ಈಗ ನೋಟಿನ ಮೇಲೆ ಫೋಟೋ ಮುದ್ರಣ ರಾಜಕೀಯ.

144
Share

ದೇಶದ ಆರ್ಥಿಕ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಡಲು ಮಹಾತ್ಮಾಗಾಂಧಿ ಫೋಟೋ ವಿನಂತೆ ಲಕ್ಷ್ಮಿ ಹಾಗೂ ಗಣೇಶ ದೇವರುಗಳ ಫೋಟೋಗಳನ್ನು ಮುದ್ರಿಸಬೇಕೆಂದು ನಿನ್ನೆಯಷ್ಟೇ ಎಎಪಿ ಮುಖಂಡ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಧಾನಮಂತ್ರಿ ನರೇಂದ್ರ ಮೋದಿ ಗೆ ಆಗ್ರಹಿಸಿದರು. ನಂತರ ಇದೀಗ ಭಾರತದಾದ್ಯಂತ ಹೊಸದೊಂದು ರಾಜಕೀಯ ವಾತಾವರಣ ಮೂಡುತ್ತಿದೆ. ಎಐಸಿಸಿಯ ಮನೀಷ್ ಪಾಂಡೆ ರವರು ಡಾಕ್ಟರ್ ಅಂಬೇಡ್ಕರ್ ರವರ ಚಿತ್ರ 1ಭಾಗದಲ್ಲಿ ಮುದ್ರಿಸಬೇಕೆಂದು ಕರೆ ನೀಡಿದರೆ,ಭಾರತೀಯ ಜನತಾ ಪಕ್ಷದ ವಕ್ತಾರ ರಾಮ್ ಕದಮ್ ರವರು ಬಾಬಾಸಾಹೇಬ್ ಅಂಬೇಡ್ಕರ್ ಶಿವಾಜಿ ವಿನಾಯಕ ದಾಮೋದರ್ ಸಾವರ್ಕರ್ ರವರ ಚಿತ್ರಗಳನ್ನು ಮುದ್ರಿಸಬೇಕೆಂದು ಆಗ್ರಹಿಸಲು ಪ್ರಾರಂಭಿಸಿದ್ದಾರೆ..
ದಿನಕ್ಕೊಬ್ಬರು ಬೇರೆ ಬೇರೆ ರೀತಿಯಲ್ಲಿ ಪೈಪೋಟಿ ಕರೆ ನೀಡುತ್ತಿರುವುದರಿಂದ
ಈಗ ಕ್ರೇಜಿವಾಲರು ಕರೆ ‘ಫೋಟೊ ರಾಜಕೀಯ’ ದಲ್ಲಿ ಮುಂದುವರೆಯುತ್ತಿದೆ.1ವೇಳೆ ಕೇಂದ್ರ ಸರ್ಕಾರ ಈ ರೀತಿಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿದ್ದೆ ಆದರೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೆ ಇನ್ನಿಲ್ಲದ ಅವಮಾನ ಮಾಡಿದಂತಾಗುತ್ತದೆ ಎಂದು ಕೆಲ ರಾಜಕೀಯ ಪಂಡಿತರ ವ್ಯಾಖ್ಯಾನವಾಗಿದೆ .


Share