ಆರ್‌ಎಸ್ಎಸ್‌ ದೂಷಿಸಬೇಡಿ:ಎಚ್ ಜಿ ಗಿರಿಧರ್

449
Share

 

*ಆರ್‌ಎಸ್ಎಸ್‌ ದೂಷಿಸಬೇಡಿ:ಎಚ್ ಜಿ ಗಿರಿಧರ್*

ರಾಜಕೀಯ ಉದ್ದೇಶದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂಷಿಸುತ್ತಿರುವುದು ಸರಿಯಲ್ಲ ಎಂದು ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್ ಹೇಳಿದರು.

ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಮತ ರಾಜಕೀಯಕ್ಕಾಗಿ ದೂಷಿಸಲಾಗುತ್ತಿದೆ. ಡಾ. ಹೆಡಗೇವಾರ್ ದೂರದೃಷ್ಟಿಯಿಂದ ಸಂಘವನ್ನು ಸ್ಥಾಪಿಸಿ ಭವಿಷ್ಯದಲ್ಲಿ ಭಾರತವು ವಿಶ್ವಗುರು ಆಗುವುದಕ್ಕೆ ಮುನ್ನುಡಿ ಬರೆದಿದ್ದಾರೆ. ಸಂಘದ ಕಾರ್ಯಕರ್ತರು ಜಾತಿ, ಮತ, ಭೇದವನ್ನು ತೊರೆದು ದೇಶಕ್ಕಾಗಿ ಜೀವನವನ್ನೇ ಅರ್ಪಸಿದ್ದಾರೆ. ಆರ್‌ಎಸ್‌ಎಸ್‌ ನರೇಂದ್ರ ಮೋದಿಯಂತಹ ನಾಯಕರನ್ನು ನೀಡಿದೆ. ದುರ್ಘಟನೆ, ಪ್ರಕೃತಿ ವಿಕೋಪಗಳು ನಡೆದಾಗ ಮುಂಚೂಣಿಯಲ್ಲಿ ನಿಂತು ಜನರಿಗೆ ನೆರವಿನ ಹಸ್ತ ಚಾಚಿದೆ. ಸಂಘದಲ್ಲಿ ಎಂದಿಗೂ ದೇಶ ಮೊದಲು ಎಂಬ ಶಿಕ್ಷಣ ದೊರೆಯುತ್ತದೆ. ಜಾತೀಯತೆಗಿಂತ ಪ್ರಪಂಚದಲ್ಲಿ ಮತ್ತೊಂದು ಮಹಾ ಪಾಪವಿಲ್ಲ ಎಂಬುದು ಸಂಘದ ಮೊದಲ ಸಿದ್ಧಾಂತ. ಇದರಿಂದಲೇ ಸ್ವಯಂ ಸೇವಕರು ಸೃಷ್ಟಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿಗರು ಟೀಕಿಸುತ್ತಿರುವುದು ಸರಿಯಲ್ಲ. ಅವರೆಲ್ಲರ ಟೀಕೆಗಳು ಅಲ್ಪಸಂಖ್ಯಾತರ ಮತವನ್ನು ಓಲೈಕೆ ಮಾಡುವುದಕ್ಕಾಗಿದೆ. ಆದ್ದರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂಷಿಸುವುದನ್ನು ಬಿಟ್ಟು ದೇಶದ ಅಭಿವೃದ್ಧಿಯತ್ತ ಚಿಂತಿಸಲಿ’ ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

-ಎಚ್ ಜಿ ಗಿರಿಧರ್
ಪ್ರಧಾನ ಕಾರ್ಯದರ್ಶಿ
ಮೈಸೂರು ನಗರ ಬಿಜೆಪಿ


Share