸಬೇಕಾದ phone no.9964180891.
ಇದು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ಮತ್ತು ಮೈಸೂರು ಪತ್ರಿಕೆಯ ಕೊಡುಗೆ.
ಧನ್ಯವಾದಗಳು.
C. R. ರಾಘವೇಂದ್ರ ಪ್ರಸಾದ್.
9880279791.

 


Share